Wednesday, December 3, 2025

ಸತ್ಯ | ನ್ಯಾಯ |ಧರ್ಮ

ಸಂಚಾರ್ ಸಾಥಿ ಆ್ಯಪ್ ವಿವಾದ: ಮೊಬೈಲ್ ಫೋನ್‌ಗಳಲ್ಲಿ ಕಡ್ಡಾಯ ಪೂರ್ವ-ಅಳವಡಿಕೆ ಆದೇಶ ಹಿಂಪಡೆದ ಸರ್ಕಾರ

ಕೇಂದ್ರ ಸರ್ಕಾರವು ಮೊಬೈಲ್ ಫೋನ್‌ಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಕಡ್ಡಾಯವಾಗಿ ಪೂರ್ವ-ಅಳವಡಿಕೆ (pre-installation) ಮಾಡಬೇಕು ಎಂಬ ಆದೇಶವನ್ನು ಬುಧವಾರದಂದು ಹಿಂಪಡೆದಿದೆ.

ಈ ಹಿಂದೆ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಲೋಕಸಭೆಯಲ್ಲಿ ಮಾತನಾಡುತ್ತಾ, ಸಂಚಾರ್ ಸಾಥಿ ಸುರಕ್ಷತಾ ಅಪ್ಲಿಕೇಶನ್‌ನಿಂದ ಬೇಹುಗಾರಿಕೆ (snooping) ಸಾಧ್ಯವಿಲ್ಲ ಮತ್ತು ಅದು ನಡೆಯುವುದೂ ಇಲ್ಲ (“na snooping sambhav hai, na snooping hoga”) ಎಂದು ಪ್ರಶ್ನೋತ್ತರ ಅವಧಿಯಲ್ಲಿ ಸ್ಪಷ್ಟಪಡಿಸಿದ್ದರು.

ಕೇವಲ ಒಂದೇ ದಿನದಲ್ಲಿ ಆ್ಯಪ್‌ನ ಸ್ವಯಂಪ್ರೇರಿತ ಡೌನ್‌ಲೋಡ್‌ಗಳಲ್ಲಿ 10 ಪಟ್ಟು ಹೆಚ್ಚಳ ಕಂಡುಬಂದ ಹಿನ್ನೆಲೆಯಲ್ಲಿ ಸಂವಹನ ಇಲಾಖೆ (DoT) ಯು ಈ ಆದೇಶವನ್ನು ಹಿಂಪಡೆಯುವುದಾಗಿ ಘೋಷಿಸಿದೆ.

ದೂರ ಸಂಪರ್ಕ ಇಲಾಖೆಯು (DoT) ಹೇಳಿಕೆಯಲ್ಲಿ ಹೀಗೆ ತಿಳಿಸಿದೆ: “ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಆ್ಯಪ್ ಅಳವಡಿಕೆಯನ್ನು ಕಡ್ಡಾಯಗೊಳಿಸುವ ಆದೇಶವು ಈ ಪ್ರಕ್ರಿಯೆಯನ್ನು ವೇಗಗೊಳಿಸಲು ಮತ್ತು ಕಡಿಮೆ ಅರಿವುಳ್ಳ ನಾಗರಿಕರಿಗೆ ಆ್ಯಪ್ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶ ಹೊಂದಿತ್ತು.”

“ಕಳೆದ ಒಂದೇ ದಿನದಲ್ಲಿ, 6 ಲಕ್ಷ ನಾಗರಿಕರು ಆ್ಯಪ್ ಡೌನ್‌ಲೋಡ್‌ಗಾಗಿ ನೋಂದಾಯಿಸಿಕೊಂಡಿದ್ದಾರೆ. ಇದು ಅದರ ಬಳಕೆಯಲ್ಲಿ 10 ಪಟ್ಟು ಹೆಚ್ಚಳವಾಗಿದೆ. ಸಂಚಾರ್ ಸಾಥಿಯ ಹೆಚ್ಚುತ್ತಿರುವ ಸ್ವೀಕಾರವನ್ನು ಗಮನದಲ್ಲಿಟ್ಟುಕೊಂಡು, ಮೊಬೈಲ್ ತಯಾರಕರಿಗೆ ಪೂರ್ವ-ಅಳವಡಿಕೆಯನ್ನು ಕಡ್ಡಾಯಗೊಳಿಸದಿರಲು ಸರ್ಕಾರ ನಿರ್ಧರಿಸಿದೆ.”

Related Articles

ಇತ್ತೀಚಿನ ಸುದ್ದಿಗಳು

You cannot copy content of this page