Monday, January 12, 2026

ಸತ್ಯ | ನ್ಯಾಯ |ಧರ್ಮ

ಪುಷ್ಪ 2| ಅವಧಿ ಪೂರ್ವ ಫ್ಯಾನ್ಸ್‌ ಶೋಗಳಿಗೆ ತಡೆ, ಹೆಚ್ಚಿನ ಟಿಕೆಟ್ ಬೆಲೆ ವಸೂಲಿಗೂ ನಿಷೇಧ ಹೇರಿದ ಸರ್ಕಾರ

ಬೆಂಗಳೂರು: ಪುಷ್ಪ ಚಿತ್ರದ 2ನೇ ಭಾಗ ಬಿಡುಗಡೆಗೆ ಸಿದ್ಧವಾಗಿದ್ದು, ಈಗಾಗಲೇ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿರುವ ಚಿತ್ರದ ಪೂರ್ವಭಾವಿ ಪ್ರದರ್ಶನಗಳನ್ನು ನಿಷೇಧಿಸಿ ಬೆಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಆದೇಶವನ್ನು ಹೊರಡಿಸಿದೆ. ಅದೇ ರೀತಿ ಚಿತ್ರಕ್ಕೆ ಮನಬಂಂದಂತೆ ಟಿಕೆಟ್‌ ದರ ವಿಧಿಸುತ್ತಿರುವ ಚಿತ್ರಮಂದಿರಗಳ ಮೇಲೆ ಕ್ರಮ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ.

ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಅಲ್ಲು ಅರ್ಜುನ್‌ ಮಾಡಿದ್ದ ಭಾಷಣವೊಂದು ಇತ್ತೀಚೆಗೆ ವೈರಲ್‌ ಆಗಿದ್ದು, ಅದು ಕನ್ನಡಿಗರನ್ನು ಕೆರಳಿಸಿದೆ. ತಮಿಳುನಾಡಿನಲ್ಲಿ ತಮ್ಮ ಪುಷ್ಪ ಚಿತ್ರದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ಅಲ್ಲು ಅರ್ಜುನ್‌ “ನಾವು ಎಲ್ಲಿರುತ್ತೇವೆಯೋ ಅಲ್ಲಿನ ಭಾಷೆಯನ್ನು ಮಾತನಾಡಬೇಕು. ಆಂಧ್ರದಲ್ಲಿರುವಾಗ ತೆಲುಗು, ತಮಿಳುನಾಡಿಲ್ಲಿರುವಾಗ ತಮಿಳು ಮಾತನಾಡಬೇಕು” ಎಂದು ಹೇಳಿದ್ದರು.

ಆದರೆ ಕಳೆದ ಬಾರಿ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಅಲ್ಲು ಅರ್ಜುನ್‌ ತನಗೆ ಕನ್ನಡ ಬರುವುದಿಲ್ಲ ಕ್ಷಮಿಸಿ ಎಂದು ನಂತರ ಬೇರೆ ಭಾಷೆಯಲ್ಲಿ ಮಾತನಾಡಿದ್ದರು. ಇದೆರಡೂ ಸಂದರ್ಭಗಳ ವಿಡಿಯೋ ವೈರಲ್‌ ಆದ ಕಾರಣ ಕನ್ನಡ ಅಭಿಮಾನಿಗಳಿಗೆ ಅಲ್ಲು ಅರ್ಜುನ್‌ ಮೇಲ ಸಿಟ್ಟು ಬಂದಿತ್ತು.

ಕೊನೆಯ ಕ್ಷಣದಲ್ಲಿ ಅಲ್ಲು ಅರ್ಜುನ್‌ ತನ್ನ ಬೆಂಗಳೂರಿನ ಕಾರ್ಯಕ್ರಮವನ್ನೇ ಕ್ಯಾನ್ಸಲ್‌ ಮಾಡಿದ್ದರು.

ಇದೀಗ ಅವರ ಚಿತ್ರದ ಅಭಿಮಾನಿಗಳಿಗೆ ಬೆಂಗಳೂರು ಜಿಲ್ಲಾಡಳಿತ ಶಾಕ್‌ ನೀಡಿದ್ದು, ಎಲ್ಲಾ ಬೆಳಗಿನ ಆರು ಗಂಟೆಗೂ ಮೊದಲಿನ ಎಲ್ಲಾ ಫ್ಯಾನ್ ಶೋಗಳನ್ನು ಕ್ಯಾನ್ಸಲ್‌ ಮಾಡಿ ಅದು ಆದೇಶ ಹೊರಡಿಸಿದೆ. ಜೊತೆಗೆ ಅಧಿಕ ಟಿಕೆಟ್‌ ದರ ವಿಧಿಸದಂತೆಯೂ ಆದೇಶ ಹೊರಡಿಸಿದೆ.
ಕರ್ನಾಟಕ ಚಲನಚಿತ್ರ ನಿರ್ಮಾಕರ ಸಂಘವು ಈ ಕುರಿತಾಗಿ ದೂರು ನೀಡಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page