ಸುರತ್ಕಲ್ : ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಕಾನ ಕಟ್ಲ ಜನತಾ ಕಾಲನಿ ಇಲ್ಲಿನ ಶಾಲಾ ಭೂಮಿಯ ಅತಿಕ್ರಮಣ ಪ್ರಕರಣ ತನಿಖೆಗೆ ಒತ್ತಾಯಿಸಿ, ಸರಕಾರಿ ಶಾಲೆ ಉಳಿಸಲು ಒತ್ತಾಯಿಸಿ ಇಂದು ಡಿವೈಎಫ್ಐ ನೇತೃತ್ವದಲ್ಲಿ ಸಾರ್ವಜನಿಕ ಹಕ್ಕೊತ್ತಾಯ ಸಭೆ ಇಂದು ಶಾಲಾ ವಠಾರದಲ್ಲಿ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಮಾತನಾಡುತ್ತಾ ಬಡವರು ಸರಕಾರಿ ಶಾಲೆಯ ಬಗ್ಗೆ ಸರಕಾರಕ್ಕೆ ಇರುವ ನಿಲಕ್ಷ್ಯ ಧೋರಣೆಯೇ ಭೂಗಳ್ಳರಿಗೆ ಸಹಾಯ ಆಗುತ್ತಿದೆ. ದಾಖಲೆ ಪ್ರಕಾರ ಶಾಲೆಯ ಹೆಸರಿನಲ್ಲಿ ಇರುವ 1.60 ಎಕ್ರೆ ಭೂಮಿಯನ್ನು ಸಂರಕ್ಷಣೆ ಮಾಡಲು ಸರಕಾರ ವಿಫಲವಾಗಿದೆ ಸರಕಾರಿ ಶಾಲೆಯ ಭೂಮಿಯ ಕಬಳಿಕೆ ರಾಜಕೀಯ ಪ್ರಭಾವ ಮತ್ತು ಅಧಿಕಾರಿಗಳ ಶಾಮೀಲಾತಿ ಇಲ್ಲದೆ ಭೂ ಮಾಫಿಯಗಳಿಗೆ ಭೂ ಕಬಳಿಸಲು ಸಾಧ್ಯವಿಲ್ಲ ಎಂದ ಅವರು ಯಾವುದೇ ಕಾರಣಕ್ಕೂ ಶಾಲೆಯ ಒಂದಿಂಚು ಭೂಮಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಸರಕಾರಿ ಉಳಿಸುವ ಹೋರಾಟವನ್ನು ತೀವ್ರಗೊಳಿಸಳಿದ್ದೇವೆ ಎಂದರು.
ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷೆ ಶ್ರೀಮತಿ ವಾರಿಜ ಮಾತನಾಡಿ ಹಿರಿಯರ ಪರಿಶ್ರಮದಿಂದ ಮಂಜೂರಾದ ಶಾಲೆಯನ್ನು ಯಾವ ಬೆಲೆ ತೆತ್ತಾದರೂ ಉಳಿಸುತ್ತೇವೆ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷವೇ ಭೂ ಅತಿಕ್ರಮಣಕ್ಕೆ ಕಾರಣ ಎಂದು ಆಪಾದಿಸಿದ ಅವರು ರಾಜಕೀಯ ಭೇದ ಮರೆತು ಹೋರಾಟದಲ್ಲಿ ಕೈಜೋಡಿಸಲು ಕರೆ ನೀಡಿದರು.
ಶಾಲಾ ಹಿತೈಷಿ ಫಾರೂಕ್ ಮಾತನಾಡುತ್ತಾ ಸರಕಾರಿ ಶಾಲೆಯ ಭೂ ಕಬಳಿಕೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು. ಸರಕಾರಿ ಶಾಲೆಯ ಅಭಿವೃದ್ದಿಗೆ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಖೈರುನ್ನಿಸ ಅಧ್ಯಕ್ಷತೆ ವಹಿಸಿದ್ದರು. ಡಿವೈಎಫ್ಐ ಮುಖಂಡರಾದ ಶ್ರೀನಾಥ್ ಕುಲಾಲ್, ಬಿ.ಕೆ ಮಕ್ಸೂದ್, ಸಾದಿಕ್ ಕಿಲ್ಪಾಡಿ,ಶೈಫರ್ ಆಲಿ,ಶರೀಫ್ ಜನತಾಕಾಲನಿ 6ನೇ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಕಿಶೋರ್ ಶೆಟ್ಟಿ, ಅಸ್ಕಾಫ್ ಜನತಾ ಕಾಲನಿ, ಅಸ್ಕರ್ ಅಲಿ, ದಯಾನಂದ ಶೆಟ್ಟಿ, ಕೆ. ಪಿ ಅಬೂಬಕ್ಕರ್, ಅಮೀರ್, ಆಸೀಫ್, ಶಾಫಿ,ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಹರೀನಾಕ್ಷಿ, ಜನೆಟ್ ರೇಖಾ, ಜೋಸೆಫ್,ಮಯ್ಯದ್ದಿ, ಐ ಮೊಹಮ್ಮದ್, ಕಾನ ರಿಕ್ಷಾ ಚಾಲಕರ ಸಂಘದ ಮುಖಂಡರಾದ ಅಬ್ದುಲ್ ಬಷೀರ್, ಲಕ್ಷ್ಮೀಶ ಅಂಚನ್
ಮುಂತಾದವರು ಉಪಸ್ಥಿತರಿದ್ದರು.
ಹೋರಾಟ ಸಮಿತಿ ರಚನೆ : ಜನತಾ ಕಾಲನಿಯ ಸರಕಾರಿ ಶಾಲೆ ಮತ್ತು ಶಾಲೆಯ ಭೂಮಿ ಉಳಿಸಲಿಕ್ಕಾಗಿ “ಸರಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ” ರಚಿಸಲಾಯಿತು.
ನವೆಂಬರ್ 27ಕ್ಕೆ ಹೋರಾಟ ಸಮಿತಿ ನೇತೃತ್ವದಲ್ಲಿ ಶಾಲಾ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಧರಣಿ ನಡೆಸಲು ತೀರ್ಮಾನಿಸಲಾಯಿತು