Thursday, August 21, 2025

ಸತ್ಯ | ನ್ಯಾಯ |ಧರ್ಮ

ಮೆಟ್ರೋ ಗೋಡೆಯ ಮೇಲೆ ಕೇಜ್ರಿವಾಲ್‌ಗೆ ಬೆದರಿಕೆಯೊಡ್ಡುವ ಬರಹ: ವ್ಯಕ್ತಿ ಬಂಧನ

ದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿಕೊಂಡು ಗೋಡೆಬರಹ ಬರೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ಅಂಕಿತ್ ಗೋಯಲ್ ಎಂದು ಗುರುತಿಸಲಾಗಿದೆ.

ಮೆಟ್ರೋ ನಿಲ್ದಾಣದಲ್ಲಿ ಈ ವ್ಯಕ್ತಿ ಕೇಜ್ರಿವಾಲ್‌ಗೆ ಬೆದರಿಕೆ ಹಾಕುವ ಗೋಡೆಬರಹವನ್ನು ಬರೆದಿದ್ದ. ದೆಹಲಿ ಪೊಲೀಸ್ ಮೆಟ್ರೋ ಘಟಕವು ಎಫ್ಐಆರ್ ದಾಖಲಿಸಿದೆ.

ಆರೋಪಿಯನ್ನು ಅಂಕಿತ್ ಗೋಯಲ್ (33) ಎಂದು ಗುರುತಿಸಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿ ಗೋಡೆಯ ಮೇಲೆ ವ್ಯಕ್ತಿಯೊಬ್ಬ ಬರೆಯುತ್ತಿರುವ ದೃಶ್ಯಗಳನ್ನು ಸಿಸಿಟಿವಿ ಮೂಲಕ ಗುರುತಿಸಲಾಗಿದೆ.

ಸೋಮವಾರ ಪೊಲೀಸರು ಘಟನೆ ಕುರಿತು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ವ್ಯಕ್ತಿಯೊಬ್ಬ ಸೈನ್‌ಬೋರ್ಡ್‌ಗಳು ಮತ್ತು ಕೋಚ್‌ಗಳಲ್ಲಿ ಬರೆಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅವನು ಅದರ ಫೋಟೊಗಳನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಕೂಡಾ ಮಾಡಿದ್ದ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page