Thursday, February 5, 2026

ಸತ್ಯ | ನ್ಯಾಯ |ಧರ್ಮ

ಒಲಾ-ಉಬರ್‌ಗೆ ಸವಾಲು? : ‘ಭಾರತ್ ಟ್ಯಾಕ್ಸಿ’ಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ನವದೆಹಲಿಯಲ್ಲಿ ದೇಶದ ಮೊದಲ ಸಹಕಾರಿ ವಲಯದ ರೈಡ್-ಹೇಲಿಂಗ್ ವೇದಿಕೆ ‘ಭಾರತ್ ಟ್ಯಾಕ್ಸಿ’ಗೆ ಅಧಿಕೃತ ಚಾಲನೆ ನೀಡಿದರು.

ಮೊದಲ ಹಂತದಲ್ಲಿ ದೆಹಲಿ-ಎನ್‌ಸಿಆರ್ ಮತ್ತು ಗುಜರಾತ್‌ನಲ್ಲಿ ಸೇವೆ ಆರಂಭವಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ.

ಉದ್ಘಾಟನೆಯ ನಂತರ ಮಾತನಾಡಿದ ಅಮಿತ್ ಶಾ, “ಮೂರು ವರ್ಷಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ಹಾಗೂ ದ್ವಾರಕಾದಿಂದ ಕಾಮಾಕ್ಯವರೆಗೆ ಭಾರತ್ ಟ್ಯಾಕ್ಸಿ ಸೇವೆಯನ್ನು ದೇಶಾದ್ಯಂತ ವಿಸ್ತರಿಸಲಾಗುವುದು” ಎಂದು ಹೇಳಿದರು.

ಈ ಸಹಕಾರಿ ಮಾದರಿಯಡಿಯಲ್ಲಿ ಕಾರ್ಯನಿರ್ವಹಿಸುವ ಚಾಲಕರು ಲಾಭದ ಪಾಲನ್ನು ಪಡೆಯಲಿದ್ದು, ಇದರಿಂದ ಚಾಲಕರಿಗೆ ಆರ್ಥಿಕವಾಗಿ ನೇರ ಪ್ರಯೋಜನ ದೊರೆಯಲಿದೆ ಎಂದು ಅವರು ತಿಳಿಸಿದರು.

ಭಾರತ್ ಟ್ಯಾಕ್ಸಿ ವೇದಿಕೆಯ ಮೂಲಕ ಗ್ರಾಹಕರು ಕಾರುಗಳು, ತ್ರಿಚಕ್ರ ವಾಹನಗಳು (ಆಟೋ) ಹಾಗೂ ದ್ವಿಚಕ್ರ ವಾಹನಗಳನ್ನು ಬುಕ್ ಮಾಡಬಹುದಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, “ಈಗ ಟ್ಯಾಕ್ಸಿ ವಲಯಕ್ಕೆ ಸರ್ಕಾರ (ಸರ್ಕಾರ್) ಅಲ್ಲ, ಸಹಕಾರ (ಸಹಕಾರ್) ಅಧಿಕೃತವಾಗಿ ಪ್ರವೇಶಿಸಿದೆ. ಈ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಚಾಲಕ ತನ್ನ ಟ್ಯಾಕ್ಸಿಯ ಮಾಲೀಕರಾಗಿರುತ್ತಾರೆ. ಇದು ಕ್ರಾಂತಿಕಾರಿ ಆರ್ಥಿಕ ಪರಿವರ್ತನೆಗೆ ದಾರಿ ಮಾಡಿಕೊಡಲಿದೆ” ಎಂದು ಹೇಳಿದರು.

ಗುಜರಾತ್‌ನ ಅಮುಲ್ ಸಹಕಾರಿ ಮಾದರಿಯನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, “ಭಾರತ್ ಟ್ಯಾಕ್ಸಿ ವಿಶ್ವದಲ್ಲೇ ವಿಶಿಷ್ಟ ಸಹಕಾರಿ ಮಾದರಿಯಾಗಿದೆ. ಟ್ಯಾಕ್ಸಿಯ ಚಕ್ರಗಳು ಸಾರಥಿ ಸಮುದಾಯದ ಹಿತಕ್ಕಾಗಿ ಓಡಲಿವೆ. ಇದು ಸಹಕಾರದ ನಿಜವಾದ ಮನೋಭಾವ” ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page