Monday, June 17, 2024

ಸತ್ಯ | ನ್ಯಾಯ |ಧರ್ಮ

ಗುಜರಾತ್ ಚುನಾವಣೆ| 50 ಬೂತ್ಗಳಲ್ಲಿ ಇವಿಎಂಗಳು ಕಾರ್ಯನಿರ್ವಹಿಸುತ್ತಿಲ್ಲ: ಕಾಂಗ್ರೆಸ್ ದೂರು

ಗುಜರಾತ್‌: ಇಲ್ಲಿನ ವಿಧಾನಸಭಾ ಚುನಾವಣೆಯ ಮೊದಲ ಹಂತ ಗುರುವಾರ ಪ್ರಾರಂಭವಾದ ನಂತರ, ರಾಜ್ಯದ ಸೌರಾಷ್ಟ್ರ ಪ್ರದೇಶದಲ್ಲಿ ಹೆಚ್ಚಾಗಿ ಇರುವ ಕನಿಷ್ಠ 50 ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಕಾರ್ಯನಿರ್ವಹಿಸುತ್ತಿಲ್ಲ ಎಂದು ವಿರೋಧ ಪಕ್ಷ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ʼಇವಿಎಂಗಳು ಕಾರ್ಯನಿರ್ವಹಿಸದಿರುವ ಬಗ್ಗೆ ನಾವು ಲಿಖಿತ ದೂರನ್ನು ಸಲ್ಲಿಸಿದ್ದೇವೆ, ಹೀಗಾಗಿ ಅವುಗಳನ್ನು ಬದಲಾಯಿಸಲು ಸಾಕಷ್ಟು ಸಮಯ ತೆಗೆದುಕೊಳ್ಳಲಾಗುತ್ತಿದೆ. ಇವಿಎಂಗಳು ಕೆಲಸ ಮಾಡದ ಸ್ಥಳಗಳ ಪಟ್ಟಿಯನ್ನು ನಾವು ಸಲ್ಲಿಸಿದ್ದೇವೆ. ಈ ಸಮಸ್ಯೆ ಸುಮಾರು 50 ಮತಗಟ್ಟೆಗಳಲ್ಲಿ ಉದ್ಭವಿಸಿದ್ದು, ಅವುಗಳಲ್ಲಿ ಹೆಚ್ಚಿನವು ಜಾಮ್ ನಗರ ಮತ್ತು ರಾಜ್ಕೋಟ್ ಸೇರಿದಂತೆ ಸೌರಾಷ್ಟ್ರದಲ್ಲಿವೆ. ಇವುಗಳನ್ನು ಆದಷ್ಟುಬೇಗ ಸರಿಪಡಿಸಬೇಕು, ಇದರಿಂದ ಗರಿಷ್ಠ ಮತದಾನ ನಡೆಯಬಹುದುʼ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಅಲೋಕ್ ಶರ್ಮಾ ಹೇಳಿದ್ದಾರೆ.

‘ಎರಡನೆಯ ದೂರು ಮಾಧ್ಯಮಗಳು ಬಿಜೆಪಿಯ ದೃಶ್ಯ ಅಥವಾ ಬೈಟ್ ಗಳನ್ನು ಮತದಾರರ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ತೋರಿಸುತ್ತಿವೆ. ಇದು ಜನಾಭಿಪ್ರಾಯ ಸಮೀಕ್ಷೆಗಳು ಅಥವಾ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಸಾರ ಮಾಡುವ ಚುನಾವಣಾ ಆಯೋಗದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ’ ಎಂದು ಶರ್ಮಾ ಹೇಳಿದರು. ಇವಿಎಂಗಳನ್ನು ಸರಿಪಡಿಸುವ ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಚುನಾವಣಾ ಆಯೋಗವು ಕಾಂಗ್ರೆಸ್ ಗೆ ಭರವಸೆ ನೀಡಿದೆ ಎಂದು ಶರ್ಮಾ ತಿಳಿಸಿದ್ದಾರೆ.

ಮತದಾನದ ಆರಂಭಿಕ ಸಮಯದಲ್ಲಿ ಇವಿಎಂ ವೈಫಲ್ಯಗಳ ಬಗ್ಗೆ ಕೇಳಿದಾಗ ಉತ್ತರಿಸಿದ ಅವರು, ಗುಜರಾತ್‌ನ ಚುನಾವಣಾ ಆಯೋಗದ ಅಧಿಕಾರಿಗಳು ಡೇಟಾವನ್ನು ಸಂಗ್ರಹಿಸುತ್ತಿದ್ದು, ಅದರ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.

ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ 182 ಸ್ಥಾನಗಳ ಪೈಕಿ 89 ಸ್ಥಾನಗಳಿಗೆ ಮತದಾನ ನಡೆಯಲಿದೆ. ಎರಡನೇ ಮತ್ತು ಅಂತಿಮ ಹಂತದ ಮತದಾನವು ಡಿಸೆಂಬರ್ 5 ರ ಸೋಮವಾರದಂದು ನಿಗದಿಯಾಗಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.

Related Articles

ಇತ್ತೀಚಿನ ಸುದ್ದಿಗಳು