Tuesday, August 20, 2024

ಸತ್ಯ | ನ್ಯಾಯ |ಧರ್ಮ

ಗುಜರಾತ್ | ಪಿಯುಸಿ ಫೇಲ್‌, ನೀಟ್ ನಲ್ಲಿ ಟಾಪರ್: ಪರೀಕ್ಷಾ ಅಕ್ರಮದ ಸಾಧ್ಯತೆಯ ಆರೋಪ

ಹೊಸದಿಲ್ಲಿ: 12ನೇ ತರಗತಿ ಪರೀಕ್ಷೆಯಲ್ಲಿ ಫೇಲಾಗಿದ್ದ ಗುಜರಾತ್‌ ವಿದ್ಯಾರ್ಥಿನಿಯೊಬ್ಬಳು ನೀಟ್ ಯುಜಿ ಪರೀಕ್ಷೆಯಲ್ಲಿ 705 ಅಂಕ ಗಳಿಸಿದ್ದಾಳೆ. ಈ ವಿದ್ಯಾರ್ಥಿನಿಯ ಮಾರ್ಕ್ಸ್‌ ಕಾರ್ಡ್‌ ಗಳು ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ. ಪರೀಕ್ಷಾ ಮಂಡಳಿಯ ಅಕ್ರಮದಿಂದ ಈ ವ್ಯತ್ಯಾಸ ಆಗಿರಬಹುದು ಎಂದು ಅಂದಾಜಿಸಲಾಗಿದೆ.

The Times of India ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಅಹಮದಾಬಾದ್‌ನ ವಿದ್ಯಾರ್ಥಿನಿಯೊಬ್ಬಳ 12ನೇ ತರಗತಿಯ ಅಂಕಪಟ್ಟಿಯು, ಆಕೆಯ ಕಳಪೆ ಪ್ರದರ್ಶನಕ್ಕೆ ಸಾಕ್ಷಿ ಹೇಳುತ್ತಿದೆ. ಭೌತಶಾಸ್ತ್ರದಲ್ಲಿ 21, ರಸಾಯನ ಶಾಸ್ತ್ರದಲ್ಲಿ 31, ಜೀವಶಾಸ್ತ್ರದಲ್ಲಿ 39 ಹಾಗೂ ಇಂಗ್ಲಿಷ್‌ನಲ್ಲಿ 59 ಅಂಕಗಳನ್ನು ಮಾತ್ರ ಗಳಿಸಿರುವುದು ಆಕೆಯ ಅಂಕಪಟ್ಟಿಯಿಂದ ತಿಳಿದು ಬರುತ್ತಿದೆ.

ಆದರೆ ಈ ವಿದ್ಯಾರ್ಥಿನಿ ಆಕೆ ಮಂಡಳಿ ಪರೀಕ್ಷೆಯಲ್ಲಿ ಹಾಗೂ ನೀಟ್ ಯುಜಿ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳಲ್ಲಿನ ವ್ಯತ್ಯಾಸವು ಸಾಮಾಜಿಕ ಮಾಧ್ಯಮ ಬಳಕೆದಾರರ ಹುಬ್ಬೇರುವಂತೆ ಮಾಡಿದೆ. ಕೆಲವರು ಆಕೆ ಮಂಡಳಿ ಪರೀಕ್ಷೆಯಲ್ಲಿ ಗಳಿಸಿರುವ ಅಂಕ ಹಾಗೂ ನೀಟ್ ಯುಜಿ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ವ್ಯತ್ಯಾಸವನ್ನು ಒಂದರ ಬದಿ ಒಂದಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಆ ವಿದ್ಯಾರ್ಥಿನಿ ನೀಟ್-ಯುಜಿ ಪರೀಕ್ಷೆಯಲ್ಲಿ 720 ಅಂಕಗಳಿಗೆ ಎದುರಾಗಿ 705 ಅಂಕಗಳನ್ನು ಗಳಿಸಿದ್ದಾಳೆ. ಆ ಮೂಲಕ ಗುಜರಾತ್ ರಾಜ್ಯದ ಅಗ್ರ ಶ್ರೇಯಾಂಕಿತಳಾಗಿ ಹೊರ ಹೊಮ್ಮಿರುವುದು ಈ ಆಶ್ಚರ್ಯಕ್ಕೆ ಕಾರಣವಾಗಿದೆ.

ವಿದ್ಯಾರ್ಥಿನಿಯ ನೀಟ್ ಪರೀಕ್ಷಾ ಫಲಿತಾಂಶದಲ್ಲಿ ಆಕೆ ಭೌತಶಾಸ್ತ್ರದಲ್ಲಿ ಶೇ. 99.8, ರಸಾಯನ ಶಾಸ್ತ್ರದಲ್ಲಿ ಶೇ. 99.1 ಹಾಗೂ ಜೀವಶಾಸ್ತ್ರದಲ್ಲಿ ಶೇ. 99.1 ಅಂಕಗಳನ್ನು ಗಳಿಸುವ ಮೂಲಕ ಒಟ್ಟಾರೆಯಾಗಿ ಶೇ. 99.9 ಅಂಕ ಗಳಿಸಿರುವುದು ಕಂಡು ಬಂದಿದೆ.

ವಿಚಿತ್ರವೆಂದರೆ, ನೀಟ್-ಯುಜಿ ಪರೀಕ್ಷೆಯ ಅಂಕಗಳ ಆಧಾರದಲ್ಲಿ ಆಕೆ ಭಾರತದಲ್ಲಿನ ಯಾವುದೇ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯಬಹುದಾಗಿದ್ದರೂ, ಆಕೆ 12ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ ಪಕ್ಷ ಶೇ. 50ರಷ್ಟು ಅಂಕ ಪಡೆಯಲು ವಿಫಲಗೊಂಡಿರುವುದರಿಂದ, ಆಕೆ ವೈದ್ಯಕೀಯ ಪದವಿಗೆ ಪ್ರವೇಶ ಪಡೆಯುವಲ್ಲಿ ವಿಫಲಗೊಂಡಿದ್ದಾಳೆ.

ಇದು ಪರೀಕ್ಷೆಯಲ್ಲಿ ಅಕ್ರಮಗಳು ಜರುಗಿವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ. ಹೀಗಾಗಿ, ನೀಟ್-ಯುಜಿ ಮರು ಪರೀಕ್ಷೆ ನಡೆಸಬೇಕು ಎಂದು ಹಲವು ಸಾಮಾಜಿಕ ಬಳಕೆದಾರರು ಒತ್ತಾಯಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page