Friday, June 14, 2024

ಸತ್ಯ | ನ್ಯಾಯ |ಧರ್ಮ

ಗುಜರಾತ್‌ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ಸುಪ್ರೀಂ ಕೋರ್ಟ್‌ 

ನವದೆಹಲಿ: ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ ಅವರ ಜಾಮೀನು ಅರ್ಜಿಯ ಕುರಿತು ಸುಪ್ರೀಂ ಕೋರ್ಟ್‌ ಸೋಮವಾರ ಗುಜರಾತ್‌ ಸರ್ಕಾರದ ಪ್ರತಿಕ್ರಿಯೆಯನ್ನು ಕೋರಿ ವಿಚಾರಣೆಯನ್ನು ಆಗಸ್ಟ್‌  25ಕ್ಕೆ ಮುಂದೂಡಿತು.

2002 ರ ಗುಜರಾತ್‌ ಗಲಭೆ ಪ್ರಕರಣಗಳಲ್ಲಿ ʼಮುಗ್ಧರನ್ನುʼ ಬಂಧಿಸಲು ಸಾಕ್ಷ್ಯವನ್ನು ನಿರ್ಮಿಸಿದ ಆರೋಪದಲ್ಲಿ ಸೆಟಲ್ವಾಡ್‌ ಅವರನ್ನು ಜೂನ್‌ನಲ್ಲಿ ಬಂಧಿಸಲಾಗಿತ್ತು.

ನ್ಯಾಯಮೂರ್ತಿ ಯು.ಯು.ಲಲಿತ್‌ ನೇತೃತ್ವದ ಪೀಠ ತೀಸ್ತಾ ಅವರ ಮನವಿ ಮೇರೆಗೆ ರಾಜ್ಯಕ್ಕೆ ನೋಟಿಸ್‌ ಜಾರಿ ಮಾಡಿದೆ.

ಮನವಿಯ ಕುರಿತು ಗುಜರಾತ್‌ ಹೈಕೋರ್ಟ್‌ ಆಗಸ್ಟ್‌ 3 ರಂದು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿತ್ತಲ್ಲದೆ ಸೆಪ್ಟೆಂಬರ್‌ 19 ರಂದು ವಿಚಾರಣೆಯನ್ನು ನಿಗದಿಪಡಿಸಿತ್ತು.

Related Articles

ಇತ್ತೀಚಿನ ಸುದ್ದಿಗಳು