Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಗುಜರಾತ್‌ನಲ್ಲಿ ಕಳ್ಳಭಟ್ಟಿ ಸೇವನೆ: ಮೃತರಸಂಖ್ಯೆ 37ಕ್ಕೆ ಏರಿಕೆ, ಉಳಿದವರ ಸ್ಥಿತಿ ಚಿಂತಾಜನಕ

ಗುಜರಾತ್‌ನಲ್ಲಿ ಕಳ್ಳಭಟ್ಟಿ ಸೇವನೆ: ಮೃತರಸಂಖ್ಯೆ 37ಕ್ಕೆ ಏರಿಕೆ, ಉಳಿದವರ ಸ್ಥಿತಿ ಚಿಂತಾಜನಕ

0

ರಾಜ್‌ಕೋಟ್‌/ಅಹ್ಮದಾಬಾದ್‌ : ಗುಜರಾತ್‌ನಲ್ಲಿ ಕಳ್ಳಭಟ್ಟಿ ಸಾರಾಯಿ ಸೇವನೆಯಿಂದ 37 ಮಂದಿ ಮೃತಪಟ್ಟಿದ್ದಾರೆ. ಬೊತಾಡ್‌ ಜಿಲ್ಲೆ ಹಾಗೂ ಅಹ್ಮದಬಾದ್‌ನ ನೆರೆಯ ಗ್ರಾಮಗಳಲ್ಲಿ ಈ ದುರಂತ ಸಂಭವಿಸಿದ್ದು, ಈ ದುರಂತಕ್ಕೆ ಕಾರಣವಾಗಿರುವ ಕಳ್ಳಭಟ್ಟಿಗಳನ್ನು ಮಟ್ಟಹಾಕುವ ಸಲುವಾಗಿ ಪೊಲೀಸರು ರಾಜ್ಯಾದ್ಯಂತ ಕಾರ್ಯಾಚರಣೆ ಆರಂಭಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಭಾವನಗರ ಜಿಲ್ಲೆಯಲ್ಲಿ 73 ಮಂದಿ ಹಾಗೂ ಅಹ್ಮದಾಬಾದ್‌ನಲ್ಲಿ 15 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 11ಜನರ ಸ್ಥಿತಿ ಗಂಭೀರವಾಗಿದೆ. ಇನ್ನೂ ಬೊತಾಡ್‌ ಜಿಲ್ಲೆಯಲ್ಲಿ ಗರಿಷ್ಠ ಅಂದರೆ 24 ಮಂದಿ ಮೃತಪಟ್ಟಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಪೋಲಿಸ್‌ ಮಹಾನಿರ್ದೇಶಕ ಆಶೀಶ್‌ ಭಾಟಿಯಾ, ವಶಪಡಿಸಿಕೊಂಡಿರುವ ಅಕ್ರಮ ಮದ್ಯದಲ್ಲಿ ಶೇಕಡ 99% ರಷ್ಟು ಮೆಥೆನಾಲ್‌ ಪತ್ತೆಯಾಗಿದೆ. ಈ ರಾಸಾಯನಿಕವನ್ನು ಅಹ್ಮದಾಬಾದ್‌ನ ರಾಸಾಯನಿಕ ಕಾರ್ಖಾನೆಯಿಂದ ಗೋದಾಮು ವ್ಯವಸ್ಥಾಪಕ ಕಳವುಮಾಡಿ, ಅಕ್ರಮ ಸಾರಾಯಿ ತಯಾರಿಕರಿಗೆ ನೀಡಿದ್ದಾನೆ, ತಯಾರಿಕನು ಈ ರಾಸಾಯನಿಕಕ್ಕೆ ನೀರು ಬೆರೆಸಲಾಗಿದ್ದರಿಂದ ಇದು ಮಾರಕ ಮಿಶ್ರಣವಾಗಿದೆ, ಇದರಿಂದಲೇ ಈ ದುರಂತ ಸಂಭವಿಸಿದೆ ಎಂದು ಹೇಳಿದ್ದಾರೆ.

ಈ ಸಂಬಂಧ ಬರ್ವಾಲ, ರಾಣಪುರ ಮತ್ತು ದಂಡುಕಾ ಠಾಣೆಗಳಲ್ಲಿ ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಲಾಗಿದ್ದು. 14 ಮಂದಿಯ ವಿರುದ್ಧ ದೂರು ದಾಖಲಾಗಿದೆ. ಹಾಗೂ 8 ಮಂದಿಯನ್ನು ಬಂಧಿಸಲಾಗಿದೆ. ಈ ವಿಚಾರವಾಗಿ ಗೋದಾಮು ವ್ಯವಸ್ಥಾಪಕ ಹಾಗೂ ಪ್ರಮುಖ ಆರೋಪಿ ಜಯೇಶ್ ಖವಾಡಿಯಾ ಬಂಧಿತರಲ್ಲಿ ಸೇರಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

You cannot copy content of this page

Exit mobile version