Tuesday, July 22, 2025

ಸತ್ಯ | ನ್ಯಾಯ |ಧರ್ಮ

ಬಿಹಾರದಲ್ಲಿ ಮತ್ತೊಮ್ಮೆ ಗುಂಡಿನ ಸದ್ದು; ಉದ್ಯಮಿಯೊಬ್ಬರ ಹತ್ಯೆ

ಪಾಟ್ನಾದಲ್ಲಿ ಬಿಜೆಪಿ ನಾಯಕ ಮತ್ತು ಉದ್ಯಮಿ ಗೋಪಾಲ್ ಖೇಮ್ಕಾರನ್ನು ಅವರ ನಿವಾಸದ ಹೊರಗೆ ಗುಂಡಿಕ್ಕಿ ಕೊಂದ ಕೆಲವೇ ದಿನಗಳ ನಂತರ, ಬಿಹಾರದ ಮತ್ತೊಂದು ಜಿಲ್ಲೆ ಛಾಪ್ರಾದಲ್ಲಿ ಉದ್ಯಮಿಯೊಬ್ಬರನ್ನು ಗುಂಡಿಟ್ಟು ಕೊಲ್ಲಲಾಗಿದೆ.

ಬಿಹಾರದಲ್ಲಿ ಚುನಾವಣಾ ಕಾವು ಜೋರಾಗುತ್ತಿದ್ದಂತೆಯೇ ರಾಜಕೀಯ ನಾಯಕರ ಮೇಲಿನ ದಾಳಿ ಒಂದೊಂದಾಗಿ ದಾಖಲಾಗುತ್ತಿವೆ. ಕಳೆದ ಕೆಲವೇ ದಿನಗಳ ಅಂತರದಲ್ಲಿ ಬಿಹಾರದಲ್ಲಿ ಅಪರಾಧ ಪ್ರಕರಣಗಳಲ್ಲಿ ಹಠಾತ್ ಏರಿಕೆ ಕಂಡುಬಂದಿದ್ದು, ಹಲವಾರು ಜಿಲ್ಲೆಗಳಿಂದ ಇದೇ ರೀತಿಯ ಗುಂಡಿನ ದಾಳಿ ಘಟನೆಗಳು ವರದಿಯಾಗಿವೆ.

ಭಾನುವಾರ ಸಂಜೆ ಛಾಪ್ರಾ ಜಿಲ್ಲೆಯ ಎಕ್ಮಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ತಡರಾತ್ರಿ ದುಷ್ಕರ್ಮಿಗಳು ಹಾರ್ಡ್‌ವೇರ್ ಅಂಗಡಿ ಮಾಲಿಕನನ್ನು ಗುಂಡಿಟ್ಟು ಕೊಲೆ ಮಾಡಲಾಗಿದೆ. ಮೃತರನ್ನು ಹನ್ಸ್ರಾಜ್ಪುರ ಗ್ರಾಮದ ನಿವಾಸಿ ರೋಶನ್ ಸಿಂಗ್ ಎಂದು ಗುರುತಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page