Tuesday, October 21, 2025

ಸತ್ಯ | ನ್ಯಾಯ |ಧರ್ಮ

ಮಣಿಪುರದಲ್ಲಿ ಮತ್ತೆ ಮೊಳಗಿದೆ ಗುಂಡಿನ ಸದ್ದು !

ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದೆ. ಈ ಪ್ರದೇಶದಿಂದ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ನಾಪತ್ತೆಯಾಗಿರುವ ನಾಲ್ವರು ಆ ಪ್ರದೇಶದ ಸಮೀಪ ಶುಂಠಿ ಕೃಷಿ ಮಾಡಲು ಹೋಗಿದ್ದರು ಎನ್ನಲಾಗಿದೆ.

ವರದಿಯ ಪ್ರಕಾರ, ತೌಬಲ್ ಜಿಲ್ಲೆಯ ವಾಂಗೂ ಮತ್ತು ಬಿಷ್ಣುಪುರ ಜಿಲ್ಲೆಯ ಕುಂಬಿ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ನಡುವೆ ನಾಪತ್ತೆಯಾದವರನ್ನು ಓಯಿನಮ್ ರೋಮೆನ್ ಮೈತೇಯಿ, ಅಹಂತೇಮ್ ದಾರಾ ಮೈತೇಯಿ, ತೌಡಮ್ ಇಬೊಮ್ಚಾ ಮೈತೇಯಿ ಮತ್ತು ತೌಡಮ್ ಆನಂದ್ ಮೈತೇಯಿ ಎಂದು ಗುರುತಿಸಲಾಗಿದೆ.

ಸ್ಥಳೀಯ ವರದಿಗಳ ಪ್ರಕಾರ ಸಣ್ಣ ಬಂದೂಕುಗಳಿಂದ ಶುರುವಾಗುವ ಆರು ಸುತ್ತುಗಳ ಮಾರ್ಟರ್ ಫೈರಿಂಗ್ ಸಂಭವಿಸಿದೆ ಎಂದು ಉಲ್ಲೇಖಿಸಲಾಗಿದೆ.

ಮತ್ತೊಂದು ಘಟನೆಯಲ್ಲಿ, ಬಿಷ್ಣುಪುರ್ ಮತ್ತು ಚುರಾಚಂದ್‌ಪುರ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಬೆಟ್ಟ ಶ್ರೇಣಿಗಳ ಬಳಿ ಉರುವಲು ಸಂಗ್ರಹಿಸಲು ಹೋಗಿದ್ದ ಮಣಿಪುರದ ಕುಂಬಿ ವಿಧಾನಸಭಾ ಕ್ಷೇತ್ರದ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರ ಕಡೆಯಿಂದ ಮಾಹಿತಿ ಲಭ್ಯವಾಗಿದೆ. ನಾಪತ್ತೆಯಾದವರನ್ನು ದಾರಾ ಸಿಂಗ್, ಇಬೊಮ್ಚಾ ಸಿಂಗ್, ರೋಮೆನ್ ಸಿಂಗ್ ಮತ್ತು ಆನಂದ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಏತನ್ಮಧ್ಯೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಜನವರಿ 14 ರಂದು ಹಿಂಸಾಚಾರ ಪೀಡಿತ ಮಣಿಪುರ ರಾಜ್ಯದಿಂದ ಪ್ರಾರಂಭಿಸಲಿದ್ದಾರೆ. ಸೀಮಿತ ಸಂಖ್ಯೆಯಲ್ಲಿ ಭಾಗವಹಿಸುವ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಫ್ಲ್ಯಾಗ್‌ಆಫ್‌ಗೆ ಮಣಿಪುರ ಸರ್ಕಾರ ಅನುಮತಿ ನೀಡಿದೆ. ತಮ್ಮ ಆರಂಭಿಕ ಮನವಿಯನ್ನು ಸಿಎಂ ಸಿಂಗ್ ನಿರಾಕರಿಸಿದ ನಂತರ ಪರ್ಯಾಯ ಸ್ಥಳಗಳನ್ನು ಹುಡುಕುತ್ತಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಈ ಹಿಂದೆ ಹೇಳಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page