Tuesday, August 5, 2025

ಸತ್ಯ | ನ್ಯಾಯ |ಧರ್ಮ

ಜ್ಞಾನವಾಪಿ ಮಸೀದಿ ತೀರ್ಪು: ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧಾರ

ವಾರಾಣಾಸಿ: ಜ್ಞಾನವಾಪಿ ಮಸೀದಿದ ಆವರಣದಲ್ಲಿರುವ ‘ವ್ಯಾಸ್ ಕಾ ತೆಖಾನಾ’ದ ಒಳಗೆ ಹಿಂದೂ ಭಕ್ತರು ಪೂಜೆ ಸಲ್ಲಿಸಲು ಅವಕಾಶ ನೀಡಿ ವಾರಾಣಾಸಿ ಕೋರ್ಟ್ ಬುಧವಾರ ನೀಡಿತ್ತು. ಈ ತೀರ್ಪಿನ ವಿರುದ್ಧ ಅಲಹಾಬಾದ್ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಮುಸ್ಲಿಂ ಪರ ವಕೀಲ ಅಖ್ಲಾಕ್ ಅಹ್ಮದ್ ತಿಳಿಸಿದ್ದಾರೆ.
ವಾರಣಾಸಿ ಕೋರ್ಟ್ನ ಈಗಿನ ತೀರ್ಪು 2022ರ ಅಡ್ವೊಕೇಟ್ ಕಮಿಷನರ್ ವರದಿ, ಎಎಸ್ಐ ವರದಿ ಮತ್ತು ನಮ್ಮ ಪರವಾಗಿ 1937ರಲ್ಲಿ ನೀಡಲಾಗಿದ್ದ ತೀರ್ಪನ್ನು ಕಡೆಗಣಿಸಿದೆ. 1993ಕ್ಕೆ ಮುನ್ನ ಇಲ್ಲಿ ಪ್ರಾರ್ಥನೆ ನಡೆಯುತ್ತಿತ್ತು ಎನ್ನುವುದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷಿಗಳನ್ನು ಹಿಂದೂ ಅರ್ಜಿದಾರರು ನೀಡಿಲ್ಲ. ಆ ಸ್ಥಳದಲ್ಲಿ ಅಂಥ ಯಾವುದೇ ವಿಗ್ರಹ ಸಹ ಇಲ್ಲ” ಎಂದು ಅಹ್ಮದ್‌ ತಿಳಿಸಿದ್ದಾರೆ.
ಬಾಬರಿ ಮಸೀದಿ ಪ್ರಕರಣದಲ್ಲಿ ಕೂಡಾ ಇಂಥದ್ದೇ ದೃಷ್ಟಿಕೋನ ಹೊಂದಲಾಗಿತ್ತು. ಒಳಗೆ ಏನೂ ಇರಲಿಲ್ಲ ಎನ್ನುವುದನ್ನು ಆಯುಕ್ತರ ವರದಿ ಮತ್ತು ಎಎಸ್ಐ ವರದಿ ಹೇಳಿತ್ತು. ಈ ತೀರ್ಪಿನ ಬಗ್ಗೆ ನಮಗೆ ತೀವ್ರ ಅಸಮಾಧಾನವಾಗಿದೆ ಎಂದು ಇನ್ನೊಬ್ಬ ವಕೀಲ ಮಿಅರಾಜುದ್ದೀನ್ ಸಿದ್ದೀಖಿ ಹೇಳಿದ್ದಾರೆ.
“ಇಂಥ ಯಾವುದೇ ತೀರ್ಪನ್ನು ನಾವು ಒಪ್ಪುವುದಿಲ್ಲ. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾ ಅಧ್ಯಕ್ಷರು ಕೈಜೋಡಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ನಾವು ಕಾನೂನಾತ್ಮಕವಾಗಿ ಹೋರಾಡುತ್ತೇವೆ. ರಾಜಕೀಯ ಲಾಭ ಪಡೆಯಲು ಇದು ನಡೆಯುತ್ತಿದೆ ಎಂದು ಮಿಅರಾಜುದ್ದೀನ್ ಸಿದ್ದೀಖಿ ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page