Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಇಸ್ರೇಲಿನ ಸೇನಾ ಕಮಾಂಡರ್ ನ್ನು ಅಪಹರಿಸಿದ ಹಮಾಸ್ ; ವಿಡಿಯೋ ವೈರಲ್

ಇಸ್ರೇಲಿನ ಸೇನಾ ಕಮಾಂಡರ್ ನ್ನು ಅಪಹರಿಸಿದ ಹಮಾಸ್ ; ವಿಡಿಯೋ ವೈರಲ್

0

ಶನಿವಾರ ಮುಂಜಾನೆ ಮಧ್ಯಪ್ರಾಚ್ಯ ದೇಶದ ಮೇಲೆ ಉಗ್ರಗಾಮಿ ಸಂಘಟನೆ ದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ ಇಸ್ರೇಲ್ ಸೇನಾ ಕಮಾಂಡರ್ ನಿಮ್ರೋಡ್ ಅಲೋನಿ ಅವರನ್ನು ಹಮಾಸ್ ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.

ಹಮಾಸ್ ಹೋರಾಟಗಾರರು ಕಮಾಂಡರ್ ಆಫ್ ಡೆಪ್ತ್ ಕಾರ್ಪ್ಸ್ ಜನರಲ್ ನಿಮ್ರೋಡ್ ಅಲೋನಿಯನ್ನು ಇತರ ಇಸ್ರೇಲಿ ಮಿಲಿಟರಿ ಪಡೆಗಳು ಮತ್ತು ನೆಲೆಗಳೊಂದಿಗೆ ವಶಪಡಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ. ನಿಮ್ರೋಡ್ ಅಲೋನಿ ಅವರನ್ನು ಸೆರೆಹಿಡಿದ ನಂತರ ಜನರಲ್ ಅಲೋನಿಯ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ವೈರಲ್ ಆಗಿದೆ.

ಹಮಾಸ್ ಕಡೆಯ ಭಯೋತ್ಪಾದಕ ಗುಂಪಿನಿಂದ ಅತಿ ದೊಡ್ಡ ದಾಳಿ ಪ್ರಾರಂಭವಾದಾಗಿನಿಂದ ಈ ವರೆಗೆ 22 ಜನರು ಸಾವನ್ನಪ್ಪಿದ್ದಾರೆ ಮತ್ತು 545 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ನಡುವೆ ಇಸ್ರೇಲ್ ಪಿಎಂ ಬೆಂಜಮಿನ್ ನೆತನ್ಯಾಹು ಯುದ್ಧವನ್ನು ಘೋಷಿಸಿದ್ದಾರೆ. “ಹಮಾಸ್ ಇದುವರೆಗೂ ತಿಳಿದಿಲ್ಲದ ಬೆಲೆಯನ್ನು ಪಾವತಿಸುತ್ತದೆ” ಎಂದು ಹಮಾಸ್ ಹೋರಾಟಗಾರರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಹಮಾಸ್ ಉಗ್ರಗಾಮಿಗಳ ಬೃಹತ್ ರಾಕೆಟ್ ದಾಳಿಯಲ್ಲಿ 22 ಮಂದಿ ಬಲಿಯಾದ ನಂತರ ಇಸ್ರೇಲ್ ‘ಯುದ್ಧ’ ಘೋಷಿಸಿದೆ.

You cannot copy content of this page

Exit mobile version