Home ದೇಶ ಹರ್ಯಾಣ ಫಲಿತಾಂಶ: ಇವಿಎಮ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್

ಹರ್ಯಾಣ ಫಲಿತಾಂಶ: ಇವಿಎಮ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್

0

ಹರಿಯಾಣ ವಿಧಾನಸಭಾ ಚುನಾವಣೆಯ ಸೋಲಿನ ನಂತರ, ಇವಿಎಂಗಳ ಮೇಲೆ ಪ್ರಶ್ನೆಗಳನ್ನು ಎತ್ತಿರುವ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಇದೆಲ್ಲದರ ನಡುವೆ ರಾಜ್ಯಪಾಲ ಸತ್ಯಪಾಲ್ ಮಲಿಕ್ ಕೂಡ ಫಲಿತಾಂಶದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಅವರು ಇವಿಎಂ ಬಳಸಿ ಚುನಾವಣೆ ನಡೆಸಬಾರದು ಎಂದು ಆಗ್ರಹಿಸಿದ್ದಾರೆ.

ಇವಿಎಂ ಬಳಸಿ ನ್ಯಾಯಯುತ ಚುನಾವಣೆ ನಡೆಸಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಎಲ್ಲಿಯೂ ಇವಿಎಂ ಬಳಸಿ ಚುನಾವಣೆ ನಡೆಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಬಿಜೆಪಿಯಿಂದ ಪಾಠ ಕಲಿಯಲಿ

ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ, ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಬಿಜೆಪಿಯನ್ನು 24 ಗಂಟೆ ರಾಜಕೀಯ ಮಾಡುವ ಪಕ್ಷ ಎಂದು ಬಣ್ಣಿಸಿದ್ದಾರೆ. ಕಾಂಗ್ರೆಸ್ ಮುಂದೆ ಹೋರಾಟ ನಡೆಸಲಿ ಎಂದು ಸಲಹೆ ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸತ್ಯಪಾಲ್ ಅವರು ಜಮ್ಮು ಮತ್ತು ಕಾಶ್ಮೀರದ ಫಲಿತಾಂಶಗಳನ್ನು ನಿರೀಕ್ಷಿಸಿದಂತೆ ವಿವರಿಸಿದರೆ, ಮತ್ತೊಂದೆಡೆ ಅವರು ಹರಿಯಾಣದ ಫಲಿತಾಂಶಗಳ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು.
ತನ್ನದೇ ಕಾಂಗ್ರೆಸ್ ಲೋಪದೋಷಗಳಿಂದ ಸೋಲಿಗೆ ಬಲಿಯಾಗಿದೆ ಎಂದರು. ಭೂಪೇಂದ್ರ ಹೂಡಾ ಮತ್ತು ಕುಮಾರಿ ಸೆಲ್ಜಾ ನಡುವಿನ ಜಗಳವೂ ಸೋಲಿಗೆ ದೊಡ್ಡ ಕಾರಣ ಎಂದು ಅವರು ಹೇಳಿದರು.

ಎಲ್ಲಾ ಎಕ್ಸಿಟ್ ಪೋಲ್‌ಗಳು ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವ ಸಾಧ್ಯತೆಯನ್ನು ತೋರಿಸುತ್ತಿತ್ತು. ಆದರೆ ಫಲಿತಾಂಶಗಳು ವ್ಯತಿರಿಕ್ತವಾಗಿ ಬಂದವು. ಬಿಜೆಪಿ ಹ್ಯಾಟ್ರಿಕ್‌ ಬಾರಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಈ ಕುರಿತು ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಮಲಿಕ್ ಅವರು, ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಪಕ್ಷದ ಸೋಮಾರಿತನವೇ ಕಾರಣ ಎಂದಿದ್ದಾರೆ. ಕಾಂಗ್ರೆಸ್ ಕಷ್ಟಪಟ್ಟು ಕೆಲಸ ಮಾಡುವುದಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಗೆ ನಾಯಕರ ನಡುವಿನ ಹದಗೆಟ್ಟ ಸಂಬಂಧವೂ ಒಂದು ಕಾರಣ ಎಂದು ಅವರು ಹೇಳಿದ್ದಾರೆ.

ಭೂಪೇಂದ್ರ ಹೂಡಾ ಮತ್ತು ಕುಮಾರಿ ಸೆಲ್ಜಾ ನಡುವಿನ ಜಗಳವನ್ನು ಉಲ್ಲೇಖಿಸಿದ ಸತ್ಯಪಾಲ್ ಮಲಿಕ್, ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ, ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇತ್ತು ಎಂದು ಹೇಳಿದರು. ಬಿಜೆಪಿ ಅಧಿಕಾರಕ್ಕೆ ಬಂದಿದೆ ಇನ್ನು ಅದು ದುರಹಂಕಾರ ಬಿಟ್ಟು ಜನರ ಸೇವೆ ಮಾಡಬೇಕು, ವಿಶೇಷವಾಗಿ ಸದು ರೈತರು ಮತ್ತು ಯುವಕರಿಗಾಗಿ ಕೆಲಸ ಮಾಡಬೇಕು ಎಂದು ಮಲಿಕ್ ಹೇಳಿದರು.

ಕಾಂಗ್ರೆಸ್‌ನಲ್ಲಿ ಕೆಲವೇ ನಾಯಕರು ಸಕ್ರಿಯರಾಗಿದ್ದಾರೆ- ಮಲಿಕ್

ಕಾಂಗ್ರೆಸ್ ಪಕ್ಷದಲ್ಲಿ ಕೆಲವೇ ನಾಯಕರು ಗಂಭೀರವಾಗಿ ಕೆಲಸ ಮಾಡುತ್ತಾರೆ, ಉಳಿದವರು ಹೆಚ್ಚು ಸಕ್ರಿಯರಲ್ಲ ಎಂದು ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ಬಿಜೆಪಿ ಸರಕಾರ ಕೂಡಲೇ ಎಂಎಸ್‌ಪಿ ಜಾರಿಗೊಳಿಸಬೇಕು ಮತ್ತು ರಾಜಸ್ಥಾನದ ರೈತರ ನೀರಿನ ಸಮಸ್ಯೆಗಳನ್ನು ಪರಿಹರಿಸಬೇಕು ಮತ್ತು ಯುವಕರಿಗಾಗಿ ಕೆಲಸ ಮಾಡಬೇಕು ಎಂದು ಮಲಿಕ್ ಹೇಳಿದರು.

You cannot copy content of this page

Exit mobile version