Monday, June 17, 2024

ಸತ್ಯ | ನ್ಯಾಯ |ಧರ್ಮ

ಟ್ವಿಟ್ಟರ್ ನಿಂದ ಅಳಿಸಲ್ಪಟ್ಟ “ರಾಷ್ಟ್ರೀಯ ನಿರುದ್ಯೋಗ ದಿನ” ಹ್ಯಾಶ್ ಟ್ಯಾಗ್.!

ಕಳೆದ ಮೂರು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ದಿನ ಟ್ವಿಟ್ಟರ್ ನ ಅಪ್ಡೇಟ್ ಗಳನ್ನ ನೋಡುವುದೇ ನೆಟ್ಟಿಗರ ಕಣ್ಣಿಗೆ ಒಂದು ಹಬ್ಬ. ಅದೇ ರೀತಿ ಈ ವರ್ಷ ಕೂಡಾ ಆ ಹಬ್ಬ ಮರುಕಳಿಸಿದೆ. ಅಂದಹಾಗೆ ಆ ಹಬ್ಬ ಬೇರೇನೂ ಅಲ್ಲ. ಅದೇ Happy Birthday Modhiji V/s National Unemployment day.

ಸೆಪ್ಟೆಂಬರ್ 17 ಪ್ರತೀ ವರ್ಷ ಬಿಜೆಪಿ ಮಂದಿ ಬಹಳ ಕಾತರದಿಂದ ಆಚರಿಸಬೇಕು ಅಂತ ಕಾಯುತ್ತಾ ಕೂತಿದ್ದ ನರೇಂದ್ರ ಮೋದಿ ಹುಟ್ಟಿದ ದಿನ. ಆದ್ರೆ ಕಳೆದ ಮೂರು ವರ್ಷಗಳಿಂದ ಬಿಜೆಪಿ ಮಂದಿಯ ಈ ಆಸೆಗೆ ಸತತವಾಗಿ ತಣ್ಣೀರು ಎರಚುವ ಕೆಲಸ ಆಗ್ತಾ ಇದೆ. ಅದೆಷ್ಟೇ ಸಂಘಟಿತರಾಗಿ ಬಿಜೆಪಿ ಐಟಿ ಸೆಲ್ ಕೆಲಸ ಮಾಡಿದರೂ ಸಹ ಮೂರು ವರ್ಷಗಳ ಈಚೆಗೆ ಟ್ವಿಟ್ಟರ್ ನಲ್ಲಿ ರಾಷ್ಟ್ರೀಯ ನಿರುದ್ಯೋಗ ದಿನದ ಹ್ಯಾಶ್ ಟಾಗ್ ಟ್ರೆಂಡಿಂಗ್ ನಲ್ಲಿ ಬರ್ತಿದೆ.

ಈ ವರ್ಷವೂ ಸಹ ಇದೇ ರೀತಿಯ ಗುದ್ದಾಟ ಶುರುವಾಗಿ ನಂತರ ಟ್ವಿಟ್ಟರ್ ಮೋದಿ ಹುಟ್ಟು ಹಬ್ಬ ಮತ್ತು ರಾಷ್ಟ್ರೀಯ ನಿರುದ್ಯೋಗ ದಿನ ಎರಡೂ ಹ್ಯಾಶ್ ಟಾಗ್ ನ್ನು ಟ್ವಿಟ್ಟರ್ ನಿಂದ ಅಳಿಸಿ ಹಾಕಿದೆ. ತಮಾಷೆ ಮತ್ತು ಆಶ್ಚರ್ಯ ಎಂದರೆ ಮೋದಿಗೆ ಶುಭಾಶಯ ಕೋರಿದ ಸಂದೇಶಕ್ಕಿಂತ ನಿರುದ್ಯೋಗದ ದಿನದ ಸಂದೇಶ ಕಳಿಸಿದವರ ಸಂಖ್ಯೆಯೇ ಜಾಸ್ತಿ ಇತ್ತು. ಆದರೂ ಟ್ವಿಟ್ಟರ್ ಮಾತ್ರ ಮೋದಿ ಹುಟ್ಟಿದ ದಿನದ ಹ್ಯಾಶ್ ಟ್ಯಾಗ್ ನ್ನು ನಂಬರ್ 1 ಟ್ರೆಂಡಿಂಗ್ ನಲ್ಲಿ ಬೆಳಿಗ್ಗೆಯಿಂದ ತೋರಿಸುತ್ತಿತ್ತು.

ಇನ್ನೊಂದು ವಿಚಾರ ಏನೆಂದರೆ National Unemployment day ಜೊತೆಗೆ ಹಿಂದಿ ಭಾಷೆಯಲ್ಲಿ “ರಾಷ್ಟ್ರೀಯ ಬೇರೋಜಗಾರ್ ದಿವಸ್” ಕೂಡಾ ಟ್ರೆಂಡಿಂಗ್ ನಲ್ಲಿ ಪೈಪೋಟಿ ಕೊಟ್ಟಿತ್ತು.

ಅಂತೂ ಮೋದಿ ಪ್ರಧಾನಿಯಾಗಿ ಆಯ್ಕೆ ಆದ ನಂತರ ದೇಶದಲ್ಲಿ ಗಣನೀಯವಾಗಿ ನಿರುದ್ಯೋಗ ಪ್ರಮಾಣ ಏರಿಕೆಯಾಗಿದ್ದು ಮಾತ್ರ ಸತ್ಯ. ನೆಟ್ಟಿಗರ ಈ ಅಂತರ್ಜಾಲದ ಪ್ರತಿಭಟನೆ ಬಿಜೆಪಿ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ ಎನ್ನುವುದು ಮಾತ್ರ ಅಕ್ಷರಶಃ ಸತ್ಯ.

Related Articles

ಇತ್ತೀಚಿನ ಸುದ್ದಿಗಳು