Thursday, October 24, 2024

ಸತ್ಯ | ನ್ಯಾಯ |ಧರ್ಮ

ವಿಧಿ ವಿಧಾನದೊಂದಿಗೆ ಬಾಗಿಲು ತೆಗೆದು ಈ ವರ್ಷದ ವಿಶ್ವ ರೂಪ ದರ್ಶನ ನೀಡಿದ ಹಾಸನಾಂಬೆ ದೇವಿ

ಹಾಸನ: ಪ್ರತಿ ವರ್ಷದಂತೆ ಈ ವರ್ಷವು ಕೂಡ ಗುರುವಾರದಂದು ವಿಧಿ ವಿಧಾನದೊಂದಿಗೆ ಪೂಜೆ ಸಲ್ಲಿಸಿ ಮದ್ಯಾಹ್ನ ೧೨.೧೫ಕ್ಕೆ ಶ್ರೀ ಆದಿಚುಂಚನಗಿರಿ ಮಹಾಮಠದ ಶ್ರೀ ನಿರ್ಮಾಲನಂದನಾಥ್ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ, ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕ ಹೆಚ್.ಪಿ. ಸ್ವರೂಪ್, ಸಿಮೆಂಟ್ ಮಂಜು, ಡಿಸಿ ಸಿ. ಸತ್ಯಭಾಮ, ಎಸ್ಪಿ ಮಹಮ್ಮದ್ ಸುಜೀತಾ ಎಸಿ ಮಾರುತಿ, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಆಯುಕ್ತ ನರಸಿಂಹ ಮೂರ್ತಿ, ಜಿಪಂ ಸಿಓ ಬಿ.ಆರ್. ಪೂರ್ಣಿಮಾ, ತಹಸೀಲ್ದಾರ್ ಶ್ವೇತ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆಚ್.ಹೆಚ್. ವೇಣುಕುಮಾರ್ ಸೇರಿದಂತೆ ಹಲವಾರು ಗಣ್ಯರ ಮತ್ತು ಅಧಿಕಾರಿಗಳ ಎದುರು ಹಾಸನದ ಆದಿ ದೇವತೆ ಹಾಸನಾಂಬೆ ದೇವಾಲಯದ ಬಾಗಿಲನ್ನು ತೆರೆದು ಭಕ್ತರಿಗೆ ವಿಶ್ವರೂಪ ದರ್ಶನವನ್ನು ಭಕ್ತರಿಗೆ ಕರುಣಿಸಲಾಯಿತು.

ಬಲಿಪಾಡ್ಯಮಿಯ ಮಾರನೇ ದಿನ ಹಾಸನಾಂಬೆ ದೇವಿಯ ಗರ್ಭ ಗುಡಿಯ ಬಾಗಿಲನ್ನು ಮುಚ್ಚಲಾಗುತ್ತದೆ. ಮೊದಲು ದಿನ ತಳವಾರ ವಂಶದ ನರಸಿಂಹರಾಜ ಅರಸು ಮನೆತನದವರಾದ ನರಸಿಂಹರಾಜ ಅರಸು ರವರು ಹಾಸನಾಂಬೆ ದೇವಿ ಗರ್ಭ ಗುಡಿಯ ಬಾಗಿಲಿಗೆ ಪೂಜೆ ಸಲ್ಲಿಸಿದ ಮೇಲೆ ಬಾಳೆ ಕಂದು ಕಡಿಯುವ ಮೂಲಕ ಮದ್ಯಾಹ್ನ ೧೨ ಗಂಟೆಯಿಂದ ೧೨:೨೫ರ ರ ಸಮಯಕ್ಕೆ ಸರಿಯಾಗಿ ಹಾಸನಾಂಬೆ ಬಾಗಿಲು ತೆಗೆಯಲಾಯಿತು. ಮೊದಲ ದಿವಸದಂದು ಸಾರ್ವಜನಿಕರಿಗೆ ದೇವಾಲಯದ ಒಳ ಪ್ರವೇಶ ಇರಲಿಲ್ಲ. ಆದರೂ ಭಕ್ತರು ಮೊದಲ ದಿನದಲ್ಲಿ ದೇವಿ ದರ್ಶನ ಮಾಡಲು ಮುಗಿ ಬಿದ್ದಿದ್ದರು. ಹಾಸನಾಂಬೆ ಬಾಗಿಲು ತೆಗೆಯುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಒಳ ಬಂದರು. ಶ್ರೀ ಆದಿಚುಂಚನಗಿರಿ ಮಹಾಮಠದ ಶ್ರೀ ನಿರ್ಮಾಲನಂದನಾಥ್ ಸ್ವಾಮೀಜಿ ಮಾಧ್ಯಮದೊಂದಿಗೆ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವು ಕೂಡ ಹಾಸನಾಂಬೆ ದೇವಿ ದರ್ಶನ ಮಾಡಲಾಗಿದ್ದು, ದೇವರಲ್ಲಿ ಶಕ್ತಿ ಇದ್ದು, ಬಾಗಿಲು ತೆಗೆದಾಗ ದೀಪ ಉರಿಯುತ್ತಿತ್ತು. ಸರ್ವರಿಗೂ ದೇವಿ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು. ಕಳೆದ ವರ್ಷಕ್ಕಿಂತ ಈ ವರ್ಷ ಅಚ್ಚುಕಟ್ಟಾಗಿ ಜಇಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಒಳಗೊಂಡಂತೆ ಎಲ್ಲಾರೂ ಕೂಡ ಶ್ರಮವಹಿಸಿದ್ದಾರೆ ಎಂದರು. ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಅವರು ಮಾತನಾಡಿ, ಇದೊಂದು ಐತಿಹಾಸಿಕವಾದಂತಹ ವಿಶೇಷವಾದ ದೇವಸ್ಥಾನವಾಗಿದೆ. ವರ್ಷದಲ್ಲಿ ಕೆಲ ದಿನಗಳು ಮಾತ್ರ ಬಾಗಿಲು ತೆಗೆಯಲಾಗುತ್ತದೆ. ಇಲ್ಲಿ ಎಲ್ಲಾ ಅಧಿಕಾರಿಗಳು ತಂಬ ಅಚ್ಚುಕಟ್ಟಾಗಿ ದೇವಾಲಯದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಮನಸ್ಸಿಗೆ ನೆಮ್ಮದಿಗಾಗಿ ದೇವಸ್ಥಾನ ಪ್ರಮುಖವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಕ್ಕೆ ತನ್ನದೆಯಾದ ಮಹತ್ವವಿದೆ. ಹಾಸನದ ಹೆಸರೆ ಹಾಸನಾಂಬೆ ತಾಯಿ ಇದ್ದು, ಇದೊಂದು ಶಕ್ತಿ ದೇವತೆಯಾಗಿದೆ ಎಂದರು. ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಒಟ್ಟಾಗಿ ಇದ್ದರೇ ಮಾತ್ರ ಯಾವ ಸಾಧನೆ ಬೇಕಾದರೂ ಮಾಡಬಹುದು ಎಂದು ಕಿವಿಮಾತು ಹೇಳಿದರು. ಎಲ್ಲಾರಿಗೂ ತಾಯಿ ಆಶೀರ್ವಾದ ಸಿಗಲೆಂದು ಹಾರೈಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ ಮಾಧ್ಯಮದೊಂದಿಗೆ ಮಾತನಾಡಿ, ಈ ಬಾರಿ ಕಡಿಮೆ ಅವಧಿ ದರ್ಶನವಿದ್ದು, ಕಳೆದ ಬಾರಿ ೧೪ ಲಕ್ಷ ೪೦ ಸಾವಿರ ಭಕ್ತಾಧಿಗಳು ಹಾಸನಾಂಬೆ ದರ್ಶನ ಮಾಡಿದ ದಾಖಲೆ ಆಗಿದೆ. ಅದರ ಹಿಂದಿನ ವರ್ಷದಲ್ಲಿ ೪ ಲಕ್ಷ ಜನರು ದರ್ಶನ ಮಾಡಿದ್ದರು. ಈ ವರ್ಷ ನಮ್ಮ ನಿರೀಕ್ಷೆಯಂತೆ ೨೦ ಲಕ್ಷಕ್ಕೂ ಹೆಚ್ಚಿನ ಭಕ್ತರು ಬರಲಿದ್ದಾರೆ. ಮುಖ್ಯಮಂತ್ರಿಯಿಂದ ಎಲ್ಲಾ ಸಚಿವರಿಗೂ, ಎಲ್ಲಾ ನ್ಯಾಯಾಧೀಶರು ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಕೂಡ ಹಾಸನಾಂಬೆ ದರ್ಶನಕ್ಕೆ ಆಹ್ವಾನ ಮಾಡಲಾಗಿದೆ. ಭಕ್ತಾಧಿಗಳಿಗೆ ದೇವಿ ದರ್ಶನಕ್ಕೆ ಯಾವ ತೊಂದರೆ ಬರಬಾರದೆಂದು ಎಲ್ಲಾ ಮುಂಜಾಗ್ರತವಹಿಸಲಾಗಿದೆ. ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಕಳೆದ ಬಾರಿ ಬೇಸರವಾಗಿದ್ದು, ಈ ಬಾರಿ ಆ ರೀತಿಯ ನೂಕು ನುಗ್ಗಲು ಆಗದಂತೆ ನಿಗಾವಹಿಸಲಾಗಿದೆ. ಜಿಲ್ಲಾಡಳಿತಕ್ಕೆ ಸೂಚನೆ ಕೊಡಲಾಗಿದೆ ಎಂದರು. ಕಳೆದ ಬಾರಿ ಅಲಂಕಾರ ಮಾಡಿರಲಿಲ್ಲ ಎನ್ನುವ ಲೋಪವನ್ನು ಸರಿಪಡಿಸಲಾಗಿದೆ. ವಿವಿಧ ಮಠದ ಸ್ವಾಮೀಜಿಗಳು ಈ ದೇವಿ ಜಾತ್ರೋತ್ಸವಕ್ಕೆ ಆಗಮಿಸಿ ಆಶೀರ್ವದಿಸಿದ್ದೀರಿ. ಎಲ್ಲಾ ಪಕ್ಷದ ಶಾಸಕರು ಪಕ್ಷತೀತವಾಗಿ ಆಗಮಿಸಿದ್ದು, ಎಲ್ಲಾರು ಸಹಕಾರ ಕೊಡುವಂತೆ ಕೋರಿದರು. ಎಲ್ಲಾ ಕಾರ್ಯಕ್ರಮಗಳು ಕೂಡ ಅಚ್ಚುಕಟ್ಟಾಗಿ ಜಿಲ್ಲಾಧಿಕಾರಿಗಳು ಹಾಗೂ ಎಲ್ಲಾ ಹಿರಿಯ, ಕಿರಿಯ ಅಧಿಕಾರಿಗಳು ಕೂಡ ತಮ್ಮ ಮನೆಯ ದೇವರ ಕಾರ್ಯ ಎಂಬಂತೆ ರಾತ್ರಿ ಹಗಲು ಶ್ರಮಿಸಿದ್ದಾರೆ. ಮೈಸೂರು ದಸರ ಅಲಂಕಾರ ಮಾಡಿರುವಂತೆ ಹಾಸನದಲ್ಲಿ ಮರುಕಳಿಸಿದ್ದಾರೆ ಎಂದು ಶ್ಲಾಘನೆವ್ಯಕ್ತಪಡಿಸಿದರು. ಹಾಸನದ ಸೌಂದರ್ಯ ವೀಕ್ಷಣೆ ಮಾಡಲು ಡಬಲ್ ಡೆಕರ್ ಬಸ್ ಕೂಡ ಇದ್ದು ಇದರ ಸದುಪಯೋಗ ಪಡೆದುಕೊಳ್ಳಬಹುದು. ಜಿಲ್ಲೆಗೆ ಹಾಗೂ ನಾಡಿನ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಲಾಗಿದೆ. ಈ ಬಾರಿ ನೆರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಹೆಚ್ಚಿನ ಜನರು

ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

   ಈ ಬಾರಿ ಹಾಸನಾಂಬ ದರ್ಶನ ಪಡೆಯಲು ದಿನದ ೨೪ ಗಂಟೆ ಅವಕಾಶ ಕಲ್ಪಿಸಲಾಗಿದ್ದು, ಯಾವುದೆ ತಡೆ ಇಲ್ಲದೆ ಸುಲಲಿತವಾಗಿ ಭಕ್ತರು ದರ್ಶನ ಪಡೆಯಬಹುದಾಗಿದೆ. ನಗರದ ರಸ್ತೆ ಸೇರಿದಂತೆ ಸರ್ಕಾರಿ ಕಟ್ಟಡಗಳಲ್ಲಿ ದೀಪಲಂಕಾರ ಮಾಡಲಾಗಿದೆ. ಕೆ ಎಸ್ ಆರ್ ಟಿ ಸಿ ಸಹಯೋಗದೊಂದಿಗೆ ಪ್ರವಾಸದ ಪ್ಯಾಕೇಜ್ ಪರಿಚಯಿಸಲಾಗಿದೆ. ಇನ್ನು ಈ ವರ್ಷದಿಂದ ಹಾಸನದ ಲೈಟಿಂಗ್ ಸೌದರ್ಯ ವೀಕ್ಷಣೆ ಮಾಡಲು ಡಬಲ್ ಡೆಕರ್ ಬಸ್ ಸಂಚರಿಸಲಿದೆ.

  ಇದೆ ವೇಳೆ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮೀಜಿ, ಅದಮೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕ್ಲಮಠದ ಮಹಾಂತಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕೆಸವತ್ತೂರು ಮಠದ ಸಿದ್ದಲಿಂಗಸ್ವಾಮೀಜಿ, ಶಿಡಿಗಡಲೆ ಮಠದ ಶಿವಲಿಂಗ ಸ್ವಾಮೀಜಿ, ಗಾವಡಗೆರೆ ಮಠದ ನಟರಾಜ ಸ್ವಾಮೀಜಿ, ಗುರುವಣ್ಣ ದೇವರ ಮಠದ ನಂಜಂಡ ಸ್ವಾಮೀಜಿ, ರಾಜಪುರ ಮಠದ ರಾಜೇಶ್ವರಿ ಶಿವಚಾರ್ಯ ಸ್ವಾಮೀಜಿ, ನಿಜಗುಣ ಮಠದ ನಿಜಗುಣ ಸ್ವಾಮೀಜಿ, ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿಚಾರ್ಯ ಸ್ವಾಮೀಜಿ, ಬೆಂಗಳೂರಿನ ನಿರಂಜನಸ್ವಾಮೀಜಿ, ದೊಡ್ಡಮಠದ ಶ್ರೀಗಳು, ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮೀಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page