Thursday, January 15, 2026

ಸತ್ಯ | ನ್ಯಾಯ |ಧರ್ಮ

ಹಾಸನಾಂಬ ನಮ್ಮೂರ ಹಬ್ಬ, ಭಾವೈಕ್ಯತೆಯ ಸಂಕೇತ – ಭಾನು ಮುಷ್ತಾಕ್

ಹಾಸನ : ಹಾಸನಾಂಬ ದೇವಿ ದರ್ಶನ ಪಡೆದ ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್ ಅವರು ಹಾಸನಾಂಬ ಎಂದರೇ ನಮ್ಮೂರ ಹಬ್ಬ, ಭಾವೈಕ್ಯತೆಯ ಸಂಕೇತವಾಗಿದೆ ಎಂದು ತಮ್ಮ ಬಾಲ್ಯದ ನೆನಪು ಹಂಚಿಕೊಂಡು ಹೃದಯಸ್ಪರ್ಶಿ ಮಾತು ಹೇಳಿದರು.

ಇದು ನನ್ನ ಮೊದಲ ದರ್ಶನವಲ್ಲ. ನಮ್ಮ ಮನೆ ದೇವಾಲಯದ ಬೀದಿಯ ಮುಂದಿನಲ್ಲೇ ಇದೆ. ಚಿಕ್ಕಂದಿನಿಂದಲೂ ತಾಯಿಯ ಕೈ ಹಿಡಿದು ಹಾಸನಾಂಬ ದೇವಿಯ ದರ್ಶನಕ್ಕೆ ಬರುತ್ತಿದ್ದೆನು. ಅಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ, ಆದರೆ ಈಗ ಗೊತ್ತಾಗುತ್ತಿದೆ. ಇದು ಭಾವೈಕ್ಯತೆಯ ಸಂಕೇತ. ಹಾಸನಾಂಬ ಜಾತ್ರೆ ನಮ್ಮೂರ ಹಬ್ಬ. ಮುಸ್ಲಿಂ, ಹಿಂದೂ ಎಲ್ಲರೂ ಸಮಾನ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಇದು ಸ್ನೇಹ, ಪ್ರೀತಿ, ಸಹಬಾಳ್ವೆ, ಸಾಮಾಜಿಕ ಸಾಮರಸ್ಯ ಬೆಸೆಯುವ ನೆಮ್ಮದಿಯ ತಾಣ ಎಂದರು. ಬಹಳ ಹಿಂದಿನಿಂದಲೇ ಮುಸ್ಲಿಂ ಸಮುದಾಯದವರು ಹಾಸನಾಂಬ ದೇವಿಯ ಪೂಜಾ ಉತ್ಸವದಲ್ಲಿ ಭಾಗವಹಿಸುತ್ತಿದ್ದರು. ಹಸನ್ ಬಿ, ಹುಸೇನ್ ಬಿ ಎಂಬ ನಂಬಿಕೆಗಳ ಕಾಲವಿತ್ತು. ಮುಸ್ಲಿಂ ಹೆಣ್ಣುಮಕ್ಕಳಿಗೂ ದೇವಿ ಕಥೆಗಳು ಹೇಳಿ ಕೊಡುತ್ತಿದ್ದರು. ಮಧ್ಯದಲ್ಲಿ ಸ್ವಲ್ಪ ವಿರಾಮ ಬಂದರೂ ಇತ್ತೀಚೆಗೆ ಮತ್ತೆ ನಮ್ಮ ಸಮುದಾಯದವರು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ ಎಂದರು.ಹಾಸನಾಂಬ ದೇವಾಲಯದ ಮುಂಭಾಗದಲ್ಲಿ ಭಾನು ಮುಷ್ತಾಕ್ ಭಕ್ತರ ಜೊತೆ ದರ್ಶನ ಮಾಡಿದರು. ನಂತರ ಮಂಗಳಾರತಿ ಕೂಡ ತೆಗೆದುಕೊಂಡರು. ಹೂವನ್ನು ತಲೆಗೆ ಮುಡಿದರು. ಇವರ ಜೊತೆಯಲ್ಲಿ ಸಮಾಜ ಸೇವಕರಾದ ಎಸ್.ಎಸ್. ಪಾಷಾ, ಶಬ್ಬೀರ್ ಅಹಮದ್, ಅತೀಖುರ್ ರೆಹಮನ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page