Monday, November 4, 2024

ಸತ್ಯ | ನ್ಯಾಯ |ಧರ್ಮ

ದಾಖಲೆ ಬರೆದ ಹಾಸನಾಂಬೆ ; ಪ್ರಸಾದ, ಕಾಣಿಕೆ ಸೇರಿ ಒಟ್ಟು 12 ಕೋಟಿ 63 ಲಕ್ಷ ಆದಾಯ

ಹಾಸನ : ಪ್ರತಿವರ್ಷದಂತೆ ಈ ವರ್ಷವೂ ಕೂಡ ಅದಿದೇವತೆ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ತೆಗೆದು ದರ್ಶನದ ಭಾಗ್ಯ ನೀಡಿ ಈಗಾಗಲೇ ಈಗಾಗಲೇ ೨೦೨೪ರ ದರ್ಶನೋತ್ಸವಕ್ಕೆ ತೆರೆ ಎಳೆದಿದ್ದು, ಬಂದ ಭಕ್ತರಿಂದ ಟಿಕೆಟ್, ಲಾಡು ಮಾರಾಟ, ಸ್ಕ್ಯಾನ್ ಮೂಲಕ ಹಣ ಹಾಕಿರುವುದು, ಕಾಣಿಕೆ ಹುಂಡಿಯಿಂದ ಎಲ್ಲಾ ಸೇರಿ ಬರೋಬ್ಬರಿ 12,63,83,808 ರೂಗಳು ಸಂಗ್ರಹವಾಗುವ ಮೂಲಕ ಹಾಸನಾಂಬೆ ಮತ್ತು ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಇತಿಹಾಸದಲ್ಲೆ ಈ ವರ್ಷ ಮತ್ತೊಂದು ಹೊಸ ದಾಖಲೆ ನಿರ್ಮಿಸಿದೆ.

ಹಾಸನಾಂಬೆ ದೇವಿಯ ಬಾಗಿಲು ಅಕ್ಟೋಬರ್ 24ಕ್ಕೆ ತೆಗೆದು ನವೆಂಬರ್ ೩ಕ್ಕೆ ಮದ್ಯಾಹ್ನ ಬಾಗಿಲು ಮುಚ್ಚಲಾಗಿದೆ. ಜಿಲ್ಲಾಡಳಿತ ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡುವ ಮೂಲಕ ಅದ್ಬುತವಾಗಿ ಜಾತ್ರಾ ಮಹೋತ್ಸವ ನಡೆಸಿದೆ. ಈ ಬಾರಿ 20.40 ಲಕ್ಷ ಭಕ್ತರು ದೇವಿ ದರ್ಶನ ಪಡೆದಿದ್ದಾರೆ. 1೦೦೦, 3೦೦ ರ ಟಿಕೆಟ್, ಆನ್ಲೈನ್ ಹಾಗೂ ಲಾಡು ಪ್ರಸಾದದ ಮೂಲಕ ಸೇರಿ 9.63 ಕೋಟಿ ರೂಪಾಯಿ ಆದಾಯ ಬಂದಿದೆ. ಭಕ್ತರು ಹಾಕಿದ 21 ವಿವಿಧ ಕಾಣಿಕೆ ಹುಂಡಿಯ ಲೆಕ್ಕಚಾರ ಕಾರ್ಯವನ್ನು ಸಿಸಿ ಕ್ಯಾಮೆರಾದ ಕಣ್ಗಾವಲಿನಲ್ಲಿ ನಡೆಸಲಾಯಿತು. ಇದರಲ್ಲಿ 2,55,97,567 ರೂಗಳ ಸಂಗ್ರಹ ಎಲ್ಲಾ ಸೇರಿ ಒಟ್ಟು ೧೨ ಕೋಟಿ ೬೩ ಲಕ್ಷ ೮೩ ಸಾವಿರದ ೮೦೮ ರೂಗಳ ಸಂಗ್ರಹವಾಗುವ ಮೂಲಕ ಮತ್ತೆ ಹೊಸ ದಾಖಲೆ ಸೃಷ್ಠಿ ಮಾಡಿದೆ. ೫೧ ಗ್ರಾಂ ಚಿನ್ನ, ೯೧೩ ಗ್ರಾಂ ಬೆಳ್ಳಿಯನ್ನು ಕಾಣಿಕೆ ಹುಂಡಿಗೆ ಹಾಕಿದ್ದಾರೆ. ಸೋಮವಾರದಂದು ಬೆಳಿಗ್ಗೆ ೭ ಗಂಟೆಗೆ ಶುರುವಾದ ಹುಂಡಿಯ ಏಣಿಕೆ ಸಂಜೆ ಸುಮಾರು ೪ ಗಂಟೆಗೆ ಪೂರ್ಣಗೊಂಡಿತು. ಏಣಿಕೆ ಮಾಡುವಾಗ ಹುಂಡಿಯಲ್ಲಿ ವಿದೇಶದ ನೋಟುಗಳು, ಹಳೆಯ ೫೦೦ ಮುಖ ಬೆಲೆಯ ನೋಟುಗಳು, ಹರಕೆ ರೂಪದಲ್ಲಿ ಕಾಣಿಕೆ ಹುಂಡಿಯಲ್ಲಿ ಕರಿಮಣಿ ಸರ, ತ್ರಿಶುಲ, ಬೆಳ್ಳಿಯ ತೊಟ್ಟಿಲು, ಚಿನ್ನದ ತಾಳಿ, ದೀಪಾ, ದೇವಿಯ ಹಸ್ತ, ಬೆಳ್ಳಿಯ ಕಣ್ಣುಗಳು, ಜ್ಯೂವೆಲರಿ ಶಾಪ್‌ನ ನಾಣ್ಯಗಳು, ದೇವಾಲಯಕ್ಕೆ ಹೋಗುವ ಪಾಸುಗಳು ಸೇರಿದಂತೆ ಹಲವಾರು ತರದ ವಸ್ತುಗಳನ್ನು ಹಾಕಲಾಗಿತ್ತು. ಇನ್ನು ಭಕ್ತರು ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸಮ್ಮ ಎಂದು ಕೋರಿ ಈ ವರ್ಷವೂ ಕೂಡ ವಿವಿಧ ಪತ್ರಗಳು ಕಾಣಿಕೆ ಡಬ್ಬಿಯಲ್ಲಿ ಹಾಕಿರುವುದು ಕಂಡು ಬಂದಿತು. ದೇವಿಗೆ ಮನವಿ ಸ್ಲಲಿಸಿರುವುದನ್ನು ಬಹಿರಂಗ ಪಡೆಸದಂತೆ ಅಧಿಕಾರಿಗಳು ಮನವಿ ಮಾಡಿದ್ದರು.

ಭಕ್ತರು ನೀಡಿದ ಕಾಣಿಕೆ ಹುಂಡಿ ಲೆಕ್ಕಚಾರ ಮಾಡಲು ಮೊದಲು ಶ್ರೀ ಸಿದ್ದೇಶ್ವರ ದೇವಾಲಯದ ಆವರಣ ನಿಗಧಿ ಮಾಡಲಾಗಿತ್ತು. ಆದರೆ ಮಳೆ ಬರುತ್ತಿದ್ದರಿಂದ ಶ್ರೀ ಚನ್ನಕೇಶವ ದೇವಸ್ಥಾನಕ್ಕೆ ಸ್ಥಳಾಂತರಿಸಲಾಯಿತು. ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಉಪವಿಭಾಗಧಿಕಾರಿ ಮಾರುತಿ ಎಣಿಕೆ ಕಾರ್ಯದಲ್ಲಿ ನೇತೃತ್ವವಹಿಸಿದ್ದರು. ಬ್ಯಾಂಕ್ ಸಿಬ್ಬಂದಿಗಳು, ಸ್ಕೌಟ್ ಅಂಡ್ ಗೈಡ್ಸ್, ಕಂದಾಯ ಇಲಾಖೆ ಸಿಬ್ಬಂದಿಗಳು ಸೇರಿ ಒಟ್ಟು ೫೦೦ ಜನರನ್ನು ಏಣಿಕೆ ಕಾರ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಮುಂದಿನ ವರ್ಷ ೨೦೨೫ರ ಅಕ್ಟೋಬರ್ ೯ ರಂದು ಹಾಸನಾಂಬ ದೇವಾಲಯದ ಬಾಗಿಲು ತೆರೆದು ಅಕ್ಟೋಬರ್ ೨೩ ರಂದು ಬಾಗಿಲು ಮುಚ್ಚಲಾಗುತ್ತದೆ ಎಂದು ಉಪವಿಭಾಗಧಿಕಾರಿ ಮಾರುತಿ ಮಾಹಿತಿ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page