Friday, September 6, 2024

ಸತ್ಯ | ನ್ಯಾಯ |ಧರ್ಮ

ಏನೋ ಒಂದ್ ಕೇಸ್ ಹಾಕಿ ಹೆದರಿಸುತ್ತೀನಿ ಅನ್ಕೊಂಡಿದ್ದೀರಾ? ನಾನೇನು ಹೆದರಿ ಓಡಿ ಹೋಗೋದಿಲ್ಲ – ಎಚ್‌ ಡಿ ರೇವಣ್ಣ

ಹಾಸನ:- ನಾನು ಮೇವು ಹಾಕಿ ಸಾಕಿದವು ನನ್ನ ವಿರುದ್ಧವೇ ಬಿದ್ದಿವೆ ಎಂದು ವಿರೋಧಿಗಳ ವಿರುದ್ಧ HD ರೇವಣ್ಣ ಕಿಡಿಕಾರಿದ್ದಾರೆ. ತನ್ನ ಹಾಗೂ ತನ್ನ ಮಗನ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ನಾನು ಶಾಸಕನಾಗಿ 30 ವರ್ಷ ಆಯ್ತು. ನಾನು ಕೆಲಸ ಮಾಡಿದ್ದೀನಿ.

ನನ್ನ ಮನೆ ಕೆಲಸ ಮಾಡಿಲ್ಲ. ಒಂದು ಕಾರು ತಗೊಳೋಕೆ ಆಗಿಲ್ಲ. ರೇವಣ್ಣ ಅವರನ್ನು ಮುಗಿಸುತ್ತೇವೆ ಎಂದಿದ್ದಾರೆ. ರೇವಣ್ಣ ಅವರನ್ನು, ದೇವೇಗೌಡರನ್ನು ಮುಗಿಸೋಕೆ ಯಾರಿಂದಲೂ ಆಗಲ್ಲ. 1500 ಸೊಸೈಟಿ ನಡೆಸುವುದು ಸುಲಭ ಅಲ್ಲ. ಕೆಲವರನ್ನು ನಾನೇ ಹದಿನೈದು, ಇಪ್ಪತ್ತು ವರ್ಷ ಮೇವು ಹಾಕಿ ಸಾಕಿದ್ದೆ. ಈಗ ಅವು ನನ್ನ ಮೇಲೆ ಕುಸ್ತಿ ಮಾಡ್ತಿದ್ದಾವೆ. ಎಲ್ಲಿ ಹೋಗ್ತಾರೆ ನನ್ ಕೈಗೆ ಸಿಗದೇ, ಕಾಯ್ತಾ ಇದ್ದೀನಿ. ಯಾವುದು ಏನ್ ಇವತ್ತಿಗೆ ಮುಗಿಯಲ್ಲ ಎಂದು ವಿರೋಧಿಗಳ ವಿರುದ್ಧ ಗುಡುಗಿದ್ದಾರೆ.

ಏನೋ ಒಂದ್ ಕೇಸ್ ಹಾಕಿ ರೇವಣ್ಣನನ್ನ ಹೆದರಿಸುತ್ತೀನಿ ಅನ್ಕೊಂಡಿದ್ದೀರಾ? ನಾನೇನು ಹೆದರಿ ಓಡಿ ಹೋಗೋದಿಲ್ಲ. ರೇವಣ್ಣ ಅವರನ್ನು, ದೇವೇಗೌಡರನ್ನು ಮುಗಿಸೋಕೆ ಯಾರಿಂದಲೂ ಆಗಲ್ಲ. ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತದೆ. ಈಗಲೇ ಏನೂ ಹೇಳಲ್ಲ ನಾಲ್ಕೈದು ತಿಂಗಳು ಕಳೀಲಿ. ದೇವೇಗೌಡರಿಗೆ, ನನಗೆ, ಕುಮಾರಸ್ವಾಮಿಗೆ ಶಕ್ತಿ ಕೊಟ್ಟಿರುವ ಜಿಲ್ಲೆ ಇದು. ನನ್ನ ಆಸೆ ಈ ಜಿಲ್ಲೆಯನ್ನು ನಂಬರ್ ಒನ್ ಮಾಡಬೇಕು ಎನ್ನುವುದು ಎಂದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page