“ಇಡೀ ಚಿಕ್ಕಮಗಳೂರಿನಲ್ಲಿ ಈತನೊಬ್ಬನದೇ ಕೊಳಕು ಬಾಯಿ” : ಡಿ.ಕೆ.ಶಿವಕುಮಾರ್
ಸಿಟಿ ರವಿಯಂತಹ ಕೊಳಕು ಬಾಯಿಯ ವ್ಯಕ್ತಿ ರಾಜಕೀಯದಲ್ಲಿ ಇರೋದೇ ಅಪವಾದ. ಚಿಕ್ಕಮಗಳೂರು ಸುಸಂಸ್ಕೃತರ ಜಿಲ್ಲೆ. ಇಡೀ ಚಿಕ್ಕಮಗಳೂರಿನಲ್ಲಿ ಈತನೊಬ್ಬನದೇ ಕೊಳಕು ಬಾಯಿ ಎಂದು ಸಿಟಿ ರವಿ ವಿರುದ್ದ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಸಿಟಿ ರವಿಯ ಕೊಳಕು ಬಾಯಿ ಇದೇನು ಹೊಸದಲ್ಲ, ಸಿಎಂ ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾ ಖಾನ್ ಎಂದು ನಿಂದಿಸಿದ್ದಾರೆ. ಬೇರೆಯವರಿಗೆ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸಿಟಿ ರವಿ ಇಲ್ಲಿ ಬದುಕಿದ್ದೇ ಹೆಚ್ಚು. ಆದರೂ ನಮ್ಮ ಕಾರ್ಯಕರ್ತರು ಸಮಾಧಾನವಾಗಿ ನಡೆದುಕೊಂಡಿದ್ದಾರೆ. ಅದು ನಿಮ್ಮ ಪುಣ್ಯ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.