Tuesday, June 18, 2024

ಸತ್ಯ | ನ್ಯಾಯ |ಧರ್ಮ

ಹಿ ಸೆಡ್ ಶಿ ಸೆಡ್

ಅವಳ ಹೊಸ ಮೆನೇಜರ್ ಅವಳ ಮೇಲೆ ತುಂಬಾ ಸೆಕ್ಸಿಸ್ಟ್ ಕಾಮೆಂಟ್ ಪಾಸ್ ಮಾಡಿದ್ದ. ಅದೇ ರೀತಿ ಸುಮಾರು ಸಲ indirect ಆಗಿ advances ಗೆ approach ಮಾಡಿದ್ದ. ಅವಳ ವಾಟ್ಸಪ್ ಸ್ಟೋರಿಗಳಿಗೆಲ್ಲ ರಿಪ್ಲೈ ಮಾಡೋದು, instagram ನಲ್ಲಿ stalk ಮಾಡೋದೂ ಇವೆಲ್ಲ ಅವಳಿಗೆ ರೋಸಿ ಹೋಗಿತ್ತು- ಟೆಕ್ಕಿ ಡೈರೀಸ್ ನಲ್ಲಿ ಕಾವ್ಯಶ್ರೀ.

“We teach girls to shrink themselves, to make themselves smaller. We say to girls, you can have ambition, but not too much. You should aim to be successful, but not too successful. Otherwise, you would threaten the man. “

Chimamanda Ngozi Adichie

“ಮೇಡಂ, ಏನ್ ಸಮಾಚಾರ ಯಾರ್ಗೋ ಆಫೀಸ್ ನಲ್ಲಿ harrassment ಆಗಿದ್ಯಂತೆ, ಅದೇನೋ POSH complaint ಅಂತೆಲ್ಲ ಮಾತಾಡ್ತಿದ್ರಪ್ಪ ” ಕೆಫೆಟೇರಿಯಾ ದಲ್ಲಿ ವೇದಿಕ್ ಚಾಯ್ ನ ಎಂಪ್ಲಾಯೀ ಟೀ ನನ್ ಕೈಗೆ ಕೊಡುತ್ತಾ ಕೇಳಿದ್ದಳು. 

ಸೋಮವಾರ ಬೆಳ್ ಬೆಳಿಗ್ಗೆನೆ ಇದೇನಪ್ಪ ಹೊಸ ಬಾಂಬ್.. ಮತ್ಯಾರು POSH (Prevention of Sexual Harrassment) ಕೇಸ್ ಹಾಕಿದ್ರು ಅಂತ ಯೋಚ್ನೆ ಮಾಡ್ತಾನೆ ನನ್ನ ಬೇ ಗೆ ಬಂದೆ.

ಅದಾಗಲೇ all India radio ಧ್ವನಿ ನನ್ನ ಬರುವಿಕೆಗೆ ಕಾಯ್ತಾ ಇದ್ದಳು.

“ಹಿತಾ ನಿಂಗೊತ್ತಾ?? ಮೌನಿಕ POSH complaint register ಮಾಡಿದ್ದಾಳೆ,  ಅದೂ ಅವ್ಳ ಪ್ರೊಜೆಕ್ಟ್ ಮೆನೇಜರ್ ಮೇಲೆ.”

ಹೀಗೆ ಒಂದೇ ಉಸಿರಿಗೆ ಒಪ್ಪಿಸ್ತಾ ಇದ್ದಾಗ ಆಕಾಂಕ್ಷ “ಅವ್ಳು ಈಗಷ್ಟೇ ಎದ್ದು ಬಂದಿದ್ದಾಳೆ ಸ್ವಲ್ಪ ಸುಧಾರಿಸಿಕೊಳ್ಳೋಕೆ ಬಿಡು” ಎಂದಳು.

ನಾನು ಕಳಿಸಿದ್ದ ಟೆಕ್ಸ್ಟ್ ನನ್ನತ್ತ ತೋರಿಸುತ್ತಾ “I overslept today, ಹನ್ನೆರಡು ಗಂಟೆಗೆ login ಆಗ್ತೀನಿ ಅಂತ ಮೆಸೇಜ್ ಮಾಡಿದ್ಯಾ ಅಲ್ವಾ! ಬೇರೆ ಯಾರಾದ್ರೂ ಮೆನೇಜರ್ ಇದ್ರೆ ಅವರಿಗೂ ಹಿಂಗೇ ಕಳಿಸ್ತಿಯ ಹೆಂಗೆ? ಸದರ ಆಗಿದಿನೀ ಅಲ್ವಾ ನಿಂಗೆ” ಎಂದು ಹುಸಿ ಮುನಿಸು ತೋರಿಸಿದ್ದಳು.

“Next time ನಮ್ ಅಜ್ಜಿ ನ ಮೂರನೇ ಸಲ ಸಾಯಿಸ್ತಿನಿ ಬಿಡು ಬಾಸ್ ” ಅಂತ ಹಲ್ಲು ಕಿರಿದೆ.

ನಗು ಬಂದರೂ ತಡೆದು ಕೊಳ್ಳುತ್ತಾ ತಲೆ ಮೇಲೆ ಒಂದು ಕೊಟ್ಟಳು ಆಕಾಂಕ್ಷಾ… “Aawch harrassment!!” ಅಂತ ಮೆಲ್ಲಗೆ ಕೂಗಿದೆ.

“Usshh ಸುಮ್ನಿರೇ ಮಾರಾಯ್ತಿ ಆ ಪದ ತಮಾಷೆ ಅಲ್ಲ!! ಮೂರು ತಿಂಗಳಲ್ಲಿ ಎರಡನೆ ಪ್ರಕರಣ ಇದು”.

ಎಂದಳು ನೇಹಾ.

“ಏನಾಯ್ತು ಅದೂ ಮೌನಿಕ complaint ಮಾಡಿದ್ದಾಳೆ ಅಂತ ಅಂದ್ರೆ!”

ಆಗಿದ್ದಿಷ್ಟು, ಇತ್ತೀಚೆಗೆ ನಮ್ಮ company ಮತ್ತೊಂದು ಕಂಪನಿಯನ್ನ acquisition ಮಾಡಿಕೊಂಡಿತ್ತು. ಇದು ಕಾರ್ಪೊರೇಟ್ ಕ್ಷೇತ್ರಗಳಲ್ಲಿ ತುಂಬಾ ಮಾಮೂಲಾದ ವಿಷಯ. ಈ ರೀತಿ ಅಕ್ವೈರ್ ಅಥವಾ ಮರ್ಜರ್ ಆದ ಕಂಪನಿ ಗಳ ಪ್ರೊಜೆಕ್ಟ್ ಗಳಲ್ಲಿ ಎರಡೂ ಕಂಪನಿಗಳ ಎಂಪ್ಲಾಯಿ ಗಳು ಒಟ್ಟಿಗೆ ಅಡ್ಜಸ್ಟ್ ಆಗಿ ಕೆಲಸ ಮಾಡಲು ಕೆಲವು ಸಲ ಒದ್ದಾಡ್ತಾರೆ.

ಎಷ್ಟೋ ಸಲ revenue ಹೆಚ್ಚಿಗೆ  ತೋರಿಸುವ ನಿಟ್ಟಿನಲ್ಲಿ, Aggressive environment ನಲ್ಲಿ ಕೆಲಸ ಮಾಡುವಾಗ ಓವರ್ ಪ್ರೆಶರ್ ಇರುತ್ತೆ. ಎರಡು ಭಿನ್ನ work culture ಇರುವ ಕಂಪನಿ ಗಳಲ್ಲಿ ಈ ರೀತಿಯ ಪ್ರೆಶರ್ ಸಾಮಾನ್ಯ. ಈಗ ಒಂದು ಕಂಪನಿಯಲ್ಲಿ ಬಹಳ ಲಿಬರಲ್ ವಾತಾವರಣ ಇರುತ್ತೆ. ಅದೇ ಇನ್ನೊಂದು ಕಂಪನಿಯಲ್ಲಿ micro monitoring ತುಂಬಾ ಇರುತ್ತೆ ಆಗ takeover ಆದಂತಹ employee ಗಳನ್ನ ಬಲವಂತವಾಗಿ ಹೊಸ work culture ಗೆ ಒಗ್ಗುವಂತೆ ಮಾಡುವಾಗ ಪ್ರೆಶರ್ ವಾತಾವರಣ ಸೃಷ್ಟಿ ಆಗುತ್ತೆ. ಅಂತಹ ಸಂದರ್ಭ ಗಳಲ್ಲಿ workplace harrassment ಆಗೋದು ಮಾಮೂಲು.

Boeing ಮತ್ತು bombardier airline ಗಳ takeover ಆದಾಗ ಆದದ್ದು ಇದೇ. “If it’s ain’t Boeing,  I’m ain’t going” ಎನ್ನುವ ಸ್ಲೋಗನ್ ಆಗೆಲ್ಲ ತುಂಬಾ ಚಾಲ್ತಿಯಲ್ಲಿತ್ತು. ಹೀಗಿದ್ದ Boeing ನ downfall ಶುರು ಆಗಿದ್ದು, Bombardier ನ takeover ಮಾಡಿದ್ದ ನಂತರ, ನಮಗೆಲ್ಲ ಗೊತ್ತಿರುವಂತೆ, 2018 -2019 ರಲ್ಲಿ boeing ಕಂಪನಿಯ ಎರೆಡು ಏರ್ಲೈನ್ ಗಳು back to back crash ಆಗ್ತವೆ. ಇದರ ಹಿಂದೆ ಟೆಕ್ನಿಕಲ್ ಎರರ್ ಎಷ್ಟು ಇತ್ತೋ human error ಕೂಡ ಅಷ್ಟೇ ಇತ್ತು.

ಇಂತಹ hostile ಪರಿಸರ ಗಳಲ್ಲಿ ಈ ರೀತಿಯ ಮೆಂಟಲ್ ಪ್ರೆಶರ್ ಗಳು ಮಾಮೂಲು. ಆದ್ರೆ Sexual harrasment, report ಆಗಿದ್ದು ಸ್ವಲ್ಪ ಹೊಸದಾಗಿತ್ತು. ಯಾಕೆ ಅಂದ್ರೆ ಈ ರೀತಿಯ merger ಆಗಿರುವ ಪರಿಸರದಲ್ಲಿ defaulter ಗಳು ಅಷ್ಟು ಬೇಗ ತಮ್ಮ behaviour ಗಳನ್ನ ತೋರಿಸಲ್ಲ.

Corporate ಗಳಲ್ಲಿ Sexual harrassment ಅನ್ನ ತುಂಬಾ ಗಂಭೀರವಾಗಿ ತಗೋತಾರೆ. ಹಾಗಿದ್ದೂ ಸಹ ವರ್ಷಕ್ಕೆ 700ಕ್ಕು ಹೆಚ್ಚು sexual harrasment complaint ಗಳು ಭಾರತವೊಂದರಲ್ಲಿ ವರದಿ ಆಗ್ತವೆ. ಬಹಳಷ್ಟು ಸಮಯಗಳಲ್ಲಿ ಇವೆಲ್ಲ he said she said ಎನ್ನುವಂತೆ ಇರುತ್ತವೆ. ಬರೀ ಮಾತಿನಲ್ಲಿ ಸೆಕ್ಸಿಸ್ಟ್ ಕಾಮೆಂಟ್ ಗಳನ್ನ ಪಾಸ್ ಮಾಡಿರುತ್ತಾರೆ ಆಗೆಲ್ಲ ಇವಕ್ಕೆ ಪುರಾವೆ ಇರಲ್ಲ. ಇದನ್ನ prove ಮಾಡೋಕೆ ಸ್ವಲ್ಪ ಕಷ್ಟ ಇರುತ್ತೆ.

ಭಾರತದಲ್ಲಿ ಇದನ್ನ ತಡೆಯುವ ನಿಟ್ಟಿನಲ್ಲಿ 2013 ರಲ್ಲಿ POSH act ಜಾರಿಯಾಯಿತು. POSH ಎಂದರೆ “Prevention Of Sexual Harassment”. The Sexual Harassment of Women at Workplace (Prevention, Prohibition and Redressal) Act, 2013, ಕಾರ್ಯಕ್ಷೇತ್ರಗಳಲ್ಲಿ Stalking, sexual harrasment ಮತ್ತು voyeurism ಅನ್ನು ಕ್ರಿಮಿನಲೈಸ್ ಮಾಡಿದೆ. ಈ ಕಾಯ್ದೆಯ ಪ್ರಕಾರ ಹತ್ತು ಮತ್ತು ಹತ್ತಕ್ಕಿಂತ  ಹೆಚ್ಚು ಎಂಪ್ಲಾಯೀಸ್‌ ಇರುವ ಸಂಸ್ಥೆಯಲ್ಲಿ ಒಂದು ICC (Internal complains committee)ಯನ್ನು employer ರಚಿಸಬೇಕು.

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದಿಂದ ಮಹಿಳೆಯರನ್ನು protect ಮತ್ತೆ safe ಮಾಡುವ ಉದ್ದೇಶದಿಂದ ಮತ್ತು ಲೈಂಗಿಕ ಕಿರುಕುಳದ ದೂರುಗಳ ಪರಿಣಾಮಕಾರಿ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಪೋಷ್ ಕಾಯಿದೆಯನ್ನು ಜಾರಿಗೊಳಿಸಲಾಗಿದೆ. POSH act ನ ಪ್ರಕಾರ  ಇಷ್ಟವಿಲ್ಲದ ಲೈಂಗಿಕ ವರ್ತನೆ, ಬೇಡದ ಅಥವಾ ಬಲವಂತದ ದೈಹಿಕ ಸಂಪರ್ಕ,  demand or request for sexual favour ಅಂದ್ರೆ ಡೇಟಿಂಗ್ ಅಥವಾ one night stand ಇಂತಹ ಬೇಡಿಕೆ ಗಳನ್ನ ಇಡೋದು, sexually coloured remarks ಗಳನ್ನ ಮಾಡುವುದು, pornography ತೋರಿಸುವುದು ಅಥವಾ ಯಾವುದೇ ರೀತಿಯ ಆಂಗಿಕ ಅಥವಾ ಮೌಖಿಕವಾಗಿ sexual comment ಗಳನ್ನ ಪಾಸ್ ಮಾಡೋದು ಇವೆಲ್ಲವೂ sexual harrasment ಅಥವಾ ಲೈಂಗಿಕ ಕಿರುಕುಳದ ಅಡಿಯಲ್ಲಿ ಬರುತ್ತೆ.

ಈ POSH ಕೇಸ್ ಗಳನ್ನ investigate ಮಾಡೋಕೆ ICC (Internal complains committee) ಗಳು ಇದ್ದರೂ

ತುಂಬಾ ಸಲ ಈ ಕೇಸ್ ಗಳು ರಿಪೋರ್ಟ್ ಆಗಿರಲ್ಲ. Sexual harrassment ನ ವಿಷಯದಲ್ಲಿ ನಮ್ಮ ಮೌನ ನಮ್ಮನ್ನ ಯಾವತ್ತೂ ಕಾಪಾಡಲ್ಲ.

ಹಾಗೇ sexual harrassment code ಅನ್ನ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಗೋತಾರೆ.

ಉದಾಹರಣೆಗೆ “you look hot and sexy” ಎನ್ನುವ ಕಾಮೆಂಟ್ POSH ನ ಅಡಿಯಲ್ಲಿ ಬಂದರು ಸಹ ಸುಮಾರು ಸಲ ಹೆಣ್ಣು ಮಕ್ಕಳು ಇದನ್ನ ಕಾಂಪ್ಲಿಮೆಂಟ್ ಆಗಿಯೇ ತಗೊಂಡಿರ್ತಾರೆ. ಇದೂ ಸಹ ಒಮ್ಮೊಮ್ಮೆ ಆ ಕಾಮೆಂಟ್ ಪಾಸ್ ಮಾಡಿದ್ದ ಹುಡುಗರಿಗೆ ಇನ್ನೂ ಅಡ್ವಾಂಟೇಜ್ ಕೊಡುತ್ತೆ. ಅಥವಾ ಈ ವಿಷಯದಲ್ಲಿ ಅವರಿಗೆ ಸರಿಯಾದ ಎಜುಕೇಷನ್ ಸಿಕ್ಕುವುದಿಲ್ಲ ನಾಳೆ ಅದೇ ಹುಡುಗರು ಈ ಕಾಮೆಂಟ್ ಅನ್ನು ಇನ್ಯಾರಿಗೋ ಪಾಸ್ ಮಾಡಿದ್ರೆ ಅವ್ರು ಅದನ್ನ offensive ಆಗಿ ತಗೊಳ್ಳೋ ಸಾಧ್ಯತೆಯೇ  ಹೆಚ್ಚು.

ಗ್ಲೋರಿಯಾ ಸ್ಟೆಯಿನೆಮ್ ಹೀಗೆ ಹೇಳ್ತಾರೆ.

“The first problem for all of us, men and women, is not to learn, but to unlearn.”

Workplace Ethics, Codes and Conducts ಇವುಗಳ ಬಗ್ಗೆ ಗಂಟೆಗಟ್ಟಲೆ ಟ್ರೈನಿಂಗ್ ಗಳನ್ನ ತಗೊಂಡು ಸಹ ಇಂತಹ ignorance ಗಳೇ ಸುಮಾರು ಸಲ work place harrassment ಅನ್ನ welcome ಮಾಡುತ್ತೆ.

——

ಇದೇ ಮೌನಿಕ ಈ ಹಿಂದೆ ಅವಳದೇ ತಂಡದ ಒಬ್ಬ colleague ಅನ್ನ ವಹಿಸಿ ಮಾತಾಡಿದ್ದಳು.

ಅವನ ಹೆಸರು ಸುಮನ್. ಅವನು ಯಾವಾಗಲೂ ಹುಡುಗಿಯರ ಸುತ್ತ ಇರ್ತಾ ಇದ್ದ. ಅವನು ಕಾಂಪ್ಲಿಮೆಂಟ್ ಕೊಡದ ಹುಡುಗಿಯರೇ ಇರ್ತಾ ಇರ್ಲಿಲ್ಲ.

ಒಮ್ಮೆ ಹೀಗಾಗಿತ್ತು, ಅಂದು ನೇಹಾ ನಮ್ಮೊಡನೆ ಬ್ರೇಕ್ ಔಟ್ ಏರಿಯಾ ದಲ್ಲಿ ಮಾತಾಡ್ತಾ ನಿಂತಿದ್ದಳು. ಹಿಂದಿನಿಂದ ಬಂದ ಸುಮನ್ ” ಓಹ್ ಮೈ ಗಾಡ್ ನೇಹಾ you look sexy, ಯಾರು ನೀನು 2 ಮಕ್ಕಳ ತಾಯಿ ಅಂದ್ರೆ ಒಪ್ಪೋದೆ ಇಲ್ಲ. Which weed do you smoke?” ಅಂತ ಕೇಳಿದ್ದ. ಇದರಿಂದ ನೇಹಾ ರೇಗಿ ಸರ್ಯಾಗಿ ಮೈ ನೀರು ಇಳಿಸಿದ್ದಳು. ಇದೇ ರೀತಿ ಇನ್ನೊಮ್ಮೆ ಧ್ವನಿಗೆ “your dusky skin tone is erotic” ಅಂತ ಕಾಮೆಂಟ್ ಮಾಡಿದ್ದ. ಅವತ್ತೇ ಆಕಾಂಕ್ಷ ಅವನ manager ನೊಟ್ಟಿಗೆ ಮಾತಾಡಿದ್ದಳು. ಆಗೆಲ್ಲ ನಮ್ಮನ್ನ ಓವರ್ ರಿಯಾಕ್ಟಿವ್ ಅಂತ ಟೀಕಿಸಿದ್ದವರಲ್ಲಿ ಮೌನಿಕ ಕೂಡ ಒಬ್ಬಳು.

“ಅಲ್ಲಾ ಅದೇನ್ ಆಡ್ತಾರೆ ಅವ್ರು ನಾಲಕ್ ಜನ ಹಂಗ್ ನೋಡಿದ್ರೆ ಯಾವ್ ಗಂಡಸ್ರು ಇರಲೇ ಬಾರ್ದೇನೋ ಪ್ರಪಂಚದಲ್ಲಿ, ಈ ಫೆಮಿನಿಸ್ಟ್ ಗಳೇ ಇಷ್ಟು. ಒಂಚೂರು ಎಂಜಾಯ್ ಮಾಡಬೇಕು ಅಂತ ಇಲ್ಲ” ಎಂದಿದ್ದಳು.

ಫೆಮಿನಿಸ್ಟ್ ಗಳ ಮೇಲೆ ಹೆಣ್ಣು ಮಕ್ಕಳೇ ಹರಿ ಹಾಯ್ದಿದ್ದು ಇದೆ ಮೊದಲೇನಲ್ಲ ಬಿಡಿ, ಅಷ್ಟಲ್ಲದೆ ಬೆಲ್ ಹುಕ್ಸ್ ಸುಮ್ನೆ ಹೇಳಿಲ್ಲ

“Sometimes people try to destroy you, precisely — not because they don’t see it but because they see it and they don’t want it to exist” ಅಂತ.

ಇನ್ನೊಬ್ಬಳು ಹೀಗೆ ಹೇಳಿದ್ದಳು “ಇದೆ ಕಾಮೆಂಟ್ ಅನ್ನಾ ಸುಮನ್ ಅವರ ಜೊತೆ ಆ ಪಬ್ ನಲ್ಲಿ ಕುಡಿತಾ ಹೇಳಿದ್ದರೆ thank you ಅಂತ hug ಮಾಡ್ತಾರೆನೋ.. ಇಲ್ಲಿ ಬಂದು ಸಾಚಾ ಗಳ ತರ ತೋರಿಸ್ತಾರೆ”

ಜಾಗ ಯಾವುದೇ ಆಗಿರಲಿ unwelcomed ಕಮೆಂಟ್ಸ್ ಗಳನ್ನ ನಾವು ಯಾವತ್ತೂ compliment ಆಗಿ ತಗೊಳಲ್ಲ. ಅದನ್ನ ಮುಲಾಜಿಲ್ಲದೆ oppose ಮಾಡ್ತೀವಿ.

ಹೌದು as a feminist, ಏಂಜೆಲಾ ಡೇವಿಸ್ ಹೇಳಿದಂತೆ “I am no longer accepting the things I cannot change, I am changing the things I cannot accept.”

ನಮ್ಮನ್ನ ಅಂದು ಟೀಕಿಸಿದ್ದವರೆಲ್ಲ  conservative familyಯಿಂದ ಬಂದಿದ್ದ ವಿವಾಹಿತ ಹೆಣ್ಣು ಮಕ್ಕಳೇ…

ಅದೇ ತಂಡದಲ್ಲಿದ್ದ ನನ್ನ ಸ್ನೇಹಿತೆಗೆ ಒಮ್ಮೆ ಕೇಳಿದ್ದೆ “ಅದೇನು ಎಲ್ರೂ ಅವ್ನ ಸುತ್ತ ನೊಣಗಳ ತರ ಇರ್ತೀರ ಅಂತ”

ಆಗ ಹೇಳಿದ್ದಳು “ಏನ್ ಗೊತ್ತಾ ಅವ್ನು age, color, appearance ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ, ಎಲ್ರಿಗೂ ಕಾಂಪ್ಲಿಮೆಂಟ್ ಕೊಡ್ತಾನೆ. And we feel very confidence around him” ಅಂತ.

ಹೌದಲಾ, ತುಂಬಾ ಸಲ ಒಂದೇ ಒಂದು ಕಾಂಪ್ಲಿಮೆಂಟ್ ಗೆ ಕಾಯ್ತಾ ಇರ್ತೀವಿ ನಾವು.. ಆದ್ರೆ ಅದನ್ನ ನಮ್ಮ ಪ್ರೀತಿ ಪಾತ್ರರು ಕೊಟ್ಟಿಲ್ಲ ಅಂತ ಅಂದಾಗ ಹೀಗೆ ಯಾರೋ ಒಬ್ಬನ ಕಾಂಪ್ಲಿಮೆಂಟ್ ಆಪ್ತ ವೆನ್ನಿಸುತ್ತೆ. ತಪ್ಪೇನು ಇರ್ಲಿಲ್ಲ. ಆದ್ರೆ ಅವನೊಡನೆ ಇದ್ದು ಸಂತೋಷ ಪಡುವ ಭರದಲ್ಲಿ ಅವನನ್ನ educate ಮಾಡೋರು ಯಾರು ಇರ್ಲಿಲ್ಲ.

ಆದ್ರೆ ಮೂರು ತಿಂಗಳ ಹಿಂದೆ ಸುಮನ್ ನ ಇದೆ ಚಾಳಿ ಅವನ ಕೆರಿಯರ್ ಗೆ ಮುಳುವಾಗುತ್ತೆ ಅಂತ ಅವನು ಕನಸಲ್ಲೂ ಎಣಿಸಿರಲಿಲ್ಲ.

ಇದೇ ರೀತಿಯ ಒಂದು cross functional project ನಲ್ಲಿ ಕೆಲಸ ಮಾಡುತ್ತಿದ್ದಾಗ US ನ employee ಜೊತೆ ಸ್ವಲ್ಪ ಸಲುಗೆ ತಗೊಂಡಿದ್ದ. ಟೈಂ ಝೋನ್ differ ಆಗುವ ಕಾರಣ ಅವಳೊಡನೆ ಆಗಾಗ ತಾನು leave ನಲ್ಲಿ ಇರುವಾಗ commute ಮಾಡಲು ವಾಟ್ಸಪ್ ನಲ್ಲಿ ಮಾತಾಡ್ತಾ ಇದ್ದ.

ಒಮ್ಮೆ ಹೀಗೇ ಗೋವಾ ಗೆ vacation ನಲ್ಲಿ ಇದ್ದಾಗ ಆಕೆ “How’s Goa?” ಅಂತ ಸುಮ್ನೆ ಕ್ಯಾಶುಯಲ್ ಆಗಿ ಕೇಳಿದಾಗ ಅವನು ಗೋವಾದಲ್ಲಿ ತೆಗೆದುಕೊಂಡ ಸುಮಾರು ಪಿಕ್ ಗಳನ್ನ ಕಳಿಸಿದ್ದ ಅದರಲ್ಲಿ ಅವನ shirtless ಫೋಟೋಗಳೆ ಹೆಚ್ಚಿಗೆ ಇದ್ದವು. ಜೊತೆಗೆ “you too come to Goa it will be so fun” ಅಂತ ಹೇಳಿದ್ದ. ಫೋಟೋಗಳ ಜತೆ ಅವನ ಮಾತನ್ನು ಸಹ ಅವಳು ತುಂಬಾ offensive ಆಗಿ ತಗೊಂಡಿದ್ದಳು.

ಎರಡು ದಿನದ ನಂತರ ಅವನ ಮೇಲೆ POSH complaint register ಆಗಿತ್ತು. ಕಂಪ್ಲೈಂಟ್ ಮಾಡಿದ್ದು onsite employee ಆದ್ದರಿಂದ global issue ಆಗಿತ್ತು. ಹಾಗಾಗಿ ಇಂಟರ್ನಲ್ ಕಮಿಟಿ ಇದನ್ನ ಗಂಭೀರವಾಗಿ ತಗೊಂಡು ಅವನನ್ನ ಟರ್ಮಿನೇಟ್ ಮಾಡ್ತು.

ಎಲ್ಲ ಎವಿಡೆನ್ಸ್ ಗಳು ಅವನ ವಿರುದ್ಧವಾಗೆ ಇದ್ದವು.

ಎಷ್ಟೋ ಸಲ ನಾವುಗಳು ಸಹ ಕೆಲ ವಿಷಯಗಳನ್ನ ಬೇಕಂತಲೇ ಇಗ್ನೋರ್ ಮಾಡಿರ್ತ ಇದ್ವಿ. ಆಕಾಂಕ್ಷ ಳನ್ನ ಮತ್ತು ನನ್ನನ್ನ ನಮ್ಮ ರಿಪೋರ್ಟೀ ಗಳು  bitch ಅಂತ ಹಿಂದೆ ಆಡಿಕೊಳ್ತ ಇದ್ದಿದ್ದನ್ನ ನಾವು ಲೆಕ್ಕಕ್ಕೆ ತಗೊಳ್ತಾ ಇರ್ಲಿಲ್ಲ. ಆದ್ರೆ ಸುಮನ್ ನ ಇನ್ಸಿಡೆಂಟ್ ನಮಗೆಲ್ಲ eye opener ಆಗಿತ್ತು. ಹಾಗೆ ಮಾತಾಡಿಕೊಂಡಿದ್ದವ್ರನ್ನ HR ರ ಮುಂದೆ ಕರೆಸಿ ಬುದ್ಧಿ ಹೇಳಿ ಇನ್ನೊಮ್ಮೆ ಹೀಗೆ ಮಾತಾಡಿದ್ದು ಕಿವಿಗೆ ಬಿದ್ದರೆ POSH ಕೇಸ್ ಹಾಕಬೇಕಾಗುತ್ತದೆ ಅಂತ warning ಕೊಟ್ಟಿದ್ದೆವು.

——-

ಈಗ ಮೌನಿಕ ಇಂತಹ ಒಂದು ಪರಿಸ್ಥಿತಿಯಲ್ಲಿ ಇದ್ದಾಗ ಒಮ್ಮೆ ಅವಳೊಡನೆ ಮಾತಾಡ ಬೇಕೆನಿಸಿತ್ತು.

ಅವಳ ಹೊಸ ಮೆನೇಜರ್ ಅವಳ ಮೇಲೆ ತುಂಬಾ ಸೆಕ್ಸಿಸ್ಟ್ ಕಾಮೆಂಟ್ ಪಾಸ್ ಮಾಡಿದ್ದ. ಅದೇ ರೀತಿ ಸುಮಾರು ಸಲ indirect ಆಗಿ advances ಗೆ approach ಮಾಡಿದ್ದ. ಅವಳ ವಾಟ್ಸಪ್ ಸ್ಟೋರಿಗಳಿಗೆಲ್ಲ ರಿಪ್ಲೈ ಮಾಡೋದು, instagram ನಲ್ಲಿ stalk ಮಾಡೋದೂ ಇವೆಲ್ಲ ಅವಳಿಗೆ ರೋಸಿ ಹೋಗಿತ್ತು. ಮೊದಲ ಬಾರಿ ಕಂಪ್ಲೈಂಟ್ ಮಾಡಿದ್ದಾಗ ಅವನು ಅದನ್ನ ಸಮರ್ಥಿಸಿ ಕೊಂಡಿದ್ದ. It was a “he said she said” situation. ಯಾಕೆ ಅಂದ್ರೆ ಅವನು ಸೆಕ್ಸಿಸ್ಟ್ ಕಾಮೆಂಟ್ ಪಾಸ್ ಮಾಡಿದ್ದಾಗ ಸುತ್ತ ಯಾರು ಇರ್ಲಿಲ್ಲ. ಕಾಫಿ ವೆಂಡಿಂಗ್ ಮೆಷಿನ್ ಹತ್ತಿರ ಹಾಗೆ ಮಾತಾಡಿದ್ದು. ಆ ಹಿಂದಿನ ದಿನ ಆಕೆ instagram ನಲ್ಲಿ ಪೋಸ್ಟ್ ಮಾಡಿದ್ದ ಫೋಟೋದ ಕುರಿತಾಗಿತ್ತು. “ಪಿಕ್ ತುಂಬಾ sexy ಇದೆ.. ನಿಮ್ ಬೆನ್ನು ಮತ್ತೆ ಕುತ್ತಿಗೆ ಮೇಲಿನ tattoo ತುಂಬಾ ಚೆನ್ನಾಗಿದೆ, how about a lunch or brunch this weekend?” ಹೀಗೆ ಕೇಳಿದ್ದ. ಅವನ ಪ್ರಕಾರ ಆಕೆ ರಾತ್ರಿ ಸ್ಟೋರಿ upload ಮಾಡಿದ್ದು ಅದರಲ್ಲೂ ಡೀಪ್ back blouse ಇರೋ ಪಿಕ್ ಹಾಕಿದ್ದು ಅದರ ಜೊತೆಗೆ tattoo ಇವೆಲ್ಲ she was asking for it ಅಂತ.

ಈಗಲೂ ನಮ್ಮಲ್ಲೂ ಎಷ್ಟೋ ಜನ ನಾವೇನಾದರೂ ರಾತ್ರಿ ಹತ್ತರ ನಂತರ ಸ್ಟೋರಿ ಗೆ ಯಾವುದಾದರೂ ಫೋಟೋ ಹಾಕಿದ್ರೆ they consider that we are asking for it. 

ಯಾವಾಗ ಮೌನಿಕ ಮುಂದೆ ಬಂದು ಕಂಪ್ಲೈಂಟ್ ಮಾಡಿದ್ದಳೋ ಡಜನ್ ಗು ಮಿಕ್ಕಿ ಇತರೆ ಹೆಣ್ಣು ಮಕ್ಕಳು ಅವನ ಮೇಲೆ complaint ಮಾಡಲು ಮುಂದೆ ಬಂದರು.

ಮೌನಿಕಳಿಗೆ teams ನಲ್ಲಿ ಹೀಗೆ ಮೆಸೇಜ್ ಮಾಡಿದ್ದೆ- 

“‘Each time a woman stands up for herself, without knowing it possibly, without claiming it, she stands up for all women.’

~Maya Angelou

Go girl! You are doing great I am proud of you.”

ಆ ಕಡೆಯಿಂದ ಮುಷ್ಟಿಯ ಇಮೋಜಿ ಜೊತೆಗೆ “thank you girl , and I am sorry for my earlier comments” ಎಂದು reply ಬಂದಿತ್ತು.

ಇದನ್ನೂ ಓದಿhttp://ಮರುಭೂಮಿಯ ಹೂವು….

——-

ಗ್ಲೋರಿಯಾ ಸ್ಟೈಮನ್ ಹೀಗೆ ಹೇಳಿದ್ದರು

“The truth will set you free but 1st it will piss you off” ಅಂತ 

ಎಷ್ಟೋ ಸಲ harrassment ನ ಬಗ್ಗೆ ದನಿ ಎತ್ತಿದಾಗ ನಮ್ಮದೇ colleagues ನಮ್ಮ ಮೇಲೆ ಹರಿಹಾಯ್ತಾರೆ.

ಇದೇ ಕಾರಣಕ್ಕೆ ಸುಮಾರು sexual harrasment case ಗಳು ವಾಟ್ಸಪ್ ಚಾಟ್ delete ಮಾಡುವ ಮೂಲಕ ಅಥವಾ ಜಾಣ ಕಿವುಡು ತೋರಿಸುವ ಮೂಲಕ ಅಲ್ಲಿಯೇ ಕೊನೆ ಆಗುತ್ತೆ.

ಭಾರತ ಒಂದರಲ್ಲೇ 2022 ರಲ್ಲಿ 759 sexual harrasment case ಗಳು ರಿಜಿಸ್ಟರ್ ಆಗಿದಾವೆ. 2021 ರಲ್ಲಿ  595 ಕೇಸ್ ಗಳು register ಆಗಿದ್ದವು. ಅಂದರೆ ಒಂದು ವರ್ಷದಲ್ಲಿ workplace ನಲ್ಲಿ sexual harrassment 27 ಪರ್ಸೆಂಟ್ ಹೆಚ್ಚಾಗಿದೆ. ಇದು ಕೇವಲ ರಿಪೋರ್ಟ್ ಆದ ಅಂಕಿ ಅಂಶಗಳು. ಬಹಳಷ್ಟು ಸಲ ಹೆಣ್ಣು ಮಕ್ಕಳು ಇದನ್ನ ರಿಪೋರ್ಟ್ ಮಾಡಲ್ಲ.

Airlines industry ಬಿಟ್ಟರೆ ಅತಿ ಹೆಚ್ಚು sexual harrasment ಆಗೋದು Banking, Financial services and Insurance (BFSI) ಮತ್ತು IT ಗಳಲ್ಲಿ.

POSH, ICC ಇವೆಲ್ಲ ಬಂದರೂ ಎಷ್ಟೋ ಸಲ sexual harrasment ಹಗರಣ ಗಳು ಹೊರಗೆ ಬರೋದೇ ಇಲ್ಲ.

ರುತ್ ಬೆಡರ್ ಜಿನ್ಸ್ಬರ್ಗ್ ಹೇಳುವಂತೆ

“Women belong in all places where decisions are being made. It shouldn’t be that women are the exception.”

ಹಾಗಂತ ಬರಿ ಹೆಣ್ಣು ಮಕ್ಕಳೇ sexual Harrassment ಗೆ ಒಳಗಾಗ್ತಾರೆ ಅಥವಾ male colleague ಗಳಿಂದಲೆ ಈ ಕಿರುಕುಳ ಆಗುತ್ತೆ ಅಂತ ಅಲ್ಲ. ಹುಡುಗಿಯರು ಇತರ ಹುಡುಗಿಯರಿಂದಲು, ಹುಡುಗರು ಹುಡುಗಿಯರಿಂದಲೂ ಹಾಗೆ ಹುಡುಗರಿಂದಲೂ ಕಿರುಕುಳ ಅನುಭವಿಸುತ್ತಾರೆ.

ಆದ್ರೆ ಅವೆಲ್ಲ ರಿಪೋರ್ಟ್ ಆಗೋದು ಅಪರೂಪ. ಹಾಗಂತ ಅವು ನಡೆದೇ ಇಲ್ಲ ಅಂತಲ್ಲ. ಇವೆಲ್ಲವನ್ನೂ ರಿಪೋರ್ಟ್ ಮಾಡಲು ಯಾರೂ ಮುಂದೆ ಬರಲ್ಲ especially ಹುಡುಗರು ತಮಗಾಗುವ ಲೈಂಗಿಕ ಕಿರುಕುಳದ ಬಗ್ಗೆ voice out ಮಾಡಲ್ಲ.

ಎಂಪ್ಲಾಯಿಗಳು ತಾವು workplace ನಲ್ಲಿ safe ಆಗಿದೀವಿ ಅನ್ನೋ ಫೀಲ್ ಬರಬೇಕು ಹಾಗೆ they should be treated as equals. ಈ ರೀತಿಯ ಪರಿಸರವನ್ನ create ಮಾಡುವ ನಿಟ್ಟಿನಲ್ಲಿ ಕಾರ್ಪೊರೇಟ್ ಗಳು ಹೆಜ್ಜೆ ಇಡಬೇಕು.

ಕಾವ್ಯಶ್ರೀ

ದೊಡ್ಡಬಳ್ಳಾಪುರದ ಇವರು ಸಾಫ್ಟ್‌ವೇರ್ ಇಂಜಿನಿಯರ್

ಇದನ್ನೂ ಓದಿhttp://ಕಾಕ್ಟೇಲ್ ಲೈಫ್

Related Articles

ಇತ್ತೀಚಿನ ಸುದ್ದಿಗಳು