ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಧೂಮಪಾನ ಮಾಡದೇ ಇದ್ರೂ ಕ್ಯಾನ್ಸರ್ ಗೆ ತುತ್ತಾಗ್ತೀರಾ ಹುಷಾರ್‌..!

PPeepal Media Desk

Peepal Media Desk ಆರೋಗ್ಯ

• 1 ನಿಮಿಷದ ಓದು

ಧೂಮಪಾನ ಮಾಡದೇ ಇದ್ರೂ ಕ್ಯಾನ್ಸರ್ ಗೆ ತುತ್ತಾಗ್ತೀರಾ ಹುಷಾರ್‌..!

ಸುಮ್ಮನೆ ಹುಡುಕಿದರು ಧೂಮಪಾನ ಪ್ರೀತಿಸುವವರು ಸಾಕಷ್ಟು‌ ಜನ ಸಿಗುತ್ತಾರೆ. ಸ್ಮೋಕಿಂಗ್ ಇಂಜೂರಿಯಸ್ ಟು ಹೆಲ್ತ್ ಅಂತ ಗೊತ್ತಿದ್ರೂ ಚೈನ್ ಸ್ಮೋಕರ್ ಗಳು ಇದ್ದಾರೆ. ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ್ಕರ, ಇದರಿಂದ ಶ್ವಾಸಕೋಶದ ಕ್ಯಾನ್ಸರ್ ಬರುತ್ತೆ ಎಂಬ ಭಯ ತುಂಬಾ ಜನಕ್ಕೆ ಇದೆ. ಈ ಭಯದಿಂದಾನೇ ಹಲವರು ಹೊಗೆ ಬಿಡುವುದಕ್ಕೆ ಹೋಗಲ್ಲ. ಆದರೆ ಇನ್ನು ಕೆಲವರು ಗೊತ್ತಿದ್ದರು ಬಾ ಗುರು ಲೈಫ್ ಗೆ ಅನ್ನಿಸಿದ್ದನ್ನ ಮಾಡಿಬಿಡಬೇಕು ಅಂತ ಸೇದುವವರು ಹಲವರಿದ್ದಾರೆ. ಇದೆಲ್ಲದರ ಮಧ್ಯೆ ಒಂದು ಶಾಕಿಂಗ್ ಸಂಗತಿ ಅಂದ್ರೆ ಧೂಮಪಾನ ಮಾಡದೆ ಇರುವವರಲ್ಲಿಯೂ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆಯಂತೆ.

ಸದ್ಯದ ಪರಿಸರವನ್ಜು ನಾವೇ ನಮ್ಮ ಕೈಯ್ಯಾರೆ ಹಾಳು ಮಾಡಿಕೊಳ್ಳುತ್ತಿದ್ದೇವೆ. ಅದರಿಂದಾನೇ ಮನುಷ್ಯ ದಿನ ಬೆಳಗಾದರೇ ಸಾಕು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ. ಈಗ ಶ್ವಾಸಕೋಶದ ಕ್ಯಾನ್ಸರ್ ಹರಡುತ್ತಿರುವುದಕ್ಕೆ ಇದೇ ಕಾರಣ ಎನ್ನಲಾಗುತ್ತಿದೆ. ಧೂಮಪಾನದಿಂದ ದೂರವಿದ್ದರು, ಧೂಮಪಾನ ಮಾಡುವವರ ನಡುವೆ ವಾಸ ಮಾಡಿದಾಗ ಬೇಗನೇ ಕ್ಯಾನ್ಸರ್ ಬರಲಿದೆ. ಈಗಾಗಲೇ ಈ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಸಿಗರೇಟ್ ಸೇದುವವರಿಗಿಂತ, ಅದರ ಹೊಗೆ ಕುಡಿದವರಿಗೇನೆ ಹೆಚ್ಚು ಅಪಾಯ ಎಂಬುದು. ಹೀಗಾಗಿಯೇ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಸಿಗರೇಟು ಸೇದುವವರ ನಡುವೆ ನಿಂತವರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.

https://fb.watch/nl-9fP3kEF/?mibextid=RUbZ1f

ಇನ್ನು ಕೆಲವೊಂದು ಕಂಪನಿಗಳಲ್ಲಿ ವಿಷಕಾರಿ ಅನಿಲ, ರಾಸಾಯನಿಕಗಳನ್ನು ತಯಾರು ಮಾಡುತ್ತಾರೆ. ಅಂತಹ ಕಡೆಗಳಲ್ಲಿ ಕೆಲಸ ಮಾಡುವವರು ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಕೊಂಚ ಅದರಿಂದ ಕೆಮಿಕಲ್ ದೇಹ ಸೇರಿದರೂ ಅದರಿಂದ ಕ್ಯಾನ್ಸರ್ ಬರಲಿದೆ. ಈ ರೀತಿಯ ಕಂಪನಿಗಳಲ್ಲಿ ಕೆಲಸ ಮಾಡುವವರಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿರುವ ವರದಿಗಳು ಇದೆ. ಈಗಿನ ದಿನಗಳಲ್ಲಿ ವಾಯುಮಾಲಿನ್ಯ ಸಾಕಷ್ಟು ಹೆಚ್ಚಿರುವಾಗ ಶ್ವಾಸಕೋಶದ ಕ್ಯಾನ್ಸರ್‌ಗೆ ಇದೂ ಒಂದು ಕಾರಣ. ಕಾರುಗಳು, ವಿದ್ಯುತ್ ಸ್ಥಾವರಗಳು ಮತ್ತು ಕೈಗಾರಿಕೆಗಳಿಂದ ಹೊರಬರುವ ಹೊಗೆ ಶ್ವಾಸಕೋಶದ ಕ್ಯಾನ್ಸರ್‌ಗೆ ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ರೇಡಾನ್ ಅನಿಲಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಈ ಅನಿಲವು ಶ್ವಾಸಕೋಶದ ಜೀವಕೋಶಗಳಿಗೆ ಹಾನಿಕಾರಕವಾಗಿದೆ. ಹೆಚ್ಚಿನ ತಾಪಮಾನದಲ್ಲಿ ದೀರ್ಘಕಾಲ ಉಳಿಯುವುದು ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು.

ಇನ್ನು ನಮ್ಮಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳನ್ನು ನಾವು ಬಹಳಷ್ಟು ಸಂದರ್ಭಗಳಲ್ಲಿ ನಿರ್ಲಕ್ಷ್ಯ ಮಾಡಿರುತ್ತೇವೆ. ಆದರೆ ಅದು ತಪ್ಪು, ಆರೋಗ್ಯದಲ್ಲಿ ಏನಾದರೂ ಏರು ಪೇರಾದಾಗ, ರೋಗ ಲಕ್ಷಣಗಳು ಕಾಣಿಸಿಕೊಂಡಾಗ ಅದನ್ನು ಪರೀಕ್ಷಿಸುವುದು ಅತೀ ಅಗತ್ಯ. ನಾವು ನಿರ್ಲಕ್ಷಿಸುವ ಸಣ್ಣ ರೋಗ ಲಕ್ಷಣ ಮುಂದೆ ಕೈಮೀರಿ ಹೋಗಬಹುದು ಎನ್ನುವುದನ್ನು ಸದಾ ನೆನಪಿನಲ್ಲಿಡಬೇಕು. ಕೆಲವು ಜನರು ಸೀನುವಿಕೆ ಅಥವಾ ಕೆಮ್ಮಿನಿಂದ ಬೆಳಗ್ಗೆ ಏಳುತ್ತಾರೆ. ಜ್ವರ ಅಥವಾ ನಿದ್ರಾಹೀನತೆಯಿಂದ ಬಳಲುತ್ತಿರುವ ಹೊರತು ಈ ರೋಗಲಕ್ಷಣಗಳ ಜೊತೆಗೆ ಆಯಾಸವನ್ನೂ ಅನುಭವಿಸುತ್ತಿದ್ದರೆ ಇದನ್ನು ಗಮನಿಸಬೇಕು. ಕೆಮ್ಮು ಆಯಾಸದಿಂದ ಕೂಡಿದ್ದರೆ, ಅದು ಕ್ಯಾನ್ಸರ್ನ ಸಂಕೇತವಾಗಿರಬಹುದು ಎಂದು ತಜ್ಞರು ನಂಬುತ್ತಾರೆ. ಒಬ್ಬ ವ್ಯಕ್ತಿಯು ನಿರಂತರ ಕೆಮ್ಮನ್ನು ಹೊಂದಿದ್ದರೆ ಇದನ್ನು ಬೇರೆ ರೋಗವಾಗಿ ಪರಿಗಣಿಸುವ ಸಾಧ್ಯತೆ ಇದೆ. ವಿಶೇಷವಾಗಿ ಧೂಮಪಾನದ ಅಭ್ಯಾಸವಿರುವವರಲ್ಲಿ ಇದನ್ನು ಪತ್ತೆ ಮಾಡುವುದು ಕಷ್ಟ. ಯಾವುದೇ ಸುಧಾರಣೆಯ ಲಕ್ಷಣಗಳಿಲ್ಲದೆ ಎರಡು ವಾರಗಳ ಕಾಲ ನಿರಂತರ ಗಂಟಲು ನೋಯುತ್ತಿದ್ದರೆ ಇದು ಕೂಡಾ ಕ್ಯಾನ್ಸರ್ ಲಕ್ಷಣವಾಗಿರಬಹುದು. ಹೀಗಾಗಿ ಇಂತಹ ವ್ಯಕ್ತಿಗಳು ನಿರ್ಲಕ್ಷ್ಯ ಮಾಡದೆ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಉತ್ತಮ.

PPeepal Media Desk

Peepal Media Desk

Peepal Media · ಆರೋಗ್ಯ ವಿಭಾಗ

ಸಂಬಂಧಿತ ಸುದ್ದಿಗಳು