ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಬಾದಾಮಿ ಕ್ರೀಂ ಹಚ್ಚಿದರೆ ಮುಖದ ಆರೋಗ್ಯ ಹೆಚ್ಚಾಗುತ್ತೆ.. ಮನೆಯಲ್ಲಿಯೇ ಮಾಡೋದು ಹೇಗೆ..?

PPeepal Media Desk

Peepal Media Desk ಆರೋಗ್ಯ

• 1 ನಿಮಿಷದ ಓದು

ಬಾದಾಮಿ ಕ್ರೀಂ ಹಚ್ಚಿದರೆ ಮುಖದ ಆರೋಗ್ಯ ಹೆಚ್ಚಾಗುತ್ತೆ.. ಮನೆಯಲ್ಲಿಯೇ ಮಾಡೋದು ಹೇಗೆ..?

ಹೆಣ್ಣು ಮಕ್ಕಳಿಗೆ ಬ್ಯೂಟಿ ಅನ್ನೋದು ಬಹಳ ಮುಖ್ಯ. ಅದರಲ್ಲೂ ಇತ್ತಿಚಿನ ದಿನಗಳಲ್ಲಿ ಬ್ಯೂಟಿ ಅನ್ನೋದು ಎಲ್ಲರು ಗಮನ ಕೊಡುವಂತ ವಿಚಾರವಾಗಿದೆ. ಜೊತೆಗೆ ಜೀವನದಲ್ಲಿ ಒಂದಷ್ಟು ಕಾನ್ಫಿಡೆನ್ಸ್ ತುಂಬುವುದಕ್ಕೂ ಬ್ಯೂಟಿ ಅನ್ನೋದು ತುಂಬಾ ಮುಖ್ಯ. ಮುಖದ ಕಾಂತಿ ಹೊಳೆಯುತ್ತಿದ್ದರೆ, ಮನಸ್ಸು ಖುಷಿಯಾಗಿರುತ್ತದೆ, ಹೆಚ್ಚು ಕಾನ್ಫಿಡೆನ್ಸ್ ನಮ್ಮಲ್ಲಿ ಉತ್ಪತ್ತಿಯಾಗುತ್ತದೆ. ಫಿಟ್ ಅಂಡ್ ಫೈನ್ ಅಗಿದ್ದಾಗ ಬರುವ ಕಾನ್ಫಿಡೆನ್ಸ್ ಸೌಂದರ್ಯಯುತವಾಗಿದ್ದಾಗಲೂ ಮೂಡುತ್ತದೆ.

ಹೀಗೆ ಸೌಂದರ್ಯ ಹೆಚ್ಚಿಸಿಕೊಳ್ಳಲು ನಾನಾ ಕ್ರೀಂ ಗಳನ್ನು ಬಳಕೆ ಮಾಡುತ್ತೇವೆ. ಅಷ್ಟೇ ಯಾಕೆ ಇತ್ತಿಚಿನ ದಿನಗಳಲ್ಲಿ ಲೇಸರ್ ಟ್ರೀಟ್ಮೆಂಟ್ ಅಂತೆಲ್ಲಾ ಬಂದು, ಸೌಂದರ್ಯಕ್ಕಾಗಿ ಟ್ರೀಟ್ಮೆಂಟ್ ಮೊರೆ ಹೋಗುವವರು ಕೂಡ ಹೆಚ್ಚಾಗಿದ್ದಾರೆ. ಆದರೆ ಮನೆಯಲ್ಲಿರುವ ಒಂದಷ್ಟು ಪದಾರ್ಥಗಳನ್ನು ಬಳಸಿಕೊಂಡು ಹೆಲ್ದಿಯಾಗಿರುವಂತ ಕ್ರೀಂ ಗಳನ್ನೇ ತಯಾರಿಸಿಕೊಳ್ಳಬಹುದು ಅನ್ನೋದು ನಿಮಗೆ ಗೊತ್ತಾ..?

ಹಿಂದಿನ ಕಾಲದಲ್ಲಿ ಅಂದ್ರೆ ನಮ್ಮ ಮನೆಯ ಹಿರಿಯರ ಮುಖದ ಕಾಂತಿಯನ್ನೊಮ್ಮೆ ನೀವೂ ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ ಮುಖದಲ್ಲಿ ಒಂದು ಸುಕ್ಕು ಕಾಣುವುದಿಲ್ಲ. ಯಾಕಂದ್ರೆ ಅವರೆಲ್ಲ ಮನೆಯಲ್ಲಿಯೇ ಇದ್ದ ಅದರಲ್ಲೂ ಅಡುಗೆ ಮನೆ, ಹಿತ್ತಲಲ್ಲಿ ಇದ್ದ ಗಿಡದ ಮದ್ದನ್ನೇ ಸೌಂದರ್ಯವರ್ಧಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು. ಈಗ ಬಹಳ ಮುಖ್ಯವಾಗಿ ಮುಖದ ಹೊಳಪನ್ನು ಕಾಪಾಡಿಕೊಳ್ಳಲು ಬೇಕಾಗಿರುವುದು ನೈಟ್ ಕ್ರೀಂ. ಮೆಡಿಕಲ್ ಗಳಲ್ಲಿ ಹೋಗಿ ಕೇಳೊದರೆ ನೈಟ್ ಬೆಲೆ ಏನು ಕಡಿಮೆ ಇಲ್ಲ. 100 ML ಗೂ ನೂರಾರು ರೂಪಾಯಿ ಇರುತ್ತೆ. ಆದರೆ ಮನೆಯಲ್ಲಿಯೇ ಇರುವ ಪದಾರ್ಥ ಬಳಸಿಕೊಂಡು,‌ ಸುಲಭವಾಗಿ ಕ್ರೀಂ ತಯಾರಿಸುವುದು ಹೇಗೆ ಎಂಬುದನ್ನು ನಾವಿಲ್ಲಿ ಹೇಳಿಕೊಡುತ್ತೇವೆ. ಈ ಕ್ರೀಂ ಎಲ್ಲಾ ರೀತಿಯಾದಂತ ಚರ್ಮಕ್ಕೂ ಹೊಂದಿಕೊಳ್ಳುತ್ತದೆ.

ಬಾದಾಮಿ ಎಣ್ಣೆ, ವಿಟಮಿನ್ ಸಿ ಕ್ಯಾಪ್ಸುಲ್, ಗುಲಾಬಿ ನೀರು, ಆಲೋವೆರಾ ಜೆಲ್. ಇಷ್ಟು ಇದ್ದರೆ ಒಂದೊಳ್ಳೆ ಕ್ರೀಂ ಸಿದ್ದವಾಗುತ್ತದೆ. ಮೊದಲಿಗೆ ರಾತ್ರಿ ನೆನೆಸಿಟ್ಟ ಐದಾರು ಬಾದಾಮಿಯನ್ನು ಸಿಪ್ಪೆ ತೆಗೆದು, ಸ್ವಲ್ಪ ಬಾದಾಮಿ ಎಣ್ಣೆ ಹಾಕಿ ರುಬ್ಬಿಕೊಳ್ಳಬೇಕು. ಅದನ್ನು ಸೋಸಿಕೊಂಡು, ಆ ಹಾಲಿಗೆ ಎರಡು ವಿಟಮಿನ್ ಕ್ಯಾಪ್ಸುಲ್ ಹಾಕಿ, ಬಳಿಕ ಸ್ವಲ್ಪ ಗುಲಾಬಿ ನೀರು, ಆಲೋವೆರಾ ಜೆಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದು‌ ಕ್ರೀಂಮಿ ಹದಕ್ಕೆ ಬರುವ ತನಕ ಮಿಕ್ಸ್ ಮಾಡಿ, ಒಂದು ಬಾಟೆಲ್ ಗೆ ಹಾಕಿ ಇಟ್ಟುಕೊಳ್ಳಿ. ಪ್ರತಿದಿನ ರಾತ್ರಿ ಮುಖಕ್ಕೆ ಅಪ್ಲೈ ಮಾಡಿ. ಈ ರೀತಿಯ ಕ್ರೀಂ ಅನ್ನು ಹದಿನೈದು ದಿನ ಶೇಕರಣೆ‌ ಮಾಡಬಹುದು. ಫ್ರಿಡ್ಜ್ ನಲ್ಲಿಟ್ಟರೆ ಒಂದು ತಿಂಗಳ ತನಕ ಮಾಡಬಹುದು. ಈ ಕ್ರೀಂ ಬಳಕೆ ಮಾಡುವುದರಿಂದ ಮುಖದಲ್ಲಿನ ಡೆಡ್ ಸ್ಕಿನ್ ಹೆಲ್ದಿಯಾಗುತ್ತದೆ. ಚರ್ಮ ಡಿಹೈಡ್ರೇಟ್ ಆಗಿದ್ರೆ ಅದನ್ನ ಹೈಡ್ರೆಟ್ ಮಾಡುವುದಕ್ಕೂ ಈ ಕ್ರೀಂ ಉತ್ತಮವಾಗಿದೆ.

ವಿಷಯಗಳು: #kannada #karnataka #peepal #peepalmedia
PPeepal Media Desk

Peepal Media Desk

Peepal Media · ಆರೋಗ್ಯ ವಿಭಾಗ

ಸಂಬಂಧಿತ ಸುದ್ದಿಗಳು