ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಸಂಶಯವಿದ್ದಾಗ ಇನ್ನೊಬ್ಬ ವೈದ್ಯರ ಅಭಿಪ್ರಾಯ ಪಡೆಯುವುದು ಒಳಿತು

PPeepal Media

Peepal Media ಆರೋಗ್ಯ

• 2 ನಿಮಿಷದ ಓದು

ಸಂಶಯವಿದ್ದಾಗ ಇನ್ನೊಬ್ಬ ವೈದ್ಯರ ಅಭಿಪ್ರಾಯ ಪಡೆಯುವುದು ಒಳಿತು

ಯಾವುದೇ ಸಂದರ್ಭದಲ್ಲಿ ನಾವು ಪಡೆಯುವ ಚಿಕಿತ್ಸೆಯಲ್ಲಿ ನಮಗೆ ಸಂಶಯ ಬಂದರೆ ಇನ್ನೊಬ್ಬ ವೈದ್ಯರ ಸಲಹೆ ಅಭಿಪ್ರಾಯ ಪಡೆದು ಮುಂದುವರೆಯುವುದು ಒಳಿತು. ನಾನು ಕಂಡ ಘಟನೆಯೊಂದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ- ಶೋಭಲತ ಸಿ. ಸ್ಟಾಫ್‌ ನರ್ಸ್‌, ಕಾಸರಗೋಡು

ಸುಮಾರು 20 ವರ್ಷಗಳ ಹಿಂದೆ ಒಂದು  ದಿನ ಗಿರೀಶ ನಗುಮುಖದಿಂದ ಬಂದ. ಏನೋ ಸಂತಸದ ಸುದ್ದಿ ತಂದಿರಬೇಕು ಅಂದುಕೊಂಡೆ. 

‘ಏನೋ ಗಿರೀಶಾ, ಏನಿವತ್ತು ವಿಶೇಷ?’

‘ ಅಕ್ಕಾ, ತಂಗಿ ಸುಜಾತ ಗರ್ಭಿಣಿ ಅಂತೆ. 3 ತಿಂಗಳು ಕಳೆಯಿತಂತೆ ‘ 

‘ಓಹೋ… ಮದುವೆಯಾಗಿ ಎರಡು ವರ್ಷ ಕಳೆಯಿತಲ್ಲಾ… ಸಂತೋಷ’

ಗಿರೀಶನಿಗೆ ಮನೆಯ ವಿಷಯಗಳನ್ನು ಆಗಾಗ ಹೇಳುವ ಹವ್ಯಾಸ… ಅವನ ಸಂತೋಷದಲ್ಲಿ ನನಗೂ ಪಾಲು.

‘ಡಾಕ್ಟರ್ ಗೆ ತೋರಿಸುತ್ತಿದ್ದಾರಲ್ಲಾ.. ಡಾಕ್ಟರ್ ಹೇಳಿದಂತೆ ನಡೆಯಿರಿ.. ಮಾವ ಆಗ್ತಾ ಇದ್ದೀಯಲ್ಲಾ…’ ಕಿಚಾಯಿಸಿದೆ.

‘ಹೌದಕ್ಕಾ … ಮುಂದಿನ ತಿಂಗಳು ಸ್ಕ್ಯಾನಿಂಗ್ ಮಾಡಲು ಹೇಳಿದ್ದಾರಂತೆ ..’

ಒಂದು ತಿಂಗಳು ಕಳೆದು ಬಂದ ಗಿರೀಶನ ಮುಖದಲ್ಲಿ ನಗು ಇರಲಿಲ್ಲ. ಏನೋ ತಿಳಿಯಲು ಆತುರದಿಂದ ಬಂದಂತಿದ್ದ.

‘ಏನೋ ಗಿರೀಶಾ, ಏನಾಯಿತು?’ ನನ್ನ ಪ್ರಶ್ನೆಗೆ, ‘ಅಕ್ಕಾ, ಸುಜಾತಳಿಗೆ ನಿನ್ನೆ ಸ್ಕ್ಯಾನಿಂಗ್ ಮಾಡಿಸಿದರಂತೆ, ಮಗುವಿಗೆ ಏನೋ ಅಂಗವೈಕಲ್ಯ ಇದೆಯಂತೆ. ವಿಕಲಾಂಗ ಮಗು ಜನಿಸುವುದಕ್ಕಿಂತ ಅದನ್ನು ಅಬಾರ್ಷನ್ ಮಾಡಿ ತೆಗೆಯುವುದು ಒಳ್ಳೆಯದೆಂದು ಡಾಕ್ಟರ್ ಹೇಳಿದರಂತೆ’ ಅವನ ಮಾತಿನಲ್ಲಿ ಬೇಸರ ಕಾಣಿಸಿತು.

‘ಅವಸರ ಮಾಡಬೇಡ. ಸ್ಕ್ಯಾನಿಂಗ್ ಮೆಷಿನ್ ಗಳು ಕೆಲವೊಮ್ಮೆ ಸರಿಯಾಗಿ ತೋರಿಸುವುದಿಲ್ಲ. ಒಳ್ಳೆಯ ಸ್ಕ್ಯಾನಿಂಗ್ ಸೆಂಟರ್ ಗೆ ಹೋಗಿ ಇನ್ನೊಮ್ಮೆ ಸ್ಕ್ಯಾನ್ ಮಾಡಿ ತಜ್ಞರ ಅಭಿಪ್ರಾಯ ತಿಳಿದು ಅಗತ್ಯ ಬಂದಲ್ಲಿ ಮತ್ತೆ ಅಬಾರ್ಷನ್ ಮಾಡಬಹುದಲ್ಲಾ…’ ನನ್ನದೊಂದು ಚಿಕ್ಕ ಸಲಹೆ. ಆಗ ಸಣ್ಣ ಸಣ್ಣ ಆಸ್ಪತ್ರೆಗಳಲ್ಲಿ ಇಂದಿನ ರೀತಿಯ ಸ್ಕ್ಯಾನಿಂಗ್ ಯಂತ್ರಗಳು ಬಂದಿರಲಿಲ್ಲ.

‘ಹೌದಕ್ಕಾ .. ನಾನೂ ಹಾಗೆ ಹೇಳಿದೆ. ಆದರೆ ಭಾವನವರು ಎಲ್ಲಾ ಡಾಕ್ಟರ್ ಗಳು ಹೇಳುವುದು ನಮ್ಮ ಹಿತಕ್ಕೆ ತಾನೆ? ಡಾಕ್ಟರ್ ಮೇಲೆ ವಿಶ್ವಾಸ ಬೇಕು. ಮುಂದೆ ಗರ್ಭ ಧರಿಸಲು ತೊಂದರೆ ಇಲ್ಲವಲ್ಲಾ ಎಂದು ಅಬಾರ್ಷನ್ ಮಾಡಿಸಲು ಕರೆದುಕೊಂಡು ಹೋಗಿದ್ದಾರೆ…’

ನಾನು ಮೌನವಾಗಿ ಅವನ ಮುಖ ನೋಡಿದೆ. ಆತ ಹಿಂತಿರುಗಿದ.

ಮರುದಿನ ಬಂದವನೇ, ‘ ಅಕ್ಕಾ, ಸುಜಾತಳಿಗೆ ಅಬಾರ್ಷನ್ ಆಯಿತು. ಆದರೆ ಮಗುವಿನ ಅಂಗಾಂಗಗಳು ಸರಿ ಇತ್ತಂತೆ. ಇನ್ನೊಮ್ಮೆ ಸ್ಕ್ಯಾನ್ ಮಾಡಿ ನೋಡಬಹುದಿತ್ತು ಎಂದು ಡಾಕ್ಟರ್ ನೊಂದುಕೊಂಡರಂತೆ ‘

‘ಹಾಗಾ,… ಇರಲಿ ಬಿಡು… ಮುಂದೆ ಗರ್ಭ ಧರಿಸಬಹುದು’ ನಿಟ್ಟುಸಿರು  ಬಿಟ್ಟೆ.

ಮತ್ತೆ 3 ತಿಂಗಳು ಕಳೆದು ಸುಜಾತ ಮತ್ತೆ ಗರ್ಭಿಣಿಯಾದಳು. ಆದರೆ, ಐದು ತಿಂಗಳು ತುಂಬುತ್ತಲೇ, ತನ್ನಿಂದ ತಾನಾಗಿಯೇ ಅಬಾರ್ಷನ್ ಆಗಿ ಹೋಯಿತು.

ಕೆಲವು ತಿಂಗಳು ಕಳೆದು ಮತ್ತೆ ಗರ್ಭಿಣಿಯಾದಳು ಸುಜಾತ. ಈ ಸಲ ಡಾಕ್ಟರ್ ಎಚ್ಚರಿಕೆಯಿಂದ ನೋಡಿಕೊಳ್ಳತೊಡಗಿದರು..ಆರು ತಿಂಗಳು ತುಂಬಿ ಏಳನೇ ತಿಂಗಳಿಗೆ ಕಾಲಿರಿಸಿದಾಗಲೇ ಸೀಮಂತವೂ ನಡೆಯಿತು. ಆದರೆ ಅದೊಂದು ದಿನ ಹೆರಿಗೆ ನೋವು ತಟ್ಟನೆ ಕಾಣಿಸಿಕೊಂಡು  ಹೆರಿಗೆ ನಡೆದೇ ಹೋಯಿತು. ಹಳ್ಳಿಯಲ್ಲಿ ಸೂಕ್ತ ಚಿಕಿತ್ಸೆ ಸಕಾಲದಲ್ಲಿ ಸಿಗದೆ ಮಗು ತೀರಿಕೊಂಡಿತು. ಸಂತಸದ ಕುಟುಂಬದಲ್ಲಿ ದುಃಖ ಕಾಣಿಸಿಕೊಂಡಿತು. ಕೆಲ ದಿನಗಳ ಬಳಿಕ ಅವರು ತಜ್ಞ ವೈದ್ಯರನ್ನು ಭೇಟಿಯಾಗಲು ತೀರ್ಮಾನಿಸಿದರು.

ಮತ್ತೆ ಸುಜಾತ ಗರ್ಭಿಣಿಯಾದಳು. ಅವರಾಗಲೇ ತೀರ್ಮಾನಿಸಿದಂತೆ  ಪಟ್ಟಣದ ತಜ್ಞರ ಸಲಹೆ ಪಡೆದು, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದು ಒಂಭತ್ತು ತಿಂಗಳು ತುಂಬಿ ಆಕೆ ಮುದ್ದಾದ ಮಗುವಿಗೆ ಜನ್ಮ ನೀಡಿದಳು. ಆ ಕುಟುಂಬದಲ್ಲಿ ಸಂತಸ ತುಂಬಿತು. ಜೊತೆಗೆ ನಾನೂ ಖುಶಿ ಪಟ್ಟೆ.

ಇದೊಂದು ನಾನು ಕಂಡ ಘಟನೆ. ಇಂದು ಆಧುನಿಕ ತಂತ್ರಜ್ಞಾನ, ಔಷಧಿಗಳ ಲಭ್ಯತೆ ಇದ್ದರೂ ಕೆಲವು ವರ್ಷಗಳ ಹಿಂದೆ ಎಲ್ಲಾ ಕಡೆ ಸೂಕ್ತ ಸೌಕರ್ಯ, ಚಿಕಿತ್ಸಾ ಕ್ರಮಗಳು ಲಭ್ಯವಾಗುತ್ತಿರಲಿಲ್ಲ. ಮಾಹಿತಿಯ ಕೊರತೆಯಿಂದ ಅಪಾಯಗಳು ಸಂಭವಿಸುತ್ತಿದ್ದವು. ಆದರೆ ಮುಂದುವರಿದ ಈ ದಿನಗಳಲ್ಲಿ ಕೂಡಾ ಅಚಾತುರ್ಯಗಳು ನಡೆಯುತ್ತಿಲ್ಲ  ಎಂದು ಹೇಳಲಾಗದು.

ಮೇಲೆ ಹೇಳಿದ ವಿಷಯದಲ್ಲಿ ಸ್ಕ್ಯಾನಿಂಗ್ ಯಂತ್ರದ ತಪ್ಪಾದ ಮಾಹಿತಿಯಿಂದ ಮೊದಲು ಅಬಾರ್ಷನ್ ನಡೆಸಬೇಕಾಯಿತು. ಮಾಹಿತಿಯ ಕೊರತೆಯಿಂದ ಅವರು ಎರಡನೇ ಸಲಹೆ ಪಡೆಯಲು ಸಿದ್ಧರಾಗಲಿಲ್ಲ. ಕೆಟ್ಟ ಕಾಲವೋ ಎಂಬಂತೆ ಮೊದಲು ಅಬಾರ್ಷನ್ ಮಾಡಿದ ಸಮಯದಲ್ಲೇ ಮತ್ತೆ ಅಬಾರ್ಷನ್ ನಡೆದುಹೋಯಿತು. ಎಚ್ಚರಿಕೆ ವಹಿಸಿದರೂ, ಸೌಕರ್ಯಗಳ ಕೊರತೆಯಿಂದ ಮತ್ತೂ ಮಗು ಸಿಗದಾಯಿತು. ಕೊನೆಗೆ ಸೂಕ್ತ ವೈದ್ಯರ ಸಲಹೆ ಪಡೆದ ಕಾರಣ ಮಗುವನ್ನು ಪಡೆಯಲು ಸಾಧ್ಯವಾಯಿತು. 

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ  ಯಾವುದೇ ಸಂದರ್ಭದಲ್ಲಿ ನಾವು ಪಡೆಯುವ ಚಿಕಿತ್ಸೆಯಲ್ಲಿ ನಮಗೆ ಸಂಶಯ ಬಂದರೆ ಇನ್ನೊಬ್ಬ ವೈದ್ಯರ ಸಲಹೆ ಅಭಿಪ್ರಾಯ ಪಡೆದು ಮುಂದುವರೆಯುವುದು ಒಳಿತು.

ಶೋಭಲತಾ ಸಿ

ಸ್ಟಾಫ್‌ ನರ್ಸ್‌ ಹಾಗೂ ಸಾಮಾಜಿಕ ಕಾರ್ಯಕರ್ತೆ, ಕಾಸರಗೋಡು

ಇದನ್ನೂ ಓದಿ-<strong>ಸಕ್ಕರೆ ಮಾರುಕಟ್ಟೆಯ ಭಯಾನಕ ಮುಖ</strong>

ವಿಷಯಗಳು: #india #kannada #karnataka #peepal #peepalmedia
PPeepal Media

Peepal Media

Peepal Media · ಆರೋಗ್ಯ ವಿಭಾಗ

ಸಂಬಂಧಿತ ಸುದ್ದಿಗಳು