Wednesday, October 2, 2024

ಸತ್ಯ | ನ್ಯಾಯ |ಧರ್ಮ

ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡದ 47% ಸಿಬ್ಬಂದಿಗಳು: ಕಡತಗಳ ರಾಶಿ!

ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವಾಲಯಗಳು ಮತ್ತು ವಿವಿಧ ಇಲಾಖೆಗಳಲ್ಲಿ ಪ್ರಿಂಟರ್‌, ಸ್ಕ್ಯಾನರ್‌ ಇಲ್ಲ ಎಂಬ ಕಾರಣದಿಂದ ಕಡತ ವಿಲೇವಾರಿ ತಡವಾಗುತ್ತಿದೆ. ಈ ಕಾರಣಗಳನ್ನು ನೆಪವಾಗಿಟ್ಟುಕೊಂಡು ಇಲಾಖೆಗಳ 47% ಅಧಿಕಾರಿಗಳು, ಸಿಬ್ಬಂದಿಗಳು ಸಮುಯಕ್ಕೆ ಸರಿಯಾಗಿ ಕೆಲಸ ಮುಗಿಸುತ್ತಿಲ್ಲ ಎಂದು ದಿ ಫೈಲ್‌ ವರದಿ ಮಾಡಿದೆ. 

ಅಧಿಕಾರಿಗಳು, ನೌಕರರ ಹಾಜರಾತಿಯ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ಪರಿಶೀಲನೆ ನಡೆಸಿದ ಬೆನ್ನಲ್ಲೇ ಅಧಿಕಾರಿಗಳು ಕೆಲಸಗಳ್ಳರಾಗಿರುವುದು ಬೆಳಕಿಗೆ ಬಂದಿದೆ. ಪ್ರತೀ ವರ್ಷ ಇ-ಆಡಳಿತ ಇಲಾಖೆ ಕಂಪ್ಯೂಟರ್‌, ಸ್ಕ್ಯಾನರ್, ಪ್ರಿಂಟರ್‌ಗಳನ್ನು ಖರೀದಿಸುತ್ತಿದ್ದರೂ ಈ ನೆಪ ಹೇಳುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ.

ಈ ಅವ್ಯವಸ್ಥೆಯಿಂದಾಗಿ ರಾಶಿ ಕಡತಗಳು ವಿಲೇವಾರಿಯಾಗದೆ ಬಿದ್ದಿವೆ. ಇದಕ್ಕೆ ಕಾರಣ ಸ್ಕ್ಯಾನರ್, ಪ್ರಿಂಟರ್‌ಗಳು ಇಲ್ಲದೇ ಇರುವುದು ಎಂದು ಸಚಿವಾಲಯ ನೌಕರರ ಸಂಘ ಹೇಳಿರುವುದು ದಿ ಫೈಲ್‌ ಉಲ್ಲೇಖಿಸಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಮಟ್ಟದ ಸಭೆ ನಡೆಸಿದ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಇಲಾಖೆಗಳಿಗೆ ಅಗತ್ಯವಾಗಿ ಬೇಕಾದ ಕಂಪ್ಯೂಟರ್‌, ಸ್ಕ್ಯಾನರ್, ಪ್ರಿಂಟರ್‌ಗಳ ಕೊರತೆಯಾಗಿರುವುದನ್ನು ಇಲಾಖೆಯ ಕಾರ್ಯದರ್ಶಿಗಳ ಗಮನಕ್ಕೆ ತಂದು, ಈ ಸಂಬಂಧ ಕಡತ ಮಂಡಿಸಿ ಅನುಮತಿ ಪಡೆಯಲು ಸಭೆಯಲ್ಲಿ ಸೂಚಿಸಿಲಾಗಿದೆ. 

Related Articles

ಇತ್ತೀಚಿನ ಸುದ್ದಿಗಳು

You cannot copy content of this page