Monday, May 26, 2025

ಸತ್ಯ | ನ್ಯಾಯ |ಧರ್ಮ

ಕೊಡಗು, ದ.ಕ, ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆ 150 ಮಿಮೀ ಗಿಂತ ಹೆಚ್ಚಿನ ವರದಿ ಇಲ್ಲಿದೆ

ಬೆಂಗಳೂರು:ಕೊಡಗು, ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಯ ಹಲವೆಡೆ ಭಾರಿ ಮಳೆಯ ಅಬ್ಬರ ಕಂಡುಬಂದಿದ್ದು, ಮೇ 25ರ ಬೆಳಿಗ್ಗೆ 8.30ರಿಂದ ಮೇ 26ರ ಬೆಳಿಗ್ಗೆ 7.30ರ ತನಕದ ಮಳೆಮಾಪನ ಅಂಕಿಅಂಶಗಳ ಪ್ರಕಾರ ರಾಜ್ಯದ ಹಲವು ಭಾಗಗಳಲ್ಲಿ 150 ಮಿಮೀ ಗಿಂತ ಹೆಚ್ಚು ಮಳೆಯಾಗಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬಿರುನಾಣಿ ಅತಿಹೆಚ್ಚು ಮಳೆ, 258.5 ಮಿಮೀ. ಮಳೆಯಾಗಿದೆ. ನಂತರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಗುತಿಗಾರುನಲ್ಲಿ 200.5 ಮಿಮೀ., ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಂಗಡಹಳ್ಳದಲ್ಲಿ 195 ಮಿಮೀ. ಮಳೆಯಾಗಿದೆ.

ಇನ್ನೂ ಪ್ರಮುಖ ಮಳೆಯಾದ ಪ್ರದೇಶಗಳು ಹೀಗಿವೆ:

  • ಬಂಟ್ವಾಳ ತಾಲೂಕು ಸರಪಾಡಿ – 190 ಮಿಮಿ
  • ಪುತ್ತೂರು ತಾಲ್ಲೂಕು ಬೆಳಂದೂರು – 190 ಮಿಮಿ
  • ಪುತ್ತೂರು ತಾಲ್ಲೂಕು ಅಲಂಕಾರು – 178.5 ಮಿಮಿ
  • ಪುತ್ತೂರು ತಾಲ್ಲೂಕು ರಾಮಕುಂಜ – 172.5 ಮಿಮಿ
  • ಕೊಡಗು ಮಡಿಕೇರಿ ತಾಲ್ಲೂಕು ಕಡಗದಾಳು – 170.5 ಮಿಮಿ
  • ಪೊನ್ನಂಪೇಟೆ ಗೋಣಿಕೊಪ್ಪಲು – 168.5 ಮಿಮಿ
  • ಪುತ್ತೂರು ಬಡಗನೂರು – 167.5 ಮಿಮಿ
  • ಬಂಟ್ವಾಳ ಪುಣಚಾ – 166 ಮಿಮಿ
  • ಸುಳ್ಯ ಗುತಿಗಾರು – 165.5 ಮಿಮಿ
  • ಪುತ್ತೂರು ಅರಿಯಡ್ಕ – 164 ಮಿಮಿ
  • ಬಂಟ್ವಾಳ ಕವಳಮುದುರು – 163 ಮಿಮಿ
  • ಬೆಳ್ತಂಗಡಿ ಮಲವನ್ತಿಗೆ – 161.5 ಮಿಮಿ
  • ಮಡಿಕೇರಿ ಬೆಂಗೂರು – 161 ಮಿಮಿ
  • ವಿರಾಜಪೇಟೆ ಕೆದ್ಮುಲ್ಲೂರು – 160 ಮಿಮಿ
  • ಸೋಮವಾರಪೇಟೆ ಕೆದಕಲ್ – 159 ಮಿಮಿ
  • ಬಂಟ್ವಾಳ ಕೆಪು – 158.5 ಮಿಮಿ
  • ವಿರಾಜಪೇಟೆ ಹೊಸೂರು – 157.5 ಮಿಮಿ
  • ಪೊನ್ನಂಪೇಟೆ ಬಿ. ಶೆಟ್ಟಿಗೇರಿ – 157 ಮಿಮಿ
  • ಬೆಳ್ತಂಗಡಿ ಬಾರ್ಯ – 155 ಮಿಮಿ
  • ಮಡಿಕೇರಿ ಕಲಕೇರಿನಿಡುಗನೆ – 155 ಮಿಮಿ
  • ಕಾರ್ಕಳ ನೀರೆ – 153.5 ಮಿಮಿ
  • ಮಂಗಳೂರು ಪದುಮರ್ನಾಡು – 151.5 ಮಿಮಿ
  • ಮಂಗಳೂರು ಶಿರ್ಥಾಡಿ – 151.5 ಮಿಮಿ
  • ವಿರಾಜಪೇಟೆ ಬಿಳುಗುಂದ – 151 ಮಿಮಿ
  • ಉಡುಪಿ ಕುಂದಾಪುರ ಹೆಂಗವಳ್ಳಿ – 151 ಮಿಮಿ

ಈ ತೀವ್ರ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆ ನೆರೆ ಹಾಗೂ ಜಲಾವೃತ ಪರಿಸ್ಥಿತಿ ಉಂಟಾಗುವ ಸಂಭವವಿದ್ದು, ಜನರು ಮುನ್ನೆಚ್ಚರಿಕೆ ವಹಿಸಬೇಕೆಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page