Saturday, May 17, 2025

ಸತ್ಯ | ನ್ಯಾಯ |ಧರ್ಮ

ಇಂದಿನಿಂದ 5 ದಿನಗಳ ಕಾಲ ಹೆಬ್ಬಾಳ ಫ್ಲೈಓವರ್ ಬಂದ್ ; ಪರ್ಯಾಯ ಮಾರ್ಗ ಯಾವುದು?

ಬೆಂಗಳೂರು ಹೃದಯ ಭಾಗದಿಂದ ಕೊಡಿಗೆ ಹಳ್ಳಿ, ಯಲಹಂಕ ಹಾಗೂ ಏರ್ಪೋರ್ಟ್ ಕಡೆಗೆ ಹೋಗುವ ವಾಹನಗಳು ಅಗತ್ಯವಾಗಿ ಅನುಸರಿಸಬೇಕಾದ ಪ್ರಮುಖ ಮಾರ್ಗಸೂಚಿಯನ್ನು ಗಮನಿಸಬೇಕಿದೆ. ಅಗತ್ಯ ಕಾಮಗಾರಿ ಸಲುವಾಗಿ ಇಂದಿನಿಂದ 5 ದಿನಗಳ ಕಾಲ ಹೆಬ್ಬಾಳ ಫ್ಲೈಓವರ್ ಅನ್ನು ಬಂದ್ ಮಾಡಲು ಬಿಡಿಎ ನಿರ್ಧರಿಸಿದೆ. ಹೀಗಾಗಿ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೆ.ಆರ್.ಪುರ ಕಡೆಯಿಂದ ಮೇಖಿ ವೃತ್ತದ ಕಡೆಗೆ ಅಸ್ತಿತ್ವದಲ್ಲಿರುವ ಹೆಬ್ಬಾಳ ಮೇಲ್ಸ್ತುವೆಗೆ ಹೆಚ್ಚುವರಿ ಕ್ಯಾಂಪ್‌ಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.

ಹೀಗಾಗಿ ಹೆಬ್ಬಾಳ ಮೇಲೇತುವೆಯ ಮೂಲಕ ಎಸ್ಟೀಮ್ ಮಾಲ್ ನಿಂದ ಮೇಖಿ ವೃತ್ತದ ಕಡೆಗೆ ರಾತ್ರಿ 12:00 ರಿಂದ ಬೆಳಿಗ್ಗೆ 3:00 ರವರೆಗೆ ಎಲ್ಲಾ ರೀತಿಯ ವಾಹನಗಳನ್ನು ನಿಷೇಧಿಸಲಾಗಿದೆ.

ರೈಲ್ವೆ ಹಳಿಗಳ ಮೇಲೆ 33.5 ಮೀ ಉದ್ದದ 07 ಉಕ್ಕಿನ ಗರ್ಡ‌ರ್ಗಳನ್ನು ಅಳವಡಿಸುವ ಕಾಮಗಾರಿಯನ್ನು ದಿನಾಂಕ:17.05.2025 ರಿಂದ 21.05.2025 ರವರೆಗೆ ಪ್ರತಿದಿನ 3 ಗಂಟೆಗಳ ಕಾಲ ರಾತ್ರಿ 12:00 ರಿಂದ ಬೆಳಗಿನ ಜಾವ 03:00 ರವರೆಗೆ ಕೈಗೊಂಡಿರುತ್ತದೆ. ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಕಾಮಗಾರಿ ನಡೆಯುವ ಸಮಯದಲ್ಲಿ ಈ ಕೆಳಕಂಡ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ.

ಪರ್ಯಾಯ ಮಾರ್ಗವಾಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇಖಿ ವೃತ್ತದ ಕಡೆಗೆ ಚಲಿಸುವ ವಾಹನಗಳು ಎಸ್ಟೀಮ್ ಮಾಲ್‌ನಲ್ಲಿರುವ ಸರ್ವಿಸ್ ರಸ್ತೆಯನ್ನು ಪ್ರವೇಶಿಸಿ ಹೆಬ್ಬಾಳ ವೃತ್ತದಲ್ಲಿ ಹೊರ ವರ್ತುಲಕ್ಕೆ ಬಲ ತಿರುವು ಪಡೆದು ತುಮಕೂರು ಮಾರ್ಗವಾಗಿ ಚಲಿಸಿ, ಕುವೆಂಪು ವೃತ್ತದಲ್ಲಿ ಎಡ ತಿರುವು ಪಡೆದು ನ್ಯೂ ಬಿಇಎಲ್ ರಸ್ತೆ, ಮೂಲಕ ಮೇಖ್ರಿ ಸರ್ಕಲ್ ತಲುಪಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page