Friday, April 11, 2025

ಸತ್ಯ | ನ್ಯಾಯ |ಧರ್ಮ

ನದಿಗೆ ಬಿದ್ದ ಹೆಲಿಕಾಪ್ಟರ್: ಐಟಿ ಕಂಪನಿಯ ಸಿಇಒ ಮತ್ತು ಕುಟುಂಬ ಸಾವು

ನ್ಯೂಯಾರ್ಕ್: ಅಮೆರಿಕದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ನ್ಯೂಯಾರ್ಕ್‌ನಲ್ಲಿ ಪ್ರವಾಸಿ ಹೆಲಿಕಾಪ್ಟರ್ ಆಕಸ್ಮಿಕವಾಗಿ ನದಿಗೆ ಅಪ್ಪಳಿಸಿದ್ದು, ಈ ಘಟನೆಯಲ್ಲಿ ಟೆಕ್ ಕಂಪನಿಯ ಸಿಇಒ ಮತ್ತು ಅವರ ಕುಟುಂಬ ಸಾವಿಗೀಡಾಗಿದೆ.

ಈ ಘಟನೆ ಅಮೆರಿಕದ ಕಾಲಮಾನದ ಪ್ರಕಾರ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಜರ್ಮನ್ ತಂತ್ರಜ್ಞಾನ ದೈತ್ಯ ಸೀಮೆನ್ಸ್‌ನ ಸ್ಪ್ಯಾನಿಷ್ ವಿಭಾಗದ ಸಿಇಒ ಮತ್ತು ಮುಖ್ಯಸ್ಥ ಆಗಸ್ಟಿನ್ ಎಸ್ಕೋಬಾರ್ ತಮ್ಮ ಕುಟುಂಬದೊಂದಿಗೆ ನ್ಯೂಯಾರ್ಕ್‌ಗೆ ಆಗಮಿಸಿದ್ದರು. ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಹಡ್ಸನ್ ನದಿಯ ಮೇಲೆ ಹಾರುತ್ತಿದ್ದಾಗ ಅಪಘಾತಕ್ಕೀಡಾಯಿತು. ಹೆಲಿಕಾಪ್ಟರ್‌ ಗಿರಗಿರನೆ ತಿರುಗಿ ನದಿಗೆ ತಲೆಕೆಳಗಾಗಿ ಬಿದ್ದಿತು. ಬೆಂಕಿ ಕಾಣಿಸಿಕೊಂಡು ಹೆಲಿಕಾಪ್ಟರ್‌ನಲ್ಲಿದ್ದ ಆರು ಜನರು ಸಾವನ್ನಪ್ಪಿದ್ದಾರೆ.

ಮೃತಪಟ್ಟವರಲ್ಲಿ ಎಸ್ಕೋಬಾರ್, ಅವರ ಪತ್ನಿ, ಮೂವರು ಮಕ್ಕಳು ಮತ್ತು ಪೈಲಟ್ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತಕ್ಕೀಡಾದ ಬೆಲ್ 206 ಹೆಲಿಕಾಪ್ಟರ್ ಅನ್ನು ನ್ಯೂಯಾರ್ಕ್ ಹೆಲಿಕಾಪ್ಟರ್ ಟೂರ್ಸ್ ದೃಶ್ಯವೀಕ್ಷಣೆಗೆ ಬಳಸುತ್ತಿದೆ. ಮಾಹಿತಿ ಪಡೆದ ನಂತರ, ರಕ್ಷಣಾ ಸಿಬ್ಬಂದಿ ದೋಣಿಗಳ ಸಹಾಯದಿಂದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಹೆಲಿಕಾಪ್ಟರ್ ಸಂಪೂರ್ಣವಾಗಿ ತಲೆಕೆಳಗಾಗಿ ಮುಳುಗಿರುವುದು ಬೆಳಕಿಗೆ ಬಂದಿದೆ. ಗಾಳಿಯಲ್ಲಿ ಹಾರುತ್ತಿದ್ದಾಗ ಹೆಲಿಕಾಪ್ಟರ್‌ನ ಒಂದು ಭಾಗ ಮುರಿದು ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಘಾತ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page