ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯ ಅಧಿಸೂಚನೆ, ಕರ್ನಾಟಕಕ್ಕೆ ಗರಿಷ್ಠ ಪ್ರದೇಶ ವಿವರಗಳು ಇಲ್ಲಿದೆ

ನವದೆಹಲಿ: ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಸಚಿವಾಲಯವು ಜುಲೈ 27, 2026 ರಂದು 7ನೇ ಕರಡು ಅಧಿಸೂಚನೆಯನ್ನು (Draft Notification) ಹೊರಡಿಸಿದೆ. ಪ್ರಸ್ತಾಪಿತ ‘ಪರಿಸರ ಸೂಕ್ಷ್ಮ ವಲಯ’ವು (Ecologically Sensitive Area – ESA) ಕರ್ನಾಟಕ ಸೇರಿದಂತೆ ದೇಶದ 6 ರಾಜ್ಯಗಳಲ್ಲಿ ಒಟ್ಟು 56,825.7 ಚದರ ಕಿಲೋಮೀಟರ್ ಪ್ರದೇಶವನ್ನು ಒಳಗೊಂಡಿದೆ.

ವಿಶ್ವದ ಪ್ರಮುಖ ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟ ಪ್ರದೇಶವು ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಗೋವಾ ಮತ್ತು ಗುಜರಾತ್ ರಾಜ್ಯಗಳಾದ್ಯಂತ ಹಬ್ಬಿದೆ.

ಕೇಂದ್ರ ಸರ್ಕಾರದಿಂದ ಪಶ್ಚಿಮ ಘಟ್ಟಗಳ 56,825.7 ಚದರ ಕಿಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (ESA) ಎಂದು ಘೋಷಿಸಲು 7ನೇ ಕರಡು ಅಧಿಸೂಚನೆ. ಕರ್ನಾಟಕಕ್ಕೆ ಗರಿಷ್ಠ ಪ್ರದೇಶ. ಸಂಪೂರ್ಣ ವಿವರಗಳು ಇಲ್ಲಿದೆ.

 ರಾಜ್ಯವಾರು ಹಂಚಿಕೆಯಾದ ಸೂಕ್ಷ್ಮ ವಲಯದ ವಿಸ್ತೀರ್ಣ

  • ಕರ್ನಾಟಕ: 20,668 ಚದರ ಕಿ.ಮೀ (ಅತಿ ಹೆಚ್ಚು)
  • ಮಹಾರಾಷ್ಟ್ರ: 17,340 ಚದರ ಕಿ.ಮೀ
  • ಕೇರಳ: 9,993.7 ಚದರ ಕಿ.ಮೀ
  • ತಮಿಳುನಾಡು: 6,914 ಚದರ ಕಿ.ಮೀ
  • ಗೋವಾ: 1,461 ಚದರ ಕಿ.ಮೀ (108 ಹಳ್ಳಿಗಳು ಸೇರ್ಪಡೆ)
  • ಗುಜರಾತ್: 449 ಚದರ ಕಿ.ಮೀ

 ಇಎಸ್‌ಎ (ESA) ವಲಯದಲ್ಲಿ ನಿಯಮಗಳು ಮತ್ತು ನಿಷೇಧಗಳು

ಪರಿಸರ (ಸಂರಕ್ಷಣೆ) ಕಾಯ್ದೆ 1986ರ ಅಡಿಯಲ್ಲಿ ಈ ಸೂಕ್ಷ್ಮ ವಲಯವನ್ನು ಗುರುತಿಸಲಾಗಿದ್ದು, ಈ ಕೆಳಗಿನ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ:

  • ಗಣಿಗಾರಿಕೆ, ಕಲ್ಲು ಗಣಿಗಾರಿಕೆ (Quarrying) ಮತ್ತು ಮರಳು ತೆಗೆಯುವುದು.
  • ಹೊಸ ಥರ್ಮಲ್ ಪವರ್ ಪ್ಲಾಂಟ್‌ಗಳ ಸ್ಥಾಪನೆ.
  • ಬೃಹತ್ ನಿರ್ಮಾಣ ಯೋಜನೆಗಳು ಮತ್ತು ಅಪಾಯಕಾರಿ ಕೈಗಾರಿಕೆಗಳು.
  • ಜಲವಿದ್ಯುತ್ (Hydel Power) ಯೋಜನೆಗಳಿಗೆ ಕಠಿಣ ನಿಯಂತ್ರಣ ನಿಯಮಗಳು ಅನ್ವಯಿಸುತ್ತವೆ.

ಅಭಿಪ್ರಾಯ ಸಂಗ್ರಹ ಮತ್ತು ಸಮಿತಿ ವರದಿ: ಸಾರ್ವಜನಿಕರು ಮತ್ತು ರಾಜ್ಯ ಸರ್ಕಾರಗಳ ಆಕ್ಷೇಪಣೆಗಳನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿದೆ. ಸಂಜಯ್ ಕುಮಾರ್ ನೇತೃತ್ವದ ತಜ್ಞರ ಸಮಿತಿಯ ಅವಧಿಯನ್ನು ಜುಲೈ 2027 ರವರೆಗೆ ವಿಸ್ತರಿಸಲಾಗಿದ್ದು, ಈ ಸಮಿತಿಯು ರಾಜ್ಯಗಳ ಕುಂದುಕೊರತೆಗಳನ್ನು ಪರಿಶೀಲಿಸಲಿದೆ. ಸ್ಥಳೀಯರ ಜೀವನೋಪಾಯ ಮತ್ತು ಅಭಿವೃದ್ಧಿಗೆ ಧಕ್ಕೆಯಾಗಲಿದೆ ಎಂದು ಕರ್ನಾಟಕ ಮತ್ತು ಕೇರಳ ರಾಜ್ಯಗಳು ತಮ್ಮ ಕಳವಳವನ್ನು ವ್ಯಕ್ತಪಡಿಸಿವೆ.

Related Articles

ಇತ್ತೀಚಿನ ಸುದ್ದಿಗಳು