Monday, February 3, 2025

ಸತ್ಯ | ನ್ಯಾಯ |ಧರ್ಮ

ಹಣಕಾಸು ಸಚಿವೆ ಸೀತಾರಾಮನ್ ಅವರ ಭಾಷಣದ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ

  • ತೆರಿಗೆ, ನಗರಾಭಿವೃದ್ಧಿ, ಗಣಿಗಾರಿಕೆ, ಹಣಕಾಸು ವಲಯ, ವಿದ್ಯುತ್ ಮತ್ತು ನಿಯಂತ್ರಕ ಸುಧಾರಣೆಗಳು ಸೇರಿ 6 ಕ್ಷೇತ್ರಗಳ ಸುಧಾರಣೆಗೆ ಬಜೆಟ್​ನಲ್ಲಿ ಘೋಷಣೆ
  • ಯುವಕರು, ಮಹಿಳೆಯರು ಮತ್ತು ರೈತರನ್ನು ಕೇಂದ್ರೀಕರಿಸುವ ಗ್ರಾಮೀಣ ಸಮೃದ್ಧಿ ಕಾರ್ಯಕ್ರಮ ಪ್ರಾರಂಭ
  • ತೊಗರಿ, ಉದ್ದು ಮತ್ತು ಹೆಸರು ಬೇಳೆ ಮೇಲೆ ವಿಶೇಷ ಗಮನ ಹರಿಸಿ ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರಕ್ಕಾಗಿ 6 ​​ವರ್ಷಗಳ ಕಾರ್ಯಕ್ರಮ ಪ್ರಾರಂಭ
  • ತರಕಾರಿಗಳು, ಹಣ್ಣುಗಳ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಲಾಭದಾಯಕ ಬೆಲೆಗಳನ್ನು ಒದಗಿಸಲು ಸಮಗ್ರ ಕಾರ್ಯಕ್ರಮ ಘೋಷಣೆ
  • ಹೆಚ್ಚಿನ ಇಳುವರಿ ನೀಡುವ ಬೀಜಗಳ ರಾಷ್ಟ್ರೀಯ ಮಿಷನ್​ ಪ್ರಾರಂಭ
  • ಹತ್ತಿ ಉತ್ಪಾದನೆ ಉತ್ತೇಜಿಸಲು 5 ವರ್ಷಗಳ ಯೋಜನೆ ಘೋಷಿಸಿದ​ ಹಣಕಾಸು ಸಚಿವ ಸೀತಾರಾಮನ್
  • ಗುಣಮಟ್ಟದ ಉತ್ಪನ್ನಗಳೊಂದಿಗೆ, 45%ರಷ್ಟು ರಫ್ತಿನ ಮೇಲೆ ಎಂಎಸ್​​​ಎಂಇಗಳೇ ಜವಾಬ್ದಾರರರು. ಎಂಎಸ್​​​ಎಂಇ ವರ್ಗೀಕರಣಕ್ಕಾಗಿ ಹೂಡಿಕೆ ಮತ್ತು ವಹಿವಾಟು ಮಿತಿ ಹೆಚ್ಚಳ
  • ಭಾರತ ಅಂಚೆ ಇಲಾಖೆಯು 1.5 ಲಕ್ಷ ಗ್ರಾಮೀಣ ಅಂಚೆ ಕಚೇರಿಗಳನ್ನು ಹೊಂದಿರುವ ದೊಡ್ಡ ಸಾರ್ವಜನಿಕ ಲಾಜಿಸ್ಟಿಕ್ ಸಂಸ್ಥೆಯಾಗಿ ರೂಪಾಂತರಗೊಳ್ಳಲಿದೆ, ಇದು ಗ್ರಾಮೀಣ ಆರ್ಥಿಕತೆಗೆ ವೇಗವರ್ಧಕವಾಗಲಿದೆ.

1.ಮೂಲಸೌಕರ್ಯ ಅಭಿವೃದ್ಧಿಯತ್ತ ಗಮನ: ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವ ಗುರಿ ಹೊಂದಿರುವ ಮೂಲಸೌಕರ್ಯ ವಲಯಕ್ಕೆ ಕೇಂದ್ರ ಬಜೆಟ್​ನಲ್ಲಿ ಪ್ರಮುಖ ಆದ್ಯತೆ ನೀಡಲಾಗಿದೆ. ಕೆಲವು ಪ್ರಮುಖ ಉಪಕ್ರಮಗಳನ್ನು ಇದು ಒಳಗೊಂಡಿವೆ:

ಐಐಟಿಗಳ ವಿಸ್ತರಣೆ: ಹೆಚ್ಚುವರಿ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಸರ್ಕಾರವು ಐಐಟಿ ಪಾಟ್ನಾ ಸೇರಿ ವಿವಿಧ ಐದು ಐಐಟಿಗಳಲ್ಲಿ ಮೂಲಸೌಕರ್ಯ ಹೆಚ್ಚಿಸುತ್ತಿದೆ.

ಪ್ರಾದೇಶಿಕ ಸಂಪರ್ಕ: ಮಾರ್ಪಡಿಸಿದ ಉಡಾನ್ ಯೋಜನೆಯು 120 ಹೊಸ ತಾಣಗಳನ್ನು ಸೇರಿಸುವ ಮೂಲಕ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲಿದೆ. ಇದರಿಂದ ಮುಂದಿನ 10 ವರ್ಷಗಳಲ್ಲಿ ನಾಲ್ಕು ಕೋಟಿ ಪ್ರಯಾಣಿಕರ ದಟ್ಟಣೆಯು ಹೆಚ್ಚಳವಾಗಲಿದೆ. ವಿಶೇಷವಾಗಿ ಗುಡ್ಡಗಾಡು, ಮಹತ್ವಾಕಾಂಕ್ಷಿ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಸಣ್ಣ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ.

ಬಿಹಾರದಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ: ಬಿಹ್ತಾದಲ್ಲಿ ಪಾಟ್ನಾ ವಿಮಾನ ನಿಲ್ದಾಣ ಮತ್ತು ಬ್ರೌನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ವಿಸ್ತರಿಸುವ ಯೋಜನೆಗಳೊಂದಿಗೆ ಬಿಹಾರದಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಹಣಕಾಸಿನ ನೆರವು ನೀಡಲಾಗುವುದು.

2. ಡಿಜಿಟಲ್ ಆರ್ಥಿಕತೆ ಮತ್ತು ನಾವೀನ್ಯತೆ: ತಂತ್ರಜ್ಞಾನ, ನಾವೀನ್ಯತೆ ಮತ್ತು ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯ ಮೇಲೆ ಕೇಂದ್ರೀಕರಿಸಿ ಡಿಜಿಟಲ್ ಆರ್ಥಿಕತೆಯು ಭಾರತದ ಬೆಳವಣಿಗೆಯ ಮೂಲಾಧಾರವಾಗಿದೆ:

ತೆರಿಗೆ ಪರಿಹಾರ ಸ್ಟಾರ್ಟ್‌ಅಪ್‌ಗಳು: ಸ್ಟಾರ್ಟ್‌ಅಪ್‌ಗಳಿಗಾಗಿ ಹೊಸ 10,000 ಕೋಟಿ ರೂ. ನಿಧಿ ಸ್ಥಾಪನೆಯನ್ನು ಹಣಕಾಸು ಸಚಿವರು ಘೋಷಿದ್ದಾರೆ. ಸರ್ಕಾರವು ಸ್ಟಾರ್ಟ್‌ಅಪ್‌ಗಳ ಏಕೀಕರಣ ಅವಧಿಯನ್ನು 5 ವರ್ಷಗಳಿಗೆ ಹೆಚ್ಚಿಸಲಿದೆ.

MSMEಗಳಿಗೆ ಹೆಚ್ಚಿನ ಬೆಂಬಲ: ಸರ್ಕಾರವು ಬಜೆಟ್​​ನಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ವಲಯದ ಬೆಳವಣಿಗೆಯ ಮೇಲೆ ಗಮನ ನೀಡಿದೆ. ಎಂಎಸ್​ಎಂಇ ವ್ಯಾಪ್ತಿಯನ್ನು 5 ಕೋಟಿ ರೂ.ಗಳಿಂದ 10 ಕೋಟಿ ರೂ.ಗಳಿಗೆ ಹೆಚ್ಚಿಸುತ್ತಿದೆ. MSMEಗಳು ಉತ್ಪಾದನಾ ವಲಯಕ್ಕೆ ಗಣನೀಯ ಕೊಡುಗೆ ನೀಡುತ್ತವೆ.

3. ಸರಳೀಕೃತ ವ್ಯವಸ್ಥೆಗಾಗಿ ತೆರಿಗೆ ಸುಧಾರಣೆ: ಸರಳ ತೆರಿಗೆ ರಚಿಸುವತ್ತ ಸರ್ಕಾರ ಗಮನಹರಿಸಿದೆ, ಇದು ತೆರಿಗೆದಾರರಿಗೆ ಗಮನಾರ್ಹ ಸಹಾಯ ನೀಡಲಿದೆ:

ಪರಿಷ್ಕೃತ ಆದಾಯ ತೆರಿಗೆ ಸ್ಲ್ಯಾಬ್‌ಗಳು: ಹೊಸ ಆದಾಯ ತೆರಿಗೆ ವ್ಯವಸ್ಥೆ ರೂಪಿಸಲಾಗಿದ್ದು, ಇದನ್ನು ಮಧ್ಯಮ ವರ್ಗದ ತೆರಿಗೆದಾರರ ಮೇಲಿನ ಹೊರೆ ಕಡಿಮೆ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದರಿಂದ ಪ್ರಮುಖ ಪ್ರಯೋಜನವೆಂದರೆ, ಹೊಸ ತೆರಿಗೆ ಪದ್ಧತಿ ಮತ್ತು 75,000 ರೂ.ಗಳ ಪ್ರಮಾಣಿತ ಕಡಿತದಿಂದಾಗಿ ವಾರ್ಷಿಕವಾಗಿ 12 ಲಕ್ಷ ರೂ.ಗಳವರೆಗೆ ಗಳಿಸುವ ವ್ಯಕ್ತಿಗಳು ಯಾವುದೇ ಆದಾಯ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಇದರ ಪ್ರಕಾರ ತೆರಿಗೆ ವಿನಾಯಿತಿಗೆ ಮಿತಿ ರೂ. 12.75 ಲಕ್ಷ ರೂ.ಗಳಾಗಿದೆ.

4. ಆರೋಗ್ಯ ಮತ್ತು ಶಿಕ್ಷಣದ ಮೇಲೆ ಗಮನ: ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಆರೋಗ್ಯಕರ, ವಿದ್ಯಾವಂತ ಜನಸಂಖ್ಯೆಯ ಮಹತ್ವ ಗುರುತಿಸಿದ ಸರ್ಕಾರ:

ವೈದ್ಯಕೀಯ ಕಾಲೇಜು ಸೀಟುಗಳ ವಿಸ್ತರಣೆ: ಮುಂದಿನ ವರ್ಷದಲ್ಲಿ ಸರ್ಕಾರವು 10,000 ವೈದ್ಯಕೀಯ ಕಾಲೇಜು ಸೀಟುಗಳು ಮತ್ತು ಮುಂದಿನ ಐದು ವರ್ಷಗಳಲ್ಲಿ 75,000 ಸೀಟುಗಳನ್ನು ಹೆಚ್ಚಿಸಲಿದೆ.

ಡೇಕೇರ್ ಕ್ಯಾನ್ಸರ್ ಕೇಂದ್ರಗಳು: ಕೇಂದ್ರದ ಚಿಕಿತ್ಸಾ ಯೋಜನೆಗಳು ಹೆಚ್ಚಾಗಿ ಲಭ್ಯವಾಗುವ ನಿಟ್ಟಿನಲ್ಲಿ ದೇಶಾದ್ಯಂತ ಜಿಲ್ಲಾ ಆಸ್ಪತ್ರೆಗಳಲ್ಲಿ ಡೇಕೇರ್ ಕ್ಯಾನ್ಸರ್ ಕೇಂದ್ರಗಳನ್ನು ಸ್ಥಾಪಿಸುವ ಹೊಸ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಪ್ರಾರಂಭಿಸಲಾಗುವುದು.

5. ರೈತರು ಮತ್ತು ಕೃಷಿಗೆ ಬೆಂಬಲ: ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ರೈತರನ್ನು ಬೆಂಬಲಿಸಲು ಹಲವಾರು ಉಪಕ್ರಮಗಳೊಂದಿಗೆ ಕೃಷಿ ಕ್ಷೇತ್ರದತ್ತ ಪ್ರಮುಖ ಗಮನ ನೀಡಲಾಗಿದೆ:

ಬಿಹಾರದಲ್ಲಿ ಮಖಾನಾ ಮಂಡಳಿ: ಮಖಾನಾದ ಉತ್ಪಾದನೆ, ಸಂಸ್ಕರಣೆ ಮತ್ತು ಮಾರುಕಟ್ಟೆಯನ್ನು ಸುಧಾರಿಸಲು, ಹೊಸ ಮಂಡಳಿಯನ್ನು ಸ್ಥಾಪಿಸಲಾಗುವುದು. ಇದು ಬಿಹಾರದಲ್ಲಿ ರೈತರ ಜೀವನೋಪಾಯವನ್ನು ಹೆಚ್ಚಿಸಲಿದೆ ಹಾಗೂ ಅಲ್ಲಿನ ಆರ್ಥಿಕ ಬೆಳವಣಿಗೆಗೆ ನೆರವಾಗಲಿದೆ.

ಪಿಎಂ ಧನ್ ಧ್ಯಾನ್​ ಕೃಷಿ ಯೋಜನೆ: ಈ ಯೋಜನೆಯು ಕಡಿಮೆ ಉತ್ಪಾದಕತೆ ಹೊಂದಿರುವ 100 ಜಿಲ್ಲೆಗಳನ್ನು ಒಳಗೊಂಡು ಜಾರಿಯಾಗಲಿದೆ. ಇದರಿಂದ 1.7 ಕೋಟಿ ರೈತರಿಗೆ ಪ್ರಯೋಜನವಾಗಲಿದೆ. ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಮತ್ತು ಪಂಚಾಯತ್ ಮಟ್ಟದಲ್ಲಿ ಸಂಗ್ರಹಣಾ ಸಾಮರ್ಥ್ಯವನ್ನು ಸುಧಾರಿಸುವ ಗುರಿ ಹೊಂದಲಾಗಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಮಿತಿ ಹೆಚ್ಚಳ: ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸುಲಭವಾಗಿ ಸಾಲ ದೊರೆಯುವಂತೆ ಮಾಡಲು ಅದರ ಮಿತಿಯನ್ನು ರೂ. 3 ಲಕ್ಷದಿಂದ ರೂ. 5 ಲಕ್ಷಕ್ಕೆ ಹೆಚ್ಚಿಸಲಾಗುತ್ತಿದೆ.

6. ಹಸಿರು ವಲಯದ ಬೆಳವಣಿಗೆ ಮತ್ತು ಹವಾಮಾನದ ಬಗ್ಗೆ ಕ್ರಮ:

ವಿದ್ಯುತ್ ವಾಹನ (ಇವಿ) ಮೂಲಸೌಕರ್ಯ: ಇವಿ ಬ್ಯಾಟರಿ ತಯಾರಿಕೆಗೆ ಅಗತ್ಯವಿರುವ ಬಂಡವಾಳ ಸರಕುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕ (ಬಿಸಿಡಿ) ದಿಂದ ವಿನಾಯಿತಿ ನೀಡಲಾಗುತ್ತಿದೆ. ಇದರಿಂದ ಸೆಲ್ ಉತ್ಪಾದನಾ ಘಟಕಗಳ ಸ್ಥಾಪನೆಯು ಹೆಚ್ಚಾಗಿ ಕೈಗೆಟುಕುವಂತಾಗುತ್ತದೆ. ಇದು ಭಾರತದ ಇವಿ ಉದ್ಯಮದ ಬೆಳವಣಿಗೆಗೆ ನೆರವಾಗಲಿದೆ.

ಪರಮಾಣು ಶಕ್ತಿ ಸಾಮರ್ಥ್ಯ: ಶುದ್ಧ ಇಂಧನ ಮೂಲಗಳಿಗೆ ಪರಿವರ್ತನೆಗೊಳ್ಳುವ ಪ್ರಯತ್ನಗಳ ಭಾಗವಾಗಿ ಭಾರತವು 2047ರ ವೇಳೆಗೆ 100 ಗಿಗಾವ್ಯಾಟ್ ಪರಮಾಣು ಶಕ್ತಿಯನ್ನು ಅಭಿವೃದ್ಧಿಪಡಿಸಲು ಯೋಜಿಸಿದೆ.

7. ಸಮಾಜ ಕಲ್ಯಾಣ ಯೋಜನೆ ಬಲಪಡಿಸುವುದು: ನೇರ ಕಲ್ಯಾಣ ಕಾರ್ಯಕ್ರಮಗಳ ಮೂಲಕ ತಳ ಸಮುದಾಯಗಳಿಗೆ ಸರ್ಕಾರ ಬೆಂಬಲ:

ಗಿಗ್ ಕಾರ್ಮಿಕರ ಗುರುತಿಸುವಿಕೆ: ಒಂದು ಕೋಟಿ ಗಿಗ್ ಕಾರ್ಮಿಕರಿಗೆ ಇ-ಶ್ರಮ್ ಪೋರ್ಟಲ್ ಅಡಿಯಲ್ಲಿ ಗುರುತಿನ ಚೀಟಿಗಳು ಮತ್ತು ನೋಂದಣಿ ಸಂಖ್ಯೆಗಳನ್ನು ನೀಡಲಾಗುತ್ತಿದೆ. ಈ ಮೂಲಕ ಅವರ ಹಕ್ಕುಗಳು ಮತ್ತು ಸಾಮಾಜಿಕ ಭದ್ರತೆ ಒದಗಿಸಲಾಗುತ್ತಿದೆ.

SC/ST ಮಹಿಳಾ ಉದ್ಯಮಿಗಳ ಯೋಜನೆ: ಹೊಸ ಯೋಜನೆಯು SC/ST ಸಮುದಾಯಗಳ 5 ಲಕ್ಷ ಮಹಿಳೆಯರಿಗೆ ಬೆಂಬಲ ನೀಡಲಿದೆ. ಮುಂದಿನ 5 ವರ್ಷಗಳಲ್ಲಿ ಉದ್ಯಮಶೀಲತೆಯನ್ನು ಬೆಳೆಸಲು 2 ಕೋಟಿ ರೂ.ಗಳವರೆಗೆ ಕಂತಿನ ಸಾಲಗಳನ್ನು ನೀಡಲಾಗುತ್ತಿದೆ.

8. ವಿದೇಶಿ ಹೂಡಿಕೆ ಮತ್ತು ವ್ಯಾಪಾರ: ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಸ್ಥಾನವನ್ನು ಹೆಚ್ಚಿಸಲು, 2025ರ ಬಜೆಟ್ ವಿದೇಶಿ ಹೂಡಿಕೆಯನ್ನು ಹೆಚ್ಚಿಸುವ ಮತ್ತು ರಫ್ತುಗಳನ್ನು ಬೆಂಬಲಿಸುವ ಗುರಿ ಹೊಂದಿರುವ ಹಲವಾರು ಕ್ರಮಗಳನ್ನು ಒಳಗೊಂಡಿದೆ:

ವಿಮೆಯಲ್ಲಿ FDI: ವಿಮಾ ವಲಯಕ್ಕೆ FDI ಮಿತಿಯನ್ನು ಶೇ.74 ರಿಂದ ಶೇ.100ಕ್ಕೆ ಹೆಚ್ಚಿಸಲಾಗುವುದು, ಇದು ಉದ್ಯಮದಲ್ಲಿ ವಿದೇಶಿ ಹೂಡಿಕೆಯನ್ನು ಉತ್ತೇಜಿಸುತ್ತದೆ.

ರಫ್ತು ಉತ್ತೇಜನ ಮಿಷನ್: ರಫ್ತು ಕಾರ್ಯವಿಧಾನಗಳನ್ನು ಸುಗಮಗೊಳಿಸಲು ಮತ್ತು ರಫ್ತುದಾರರಿಗೆ ಸಹಕಾರಿಯಾಗಲು ರಫ್ತು ಉತ್ತೇಜನ ಮಿಷನ್ ಸ್ಥಾಪಿಸಲಾಗುತ್ತಿದೆ.

9. 2025-26ನೇ ಹಣಕಾಸು ವರ್ಷದ ಬಜೆಟ್ ಅಂದಾಜು: 2025-26ನೇ ಹಣಕಾಸು ವರ್ಷದ ಒಟ್ಟು ಮೊತ್ತ (ಸಾಲಗಳನ್ನು ಹೊರತುಪಡಿಸಿ) 34.96 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page