Monday, January 12, 2026

ಸತ್ಯ | ನ್ಯಾಯ |ಧರ್ಮ

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಹೆತ್ತೂರು ಗ್ರಾಮ ಲೆಕ್ಕಾಧಿಕಾರಿ ಮೋಹನ್ ಕುಮಾರ್

ಸಕಲೇಶಪುರ: ಜಮೀನು ಮಂಜೂರಾತಿ ಹಾಗೂ ಸ್ಥಳ ಪರಿಶೀಲನೆಗಾಗಿ 25000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಸಕಲೇಶಪುರ ತಾಲ್ಲೂಕಿನ, ಹೆತ್ತೂರು ನಾಡಕಚೇರಿಯಲ್ಲಿ ಇಂದು ಇನಡೆದಿದೆ.

ಡಿ.ಆರ್.ಮೋಹನ್‌ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು ಲೋಕೇಶ್ ಎಂಬುವವರಿಂದ 25000 ರೂ ಹಣಕ್ಕೆ ಬೇಡಿಕೆ ಇಟ್ಟಿದ್ದ ಈ ಅಧಿಕಾರಿ.ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ಧಾಳಿ ನಡೆಸಿ ಮೋಹನ್‌ ಕುಮಾರ್‌ ಅವರನ್ನೂ ಬಂದಿಸಿದ್ದಾರೆ.

ಲಂಚದ ಹಣದ ಸಮೇತ ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು, ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಇಡೀ ಸಕಲೇಶಪುರದಲ್ಲಿ ಲೋಕಾಯುಕ್ತ ದಾಳಿಯ ವಿಚಾರ ಸಂಚಲನವನ್ನೇ ಮೂಡಿಸಿದ್ದು ಅಧಿಕಾರಿಗಳ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page