ನವದೆಹಲಿ : ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ವಿಚಾರವಾಗಿ ನಡೆಯುತ್ತಿದ್ದ ವಾಗ್ವಾದವನ್ನು ಸುಪ್ರೀಂ ಕೊರ್ಟ್ ಸೋಮವಾರಕ್ಕೆ ಮುಂದೂಡಿದೆ.
ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ವಿವಾದಗಳು ನಡೆಯುತ್ತಿದ್ದು, ಸಮವಸ್ತ್ರವೇ ಬೇರೆ ರೀತಿಯ ಶಿಸ್ತು ಪಾಲನೆ ಆದರೆ ಹಿಜಾಬ್ ವಿಭಿನ್ನವಾಗಿರುತ್ತದೆ ಎಂದು ಕೆಲವರು ಹೇಳುತ್ತಿದ್ದರೆ, ಹಿಜಾಬ್ ನಿಷೇದ ಮಾಡಿರುವುದು ತಪ್ಪು ಎನ್ನುವುದು ಹಲವರ ವಾದವಾಗಿದೆ.
ಈ ಕುರಿತು “ನಿಯಮಾವಳಿಗಳ ಪ್ರಕಾರ ಶಿಕ್ಷಣ ಸಂಸ್ಥೆಗಳಿಗೆ ಸಮವಸ್ತ್ರವನ್ನು ಸೂಚಿಸುವ ಅಧಿಕಾರವಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಈ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಮುಂದೂಡಲಾಗಿದೆ.