Tuesday, January 27, 2026

ಸತ್ಯ | ನ್ಯಾಯ |ಧರ್ಮ

ಪಶ್ಚಿಮ ಏಷ್ಯಾ: ಇಸ್ರೇಲ್ ಮೇಲೆ ಹಿಜ್ಬುಲ್ಲಾ ರಾಕೆಟ್ ದಾಳಿ!

ಟೆಲ್ ಅವೀವ್: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮುಂದುವರೆದಿದ್ದು, ಲೆಬನಾನ್ ಇಸ್ರೇಲ್ ಪ್ರದೇಶದ ಕಡೆಗೆ ಒಂದರ ಮೇಲೊಂದು ರಾಕೆಟ್‌ಗಳನ್ನು ಉಡಾಯಿಸಿದೆ. ಇದನ್ನು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ದೃಢಪಡಿಸಿದೆ.

ಆದರೆ ಅವುಗಳಲ್ಲಿ ಐದು ಮಾತ್ರ ತಮ್ಮ ಪ್ರದೇಶವನ್ನು ಪ್ರವೇಶಿಸಲು ಸಾಧ್ಯವಾಯಿತು ಎಂದು ಅದು ಹೇಳಿದೆ. ಇದರಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ-ಪಾಸ್ತಿ ನಷ್ಟವಾಗಿಲ್ಲ.

ಈ ದಾಳಿಯ ಹೊಣೆಯನ್ನು ಹಿಜ್ಬುಲ್ಲಾ ವಹಿಸಿಕೊಂಡಿದೆ. ತಮ್ಮ ಅತ್ಯಂತ ಹಿರಿಯ ಸೇನಾ ಕಮಾಂಡರ್ ಫದ್ ಶುಕ್ರ್ ಅವರ ಮರಣವನ್ನು ದೃಢಪಡಿಸಿದ 48 ಗಂಟೆಗಳ ಒಳಗೆ ಈ ದಾಳಿಗಳು ನಡೆದಿವೆ ಎಂಬುದು ಗಮನಾರ್ಹ. ಬೈರುತ್ ನಲ್ಲಿ ಮಂಗಳವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಅವರು ಪ್ರಾಣ ಕಳೆದುಕೊಂಡಿರುವುದಾಗಿ ಬುಧವಾರ ಹಿಜ್ಬುಲ್ಲಾ ಘೋಷಿಸಿತ್ತು. ಇದರ ವಿರುದ್ಧ ಪ್ರತೀಕಾರ ತೀರಿಸಲಾಗುವುದು ಎಂದು ಅದು ಎಚ್ಚರಿಸಿತ್ತು.

ಲೆಬನಾನ್‌ನ ಚಮಾ ಗ್ರಾಮದ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ರಾಕೆಟ್‌ ದಾಳಿ ನಡೆಸಲಾಗಿದೆ ಎಂದು ಹೆಜ್ಬುಲ್ಲಾ ಘೋಷಿಸಿದೆ. ಇಸ್ರೇಲ್ ದಾಳಿಯಲ್ಲಿ ನಾಲ್ವರು ಸಿರಿಯನ್ನರು ಸಾವನ್ನಪ್ಪಿದ್ದಾರೆ. ಅನೇಕ ಲೆಬನಾನ್ ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅದು ಬಹಿರಂಗಪಡಿಸಿದೆ.

ಮತ್ತೊಂದೆಡೆ, ಹಿಜ್ಬುಲ್ಲಾ ದಾಳಿಗೆ ಪ್ರತೀಕಾರವಾಗಿ ತಾನೂ ತಕ್ಷಣವೇ ರಾಕೆಟ್‌ಗಳನ್ನು ಉಡಾಯಿಸಿದ್ದಾಗಿ ಐಡಿಎಫ್ ಹೇಳಿದೆ. ಯಾತರ್‌ನಲ್ಲಿರುವ ಅವರ ರಾಕೆಟ್ ಉಡಾವಣಾ ಸೌಲಭ್ಯವನ್ನು ನಾಶಪಡಿಸಲಾಗಿದೆ ಎಂದು ಅದು ಹೇಳಿಕೊಂಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page