Tuesday, February 10, 2026

ಸತ್ಯ | ನ್ಯಾಯ |ಧರ್ಮ

ದ್ರಾವಿಡ ಕನ್ನಡಿಗರು ನೇತೃತ್ವದಲ್ಲಿ, ಹಿಂದಿ ಎಕ್ಸಾಮ್ ಹಾಲ್ಗೆ ನುಗ್ಗೋಣ ಪೂರ್ವಭಾವಿ ಸಭೆ

ಬೆಂಗಳೂರು : ನಗರದ ಗಾಂಧಿ ಭವನದಲ್ಲಿರುವ ಮಹಾದೇವಿ ತಾಯಿ ಕಿರು ಸಭಾಂಗಣದಲ್ಲಿ ನಾವು ದ್ರಾವಿಡ ಕನ್ನಡಿಗರು ಚಳುವಳಿ ಕರೆದಿದ್ದ ಹಿಂದಿ ಎಕ್ಸಾಮ್ ಹಾಲ್ಗೆ ನುಗ್ಗುಣ ಪೂರ್ವಭಾವಿ ಸಭೆಯಲ್ಲಿ ಹಲವಾರು ಕನ್ನಡ ಪರ, ದಲಿತ ಪರ ಮತ್ತು ಜನಪರ ಸಂಘಟನೆಗಳ ಮುಖಂಡರು ಭಾಗವಹಿಸಿ ಬೆಂಬಲ ಸೂಚಿಸಿದರು.

ಡಾ.ರಾಜ್ ಕುಮಾರ್ ಸಂಘದ ಅಧ್ಯಕ್ಷರಾದ ಸಾ ರಾ ಗೋವಿಂದು ಅವರು ಮಾತನಾಡಿ ಬಿಹಾರದಲ್ಲಿ ಇಂಗ್ಲಿಷ್ ಪರೀಕ್ಷೆ ಬರೆಯದೆ ಎಸ್ ಎಸ್ ಎಲ್ ಸಿ ಪಾಸ್ ಅಂತ ಕೊಡಬೇಕು ಎಂದು ಕಾನೂನು ಮಾಡಿರುವಾಗ ಕರ್ನಾಟಕದಲ್ಲಿ ಹಿಂದಿ ಪರೀಕ್ಷೆ ಬರೆಯದೆ ಎಸ್ ಎಸ್ ಎಲ್ ಸಿ ಪಾಸ್ ಅಂತ ಕೊಡಲು ಸಿದ್ದರಾಮಯ್ಯ ನವರು ಮುಂದಾಗಬೇಕು ಇಲ್ಲದಿದ್ದರೆ ಯುವ ಹೋರಟಗಾರರ ಜೊತೆ ಹಿರಿಯ ಹೋರಾಟಗಾರರಾದ ನಾವುಗಳು ಕೂಡ ಎಸ್ ಎಸ್ ಎಲ್ ಸಿ ಪರೀಕ್ಷೆ ಕೇಂದ್ರಗಳಿಗೆ ನುಗ್ಗುತ್ತೇವೆ ಎಂದರು.

ಹಿಂದಿ ಶಿಕ್ಷಕರ ಲಾಭಿಗೆ ಓಗೊಟ್ಟು ಬಸವರಾಜ್ ಹೊರಟ್ಟಿ ಅವರು ಮುಖ್ಯಮಂತ್ರಿಗಳನ್ನು ಎರಡು ನುಡಿ ನೀತಿ ಜಾರಿ ಮಾಡಲು ಅಡ್ಡಗಾಲಾಗಿದ್ದಾರೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದಕ್ಕೆ ಪ್ರತಿಕ್ರಿಯಿಸಿದ ಜಾಣಗೆರೆ ವೆಂಕಟರಾಮಯ್ಯ ನವರು ಹೊರಟ್ಟಿ ಅವರ ಜೊತೆ ಮಾತುಕತೆ ನಡೆಸಲು ಒಂದು ನಿಯೋಗ ಭೇಟಿ ಕೊಡೋಣ ಎಂದರು. ಸಭೆಯಲ್ಲಿ ಚೇತನ್ ಗೌಡ, ಶೆ ಬೋ ರಾಧಾಕೃಷ್ಣ, ಅಬಿ ಒಕ್ಕಲಿಗ, ಮಂಜು ಗಣಪತಿಪುರ, ಪಿ ಟಿ ಸಿ ಎಲ್ ಮಂಜುನಾಥ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page