Sunday, June 23, 2024

ಸತ್ಯ | ನ್ಯಾಯ |ಧರ್ಮ

ಇಂಗ್ಲೀಷ್‌ ಬದಲು ಹಿಂದಿ ಮಾಧ್ಯಮ ಕಡ್ಡಾಯ: ರಾಷ್ಟ್ರಪತಿಗೆ ಅಮಿತ್‌ ಶಾ ಸಮಿತಿ ಶಿಪಾರಸು

ನವದೆಹಲಿ: ಕೇಂದ್ರೀಯ ಶಿಕ್ಷಣ ಸಂಸ್ಥೆಗಳಿಂದ ಹಿಡಿದು ಉನ್ನತ ತಾಂತ್ರಿಕ ಸಂಸ್ಥೆಗಳವರೆಗೂ ಇಂಗ್ಲೀಷ್‌ ಬದಲು ಹಿಂದಿ ಮಾಧ್ಯಮದಲ್ಲಿಯೇ ಪಠ್ಯಬೋಧನೆಯನ್ನು ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಧ್ಯಕ್ಷರಾಗಿರುವ ಸಂಸತ್ತಿನ ಅಧಿಕೃತ ಭಾಷಾ ಸಮಿತಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶಿಪಾರಸು ಸಲ್ಲಿಸಿದೆ.

ಹಿಂದಿ ಭಾಷಾ ಅಭಿವೃದ್ಧಿಗಾಗಿ ಸೆಪ್ಟಂಬರ್‌ ನಲ್ಲಿ 112 ಶಿಪಾರಸುಗಳನ್ನು ಹೊಂದಿರುವ ವರದಿಯನ್ನು ದ್ರೌಪದಿ ಮುರ್ಮು ಅವರಿಗೆ ಅಮಿತ್‌ ಶಾ ಸಮಿತಿ ಸಲ್ಲಿಸಿತ್ತು.

ಸಮಿತಿ ಸಲ್ಲಿಸಿರುವ ವರದಿಯಲ್ಲಿ, ಐಐಟಿ, ಐಐಎಂ, ನವೋದಯ ಕೇಂದ್ರೀಯ ವಿವಿ ಇತ್ಯಾದಿಗಳಿಗೆ ಅನ್ವಯವಾಗುವಂತೆ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್‌ ಬದಲು ಹಿಂದಿ ಮಾಧ್ಯಮ ಬರಬೇಕು. ಕೇಂದ್ರೀಯ ನೇಮಕಾತಿ ವೇಳೆ ಇಂಗ್ಲೀಷ್‌ ಬದಲು ಹಿಂದಿಯಲ್ಲಿ ಪ್ರಶ್ನೆಪತ್ರಿಕೆ ಇರಬೇಕು. ಕೇಂದ್ರೀಯ ಸರ್ಕಾರಿ ನೌಕರರ ನೇಮಕಾತಿ ವೇಳೆ ಹಿಂದಿ ಬಲ್ಲವರಿಗೆ ಆದ್ಯತೆ ನೀಡಬೇಕು. ಹಾಗೆಯೇ ಹಿಂದಿ ಬಳಸದ ನೌಕರರಿಗೆ ಎಚ್ಚರಿಕೆ ನೀಡಿ, ವಾರ್ಷೀಕ ವರದಿಯಲ್ಲಿ ನಮೂದಿಸಬೇಕು. ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿಯಲ್ಲೇ ಹೈಕೋರ್ಟ್‌ ಕಲಾಪಗಳನ್ನು ನಡೆಸಬೇಕು. ಕೇಂದ್ರ ಸರ್ಕಾರದ ಎಲ್ಲಾ ಪತ್ರ, ಇ-ಮೇಲ್‌ ವ್ಯವಹಾರ ಹಿಂದಿಯಲ್ಲೇ ನಡೆಯಬೇಕು. ಸರ್ಕಾರದ ಜಾಹೀರಾತಿನ ಹಣದಲ್ಲಿ ಶೇ.50 ರಷ್ಟು ಹಣವನ್ನು ಹಿಂದಿ ಜಾಹೀರಾತಿಗೆ ನೀಡಬೇಕು, ಮುಖ್ಯ ಪುಟದಲ್ಲಿ ಇಂಗ್ಲೀಷ್‌ ಜಾಹೀರಾತನ್ನು ಒಳಗೆ ನೀಡಬೇಕು. ವಿಶ್ವ ಸಂಸ್ಥೆಯಲ್ಲಿ ಭಾರತದ ಅಧಿಕೃತ ಭಾಷೆಯನ್ನು ಹಿಂದಿ ಎಂದು ಪರಿಗಣಿಸಬೇಕು ಎಂದು ತಿಳಿಸಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು