Home Uncategorized ನಾವಿರೋದ್ರಿಂದ ಹಿಂದೂಗಳು ಸುರಕ್ಷಿತ – ಮಮತಾ ಬ್ಯಾನರ್ಜಿ

ನಾವಿರೋದ್ರಿಂದ ಹಿಂದೂಗಳು ಸುರಕ್ಷಿತ – ಮಮತಾ ಬ್ಯಾನರ್ಜಿ

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರ ಇರುವುದರಿಂದಲೇ ಹಿಂದೂಗಳು ಸುರಕ್ಷಿತವಾಗಿದ್ದು, ಒಂದೇ ವೇಳೆ ನಮ್ಮ ಸರ್ಕಾರ ಇಲ್ಲದೇ ಹೋಗಿದ್ದರೆ ಆ ಸಮುದಾಯದವರು ಒಂದೇ ಸೆಕೆಂಡಿನಲ್ಲಿ ಮುಗಿಸಿಬಿಡುತ್ತಿದ್ದರು ಎಂಬ ಸಿಎಂ ಮಮತಾ ಬ್ಯಾನರ್ಜಿ ಅವರ ಹೇಳಿಕೆ ಇದೀಗ ವ್ಯಾಪಕ ವಿವಾದಕ್ಕೆ ಕಾರಣವಾಗಿದೆ.

ಮಾರ್ಚ್ 9, 2026 ರಂದು ಕೋಲ್ಕತ್ತಾದಲ್ಲಿ ನಡೆದ ಟಿಎಂಸಿ ಧರಣಿ ಪ್ರತಿಭಟನೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಹೇಳಿಕೆಗಳನ್ನು ನೀಡಿದ್ದು, ಈ ಹೇಳಿಕೆಯ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಚುನಾವಣಾ ಆಯೋಗದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ವಿರುದ್ಧ ನಡೆದ ಧರಣಿಯಲ್ಲಿ, ಪಾಲ್ಗೊಂಡು ಮಾತನಾಡಿದ ಮಮತಾ ಬ್ಯಾನರ್ಜಿ, “ನಾವು ಅಸ್ತಿತ್ವದಲ್ಲಿದ್ದೇವೆ, ಅದಕ್ಕಾಗಿಯೇ ನೀವೆಲ್ಲರೂ ಸುರಕ್ಷಿತರಾಗಿದ್ದೀರಿ. ನಾವು ಇಲ್ಲಿ ಇಲ್ಲದಿದ್ದರೆ, ಒಂದು ನಿರ್ದಿಷ್ಟ ಸಮುದಾಯವು ಗುಂಪಾಗಿ ಒಟ್ಟುಗೂಡಿ ನಿಮ್ಮನ್ನು ಸುತ್ತುವರೆದು ಒಂದು ಸೆಕೆಂಡಿನಲ್ಲಿ ಮುಗಿಸಿಬಿಡುತ್ತಿದ್ದರು ಎಂದು ಹೇಳಿದ್ದಾರೆ.

ಬಿಜೆಪಿ ಆಕ್ರೋಶ, ಕ್ರಮಕ್ಕೆ ಚುನಾವಣಾ ಆಯೋಗಕ್ಕೆ ಪಟ್ಟು

ಇನ್ನು ಬಂಗಾಳಿ ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ಮಾಡಲಾದ ಈ ಹೇಳಿಕೆಯನ್ನು ಬಂಗಾಳ ಬಿಜೆಪಿ ತೀವ್ರ ವಿರೋಧಿಸಿದ್ದು, 2026 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕೋಮು ವಿಭಜನೆಯನ್ನು ಹುಟ್ಟುಹಾಕುವ ಪ್ರಯತ್ನ ಎಂದು ಟೀಕಿಸಿದೆ.

ಬಿಜೆಪಿ ನಾಯಕರು ಮತ್ತು ನೆಟಿಜನ್‌ಗಳು ಟಿಎಂಸಿ ಅಧಿಕಾರದ ಮೇಲಿನ ಹಿಡಿತವನ್ನು ಕಳೆದುಕೊಳ್ಳುತ್ತಿದ್ದಂತೆ ಹಿಂದೂ ದ್ವೇಷವನ್ನು ಆಶ್ರಯಿಸುತ್ತಿದೆ ಎಂದು ಆರೋಪಿಸಿದೆ.

You cannot copy content of this page

Exit mobile version