Wednesday, January 14, 2026

ಸತ್ಯ | ನ್ಯಾಯ |ಧರ್ಮ

ಕೊಪ್ಪಳ: ಒಟ್ಟಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಹಿಂದೂ, ಮುಸ್ಲಿಮರು

ಕೊಪ್ಪಳ: ಕರ್ನಾಟಕದ ಕೊಪ್ಪಳ ನಗರದ ಸ್ಥಳೀಯ ಶ್ರೀರಾಮ ದೇವಸ್ಥಾನದಲ್ಲಿ ಸೋಮವಾರ ಹಿಂದೂ ಮತ್ತು ಮುಸ್ಲಿಂ ಬಾಂಧವರು ಒಟ್ಟಾಗಿ ವಿಶೇಷ ಪೂಜೆ ಸಲ್ಲಿಸಿದರು.

ಕೊಪ್ಪಳ ನಗರದ ಭಾಗ್ಯನಗರದ ಶ್ರೀರಾಮ ಮಂದಿರದಲ್ಲಿ ಉಭಯ ಸಮುದಾಯದ ಮುಖಂಡರು ಜಮಾಯಿಸಿ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರು.

ಮುಸಲ್ಮಾನರು ಹಿಂದೂ ಮುಖಂಡರೊಂದಿಗೆ ನಿಂತು ಭಕ್ತಿಯಿಂದ ಪೂಜೆ ಸಲ್ಲಿಸಿದ ನಂತರ ‘ಆರತಿ’ ಮತ್ತು ‘ಪ್ರಸಾದ’ ಸ್ವೀಕರಿಸಿದರು.

ಈ ನಡೆ ರಾಜ್ಯದಾದ್ಯಂತ ಜನರ ಮೆಚ್ಚುಗೆಗೆ ಪಾತ್ರವಾಯಿತು.

ಈ ಕುರಿತ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ನಡುವೆ ಬೆಂಗಳೂರಿನ ಪ್ರಮುಖ ದೇವಾಲಯಗಳ ಆವರಣದಲ್ಲಿ ಪೊಲೀಸ್ ಇಲಾಖೆ ಭದ್ರತೆಯನ್ನು ಹೆಚ್ಚಿಸಿದೆ. ಐಟಿ ನಗರದಲ್ಲಿರುವ ಆಂಜನೇಯ ಮತ್ತು ರಾಮ ಮಂದಿರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಗಸ್ತು ತಿರುಗುತ್ತಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page