Monday, September 8, 2025

ಸತ್ಯ | ನ್ಯಾಯ |ಧರ್ಮ

ಮದ್ದೂರು ಗಣೇಶ ವಿಸರ್ಜನೆ ಗಲಾಟೆ ; ಹಿಂದುತ್ವ ಸಂಘಟನೆಗಳಿಂದ ಮಸೀದಿ ಮುಂದೆ ಪ್ರತಿಭಟನೆ, ನಿಷೇಧಾಜ್ಞೆ ಜಾರಿ

ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆಸಿ ಗಲಭೆ ಸೃಷ್ಟಿಯಾದ ಬಗ್ಗೆ ಹಿಂದುತ್ವ ಸಂಘಟನೆಗಳು ಖಂಡಿಸಿ ಪ್ರತಿಭಟನೆ ನಡೆಸುತ್ತಿವೆ. ಇದೀಗ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದ್ದು ಅಲ್ಲೂ ಸಹ ಕಲ್ಲು ತೂರಾಟ ನಡೆಸಿದ್ದಾರೆ.

ಹಿಂದುತ್ವ ಸಂಘಟನೆಗಳ ಪ್ರತಿಭಟನೆ ವೇಳೆ ಮಸೀದಿ ಎದುರಲ್ಲಿ ತಾವು ಅಸಭ್ಯವಾಗಿ ವರ್ತಿಸಿ, ಅನಾವಶ್ಯಕವಾಗಿ ಮಸೀದಿ ಎದುರಲ್ಲೇ ಕರ್ಪೂರ ಹಚ್ಚಿದ ಬೆಳವಣಿಗೆ ನಡೆದಿದೆ. ಇದೇ ವೇಳೆ ಇದನ್ನು ವಿರೋಧಿಸಲು ಬಂದಿದ್ದವರ ಮೇಲೆ ಕಲ್ಲುತೂರಾಟ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮದ್ದೂರು ಬಂದ್ ಗೆ ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದು, ಹೀಗಾಗಿ ಇಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಇಂದು ಬೆಳಿಗ್ಗೆ 6 ರಿಂದ ನಾಳೆ ಮಧ್ಯಾಹ್ನ 12 ವರೆಗೆ ಪಟ್ಟಣದಾದ್ಯಂತ ಕಲಂ 163ರ ಅಡಿಯಲ್ಲಿ ಪ್ರತಿಬಂಧಕಾಜ್ಞೆ ಹೊರಡಿಸಿ ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಅದೇಶಿಸಿದ್ದಾರೆ.

ಮದ್ದೂರಿನಲ್ಲಿ ಗಣೇಶನ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ. ಹಿಂದೂ ಕಾರ್ಯಕರ್ತರು ಮುಸ್ಲಿಂ ರ ಹಸಿರು ಭಾವುಟ ಕಿತ್ತು ಹಿಂದೂಗಳ ಕೇಸರಿ ಭಾವುಟ ಹಾರಿಸಿದ್ದಾರೆ. ಮದ್ದೂರಿನ ಹೂವಿನ ಸರ್ಕಲ್ ಬಳಿ ಈ ಘಟನೆ ನಡೆದಿದೆ.

ಪಟ್ಟಣದ ಹೂವಿನ ವೃತ್ತದ ಬಳಿ ಇರುವ ಮಸೀದಿ ಮುಸ್ಲಿರ ಭಾವುಟ ಹಾರಾಡುತ್ತಿತ್ತು. ಭಾವುಟ ಕಿತ್ತು ಹಿಂದೂ ಕಾರ್ಯಕರ್ತರ ಆಕ್ರೋಶ ಹೊರಹಕಿದ್ದಾರೆ. ಸ್ಥಳದಲ್ಲಿ ಮೊಳಗಿದ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page