Wednesday, August 6, 2025

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್‌ನ ಚರಿತ್ರೆ ಭಾರತ್‌ ತೋಡೋ: ಬಿಜೆಪಿ ಆರೋಪ

ಬೆಂಗಳೂರು: ಕಾಂಗ್ರೆಸ್‌ನ ಚರಿತ್ರೆ ʼಭಾರತ್‌ ಜೋಡೋʼ ಅಲ್ಲಾ, ʼಭಾರತ್‌ ತೋಡೋʼ ಎಂದು ಕಾಂಗ್ರೆಸ್‌ ಪಕ್ಷದ ವಿರುದ್ಧ ಭಾರತೀಯ ಜನತಾ ಪಕ್ಷ (ಬಿಜೆಪಿ) ಆರೋಪಿಸಿದೆ.

2019 ರ ನವೆಂಬರ್‌ 9 ರಂದು ಸುಪ್ರೀಂಕೋರ್ಟ್‌ ರಾಮ ಮಂದಿರದ ಪರವಾದ ತೀರ್ಪು ನೀಡಿತ್ತು, ಇದನ್ನು ಮುಸ್ಲೀಂ ಪಕ್ಷದವರು ಕೂಡ ಸುಪ್ರೀಂ ಕೋರ್ಟ್‌ ತೀರ್ಪನ್ನು ಸ್ವಾಗತ್ತಿಸಿದ್ದರು. ಆದರೆ ರಾಮ ಮಂದಿರ ನಿರ್ಮಾಣದಲ್ಲಿ ಕಾಂಗ್ರೆಸ್‌ ಯಾವಾಗಲೂ ಅಡೆತಡೆಗಳನ್ನು ತಂದಿದ್ದಲ್ಲದೆ, ಕಾಂಗ್ರೆಸ್‌ ನಾಯಕರುಗಳು ಕೂಡ ರಾಮ ವಿರೋಧಿ ಹೇಳಿಕೆಗಳನ್ನು ನೀಡಿದ್ದರು ಎಂದು ಬಿಜೆಪಿ ದೂರಿದೆ.

2020 ಆಗಷ್ಟ್‌ 5 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರೆವೇರಿಸಿ ಎಲ್ಲಾ ವಿವಾದಗಳನ್ನು ಶಾಶ್ವತವಾಗಿ ಕೊನೆಗೊಳಿಸಿದರು. ಆದರೆ ಕಾಂಗ್ರೆಸ್‌ ಪಕ್ಷಕ್ಕೆ ಅಯೋಧ್ಯಾ ರಾಮ ಮಂದಿರ ವಿವಾದ ಅಂತ್ಯ ಕಾಣುವುದು ಕಾಂಗ್ರೆಸ್‌ಗೆ ಇಷ್ಟವಿರಲಿಲ್ಲ ಎಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page