Sunday, July 27, 2025

ಸತ್ಯ | ನ್ಯಾಯ |ಧರ್ಮ

‘ಹೊಸ ದಿನಚರಿ’ ಚಿತ್ರದ ಮೊದಲ ಗೀತೆ : ʼನಿನದೇ ನೆನಪುʼ  ರಿಲೀಸ್

ಬೆಂಗಳೂರು : ʼಹೊಸ ದಿನಚರಿʼ ಚಿತ್ರ ಶೀಘ್ರದಲ್ಲೇ ತೆರೆಗೆ ಬರುತ್ತಿದ್ದು, ಇಂದು ವಾಸುಕಿ ವೈಭವ್‌ ಅವರ  ಕಂಠದಲ್ಲಿ ಮೂಡಿಬಂದಿರುವ ಚಿತ್ರದ ʼನಿನದೇ ನೆನಪುʼ ಎಂಬ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಗೀತೆಯ ಕೇಳಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವಾಸುಕಿ ವೈಭವ್ ರವರ ಇಂಪಾದ ಕಂಠದಲ್ಲಿ ಮೂಡಿಬಂದಿರುವ ನಿನದೇ ನೆನಪು ಎಂಬ ಗೀತೆ, ಎಲ್ಲೆಡೆ ಮೆಚ್ಚುಗೆ ಗಳಿಸಿದ್ದು, ಕಳೆದುಕೊಂಡಿರುವ ಹಳೇ ಪ್ರೀತಿಯನ್ನು ನೆನಪು ಮಾಡುವುದರಲ್ಲಿ ಯಶಸ್ವಿಯಾಗಿದೆ.

ವೈಶಾಕ್ ವರ್ಮಾ ಸಾಹಿತ್ಯ ಹಾಗೂ ಸಂಗೀತದ ಹೊಸ ದಿನಚರಿಯನ್ನು ಕೀರ್ತಿ ಶೇಖರ್ ಮತ್ತು ವೈಷಾಕ್ ಪುಷ್ಪಲತ ನಿರ್ದೇಶಿಸಿದ್ದಾರೆ. ಮೃತ್ಯುಂಜಯ ಶುಕ್ಲ, ಅಲೋಕ್ ಚೌರಾಸಿಯಾ ಹಾಗೂ ಗಂಗಾಧರ್ ಸಾಲಿಮಠ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ʼಹೊಸ ದಿನಚರಿʼ ಚಿತ್ರ ಇದೇ ಡಿಸೆಂಬರ್ 9ಕ್ಕೆ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page