Monday, June 17, 2024

ಸತ್ಯ | ನ್ಯಾಯ |ಧರ್ಮ

ಹೊಸದಿಲ್ಲಿಯಲ್ಲಿ ಪಟಾಕಿ ಸಿಡಿಸಿದರೆ ದಂಡದ ಜೊತೆಗೆ 6 ತಿಂಗಳು ಜೈಲು

ಹೊಸದಿಲ್ಲಿ : ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಸಿಡಿಸಿದರೆ  200 ರೂ ದಂಡ ಮತ್ತು 6 ತಿಂಗಳ ಜೈಲು ಎಂದು ಹೇಳಿ ಪರಿಸರ ಸಚಿವ ಗೋಪಾಲ್‌ ರಾಯ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪಠಾಕಿ ಹಚ್ಚುವುದನ್ನು ಅಲ್ಲಿನ ಸರ್ಕಾರ ನಿಷೇಧಿಸಿದೆ.

ದೀಪಾವಳಿ ಹಬ್ಬ ಹತ್ತಿರವೇ ಇರುವುದರಿಂದ ಪರಿಸರ ಜಾಗೃತಿ ಸಲುವಾಗಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ʼಪಟಾಕಿಗಳ ಉತ್ಪಾದನೆ ಮಾಡಿದವರಿಗೆ, ಅದನ್ನು ಸಂಗ್ರಹ ಮಾಡಿದವರಿಗೆ, ಮಾರಾಟ ಮಾಡಿದವರಿಗೆ ಸ್ಪೋಟಕಗಳ ಕಾನೂನಿನ ಅನ್ವಯದಲ್ಲಿ 5 ಸಾವಿರ ದಂಡ ಮತ್ತು ಮೂರು ವರ್ಷ ಜೈಲುಶಿಕ್ಷೆಗಳನ್ನು ನೀಡಲು ಅವಕಾಶವಿದೆ ಎಂದು ಪರಿಸರ ಸಚಿವ ಗೋಪಾಲ್‌ ರಾಯ್‌ ಎಂದು ಹೇಳಿದರು.

ಈ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಲು ಸಹಾಯಕ ಕಮಿಷನರ್‌ಗಳ ವ್ಯಾಪ್ತಿಯಲ್ಲಿ 210 ತಂಡಗಳು ಮತ್ತು ಕಂದಾಯ ಇಲಾಖೆಯಿಂದ 165 ಮತ್ತು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯಿಂದ 33 ತಂಡಗಳು ಒಟ್ಟು 408 ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು