Thursday, July 10, 2025

ಸತ್ಯ | ನ್ಯಾಯ |ಧರ್ಮ

ಹಾಸ್ಟೆಲ್ ನಲ್ಲಿ ಕಾಣೆಯಾಗಿದ್ದ ಮೂರು ಜನ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ

ಮಂಗಳೂರು : ಬುಧವಾರ ಹಾಸ್ಟೆಲ್‌ನಿಂದ ಕಾಣೆಯಾಗಿದ್ದ ಮೂರು ಜನ ವಿದ್ಯಾರ್ಥಿನಿಯರು ಇಂದು ಚೆನ್ನೈನಲ್ಲಿ ಪೋಲೀಸರ ವಶಕ್ಕೆ ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರಿನ ಇಬ್ಬರು ಮತ್ತು ಚಿಕ್ಕಮಗಳೂರಿನ ಒಬ್ಬ ವಿದ್ಯಾರ್ಥಿನಿ ಮಂಗಳೂರಿನ ಖಾಸಗಿ ಕಾಲೇಜಿನ ಹಾಸ್ಟೆಲ್ ನಲ್ಲಿ ಉಳಿದಿದ್ದರು. ಬುಧವಾರ ಬೆಳಗ್ಗೆ ಸುಮಾರು 3.30 ಕ್ಕೆ ಹಾಸ್ಟೆಲ್‌ನ ಕಿಟಕಿ ಮುರಿದು ಹೊರಬಂದು ಅಲ್ಲಿಂದ ತಪ್ಪಿಸಿಕೊಂಡು ಹೋಗಿರುವುದು ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು ಈ ಕುರಿತು ಕಂಕನಾಡಿಯ ನಗರ ಪೋಲಿಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು.

ಪ್ರಕರಣಕ್ಕೆ ಸಂಬಂಧಪಟ್ಟಹಾಗೆ ಸಿಸಿಟಿವಿ ದೃಶ್ಯ ಆಧರಿಸಿ ಹುಡುಕಾಟಕ್ಕೆಂದು ಚೆನ್ನೈಗೆ ತೆರಳಿದ ಪೋಲೀಸರಿಗೆ ಇಂದು ಚೆನ್ನೈನಲ್ಲಿ  ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಮೂವರು ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಿದ ವೇಳೆ ಸಿಕ್ಕಿಬಿದ್ದಿದ್ದಾರೆ. ಮೂರು ಜನರನ್ನು ಸ್ವೀಕಾರ ಕೇಂದ್ರಕ್ಕೆ ಒಪ್ಪಿಸಲಾಗಿದ್ದು ವಿದ್ಯಾರ್ಥಿನಿಯರು ಹಾಸ್ಟೆಲ್ ನಿಂದ ನಾಪತ್ತೆಯಾಗಲು ಕಾರಣವೇನು ಎಂದು ತನಿಖೆ ಮುಗಿದ ನಂತರ ತಿಳಿದು ಬರಬೇಕಿದೆ ಎಂದು ಅಲ್ಲಿನ ಪೋಲೀಸರು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page