Saturday, August 23, 2025

ಸತ್ಯ | ನ್ಯಾಯ |ಧರ್ಮ

ಮನೆ ಕಳ್ಳತನ: ನಕಲಿ ಬಿಟ್ಟು ಅಸಲಿ ಚಿನ್ನ ಕದ್ದ ಕಳ್ಳರು

1 ಕೆ.ಜಿ. ಚಿನ್ನಾಭರಣ, 15 ಲಕ್ಷ ನಗದು ಕಳವು
ಹಾಸನ:
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಲ್ಲದ ಕಳ್ಳರ ಅಟ್ಟಹಾಸದ ಭಾಗವಾಗಿ ನಗರದ ಸಮೀಪ ಸದಾಶಿವ ನಗರದ ಮನೆಯೊಂದರಲ್ಲಿ ಅಂದಾಜು ಒಂದು ಕೆಜಿಗೂ ಹೆಚ್ಚು ಚಿನ್ನಾಭರಣ ಹಾಗೂ 15 ಲಕ್ಷಕ್ಕೂ ಅಧಿಕ ನಗದು ಕಳ್ಳತನವಾಗಿರುವ ಘಟನೆ ತಡರಾತ್ರಿ ನಡೆದಿದೆ. ತೇಜೂರು ಚಿಕ್ಕಕೊಂಡಗುಳ ಬಳಿ ಇರುವ ಸದಾಶಿವ ನಗರದಲ್ಲಿ ಇರುವ ಖಾಸಗಿ ಉದ್ಯೋಗಿ ನವೀನ್ ಎಂಬುವರ ಮನೆಯಲ್ಲಿಯೇ ಮನೆ ಕಳ್ಳತನ ನಡೆದಿರುವುದು. ಈ ಘಟನೆಯಿಂದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಮಹಾಲಕ್ಷ್ಮಿ ಹಬ್ಬಕ್ಕೆಂದು ಬ್ಯಾಂಕ್ ಲಾಕರ್ ನಿಂದ ತಂದಿದ್ದ ಒಂದು ಕೆಜಿಗೂ ಅಧಿಕ ಚಿನ್ನಾಭರಣ, ಬೆಳ್ಳಿ ಆಭರಣ ಹಾಗೂ ನಗದು ಎಲ್ಲಾವು ಖದೀಮರು ಕಳ್ಳತನ ಮಾಡಿದ್ದಾರೆ. ಗುರುವಾರ ರಾತ್ರಿ ಮನೆಗೆ ಬೀಗ ಹಾಕಿಕೊಂಡು ನವೀನ್ ಕುಟುಂಬದವರು ಹೊರ ಹೋಗಿದ್ದರು. ಶನಿವಾರ ಬೆಳಿಗ್ಗೆ 8 ಗಂಟೆಗೆ ಮನೆಗೆ ಬಂದು ನೋಡಿದಾಗ ಈ ಕೃತ್ಯ ಬೆಳಕಿದೆ ಬಂದಿದೆ. ಮನೆಯ ಬಾಗಿಲು ಮುರಿದು ನಗದು ಚಿನ್ನಾಭರಣವನ್ನೆಲ್ಲಾ ಚೋರರು ದೋಚಿದ್ದಾರೆ. ತಮ್ಮ ಪತ್ನಿಯ ತಾಯಿ ಮನೆಯಲ್ಲೇ ನೆಲೆಸಿದ್ದ ನವೀನ್ ದಂಪತಿಗಳು ವಾಸವಿದ್ದ ಮನೆಯ ಎದುರಿನಲ್ಲೆ ಹೊಸ ಮನೆ ನಿರ್ಮಾಣದ ಹಂತದಲ್ಲಿತ್ತು. ಹೊಸ ಮನೆ ನಿರ್ಮಾಣದ ಹಣವನ್ನು ಕೂಡ ಅತ್ತೆ ಮನೆಯಲ್ಲಿಯೇ ಇಟ್ಟಿದ್ದರು. ಒಂದು ರಾತ್ರಿ ಮನೆಯಲ್ಲಿ ಇಲ್ಲದ್ದನ್ನ ಗಮನಿಸಿದ ಕಳ್ಳರು ಮೊದಲೆ ವಂಚು ಹಾಕಿ ಗಮನಿಸಿ ಈ ಅಪರಾಧ ಮಾಡಿದ್ದಾರೆ. ಕಳ್ಳರು ಬಹಳ ನಾಜುಕಾಗಿ ಕಳ್ಳತನ ಮಾಡಿದ್ದು, ವರ್ಜಿನಲ್ ಚಿನ್ನ ಮಾತ್ರ ಕದ್ದು, ನಕಲಿ ಆಭರಣವನ್ನು ಮನೆ ಒಳಗೆ ಎಸೆದಿದ್ದಾರೆ. ಇವೆಲ್ಲಾ ಗಮನಿಸಿದರೇ ಇವರು ಹಳೆ ಕಳ್ಳರು ಇರಬಹುದು ಎನ್ನುವ ಸಂಶಯ ವ್ಯಕ್ತವಾಗಿದೆ. ವಿಷಯ ತಿಳಿದ ಪೊಲೀಸರು ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಖದೀಮರ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪೊಲೀಸರ ವಿಶೇಷ ತಂಡ ರಚಿಸಿ ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಇದೆ ವೇಳೆ ನವೀನ್ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page