Home ಅಂಕಣ ‎ಸೆಪ್ಟಂಬರ್ 14.2025 ರ ಹಿಂದಿ ದಿವಸ್ ವಿರೋಧಿಸುವ ಬಗೆ ಹೇಗೆ?

‎ಸೆಪ್ಟಂಬರ್ 14.2025 ರ ಹಿಂದಿ ದಿವಸ್ ವಿರೋಧಿಸುವ ಬಗೆ ಹೇಗೆ?

‎ಪ್ರತಿ ವರ್ಷ ನಮ್ಮ ತೆರಿಗೆ ಹಣದಲ್ಲಿ ಇಂಡಿಯಾ ಸರ್ಕಾರ ಅಂದಾಜು 500 ಕೋಟಿ ಖರ್ಚು ಮಾಡಿ ಸೆಪ್ಟೆಂಬರ್ 14ರಂದು ‘ಹಿಂದಿ ದಿವಸ್’ ಎಂದು ಆಚರಿಸುತ್ತಿದೆ. ಈ ಆಚರಣೆಗೆ ಒಂದೊಂದು ಘೋಷವಾಕ್ಯ ಬೇರೆ ಪ್ರಕಟಿಸಿ ಅದರ ಆಧಾರದಲ್ಲಿ ನಮ್ಮ ಮೇಲೆ ನಮ್ಮದೇ ದುಡ್ಡಿನಲ್ಲಿ ಮತ್ತು ನಮ್ಮ ಕನ್ನಡ ನೆಲದಲ್ಲಿಯೇ ಹಿಂದಿ ಹೇರಿಕೆಯನ್ನು ರಾಜ ರೋಷವಾಗಿ ಮಾಡುತ್ತಾ ಬರುತ್ತಿದೆ.ಇದಕ್ಕೆ ಕಡಿವಾಣ ಹಾಕಲು 2019 ರಿಂದ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ನಾವುಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ಜನರಲ್ಲಿ ಹಿಂದಿ ಹೇರಿಕೆ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಯಶಸ್ಸಿನ ಕಡೆಗೆ ಸಾಗುತ್ತಿದ್ದೇವೆ ಮತ್ತು ಇದರ ಪರಿಣಾಮ  ಪರೋಕ್ಷವಾಗಿ ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರ ಕೈಬಿಟ್ಟು ದ್ವಿಭಾಷಾ ಸೂತ್ರ ಸರ್ಕಾರ ಜಾರಿಗೊಳಿಸುವ ಸನಿಹಕ್ಕೆ ಬಂದಿದೆ.

‎ಶಿಕ್ಷಣದಲ್ಲಿ ದ್ವಿಭಾಷಾ ಸೂತ್ರದ ಹೆಸರಿನಲ್ಲಿ ಹಿಂದಿ ಹೇರಿಕೆಗೆ ಕನ್ನಡ ನಾಡಿನಲ್ಲಿ ಶೇಕಡ 50ರಷ್ಟು ಮಾತ್ರವೇ ಹಿನ್ನಡೆ ಆಗಲಿದೆ ವಿನಃ ಸಂಪೂರ್ಣ ಹಿಂದಿ ಹೇರಿಕೆ ನಿಲ್ಲುವುದಿಲ್ಲ. ಸಂವಿಧಾನದ ಆರ್ಟಿಕಲ್ 343 ರಿಂದ 351 ರಲ್ಲಿ ಹಿಂದಿ ಮತ್ತು ಸಂಸ್ಕೃತಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ತೆಗೆದರೆ ಮಾತ್ರ ಕನ್ನಡ ನೆಲದಲ್ಲಿ ಸಂಪೂರ್ಣ ಹಿಂದಿ ಹೇರಿಕೆ ನಿಲ್ಲುತ್ತದೆ ಆದ ಕಾರಣ ಈ ಹಿಂದಿ ದಿವಸ ಆಚರಣೆಯನ್ನು ವಿರೋಧಿಸುವುದ ಮುಂದುವರಿಸಬೇಕು ಮತ್ತು ತೀವ್ರಗೊಳಿಸಬೇಕು  ಇಲ್ಲದಿದ್ದರೆ ಕನ್ನಡವನ್ನು ವಿಶ್ವಮಟ್ಟದದಲ್ಲಿ ಬೆಳೆಸುವುದರ ಕಡೆ ವ್ಯಯಿಸಿಬೇಕಾದ ನಮ್ಮ ಸಮಯ ಹಣವನ್ನು ಕನ್ನಡ ನಾಡಿನಲ್ಲೇ ಕನ್ನಡವನ್ನು ಉಳಿಸಲು ವ್ಯಯಿಸಿಬೇಕಾಗುತ್ತದೆ.

‎ಕನ್ನಡ ಒಂದು ದೇಶ. ಕನ್ನಡ ಒಂದು ವಿಶ್ವ ಭಾಷೆ.ಅಂತ ಕನ್ನಡವನ್ನು ಇಂಡಿಯಾ ಸಂವಿಧಾನ ಬಳಸಿ ಕೇವಲ ಪ್ರಾದೇಶಿಕ ಭಾಷೆ ಮಾಡಲಾಗಿದೆ.ಇತರೆ ಪ್ರಮುಖ ದ್ರಾವಿಡ ಭಾಷೆಗಳ ಹೆಸರಿನಲ್ಲಿ ಇಲ್ಲದ ಒತ್ತಕ್ಷರ ನಮ್ಮ ಕನ್ನಡದಲ್ಲಿ ಮಾತ್ರ ಸಿಗುತ್ತದೆ ಉದಾಹರಣೆ ತೆಲುಗು ತಮಿಳು ಮಲಯಾಳಂ ತುಳು ಕೊಡವ.ಇಲ್ಲಿ ಗಮನಿಸಿ ಯಾವುದಕ್ಕೂ ಒತ್ತಕ್ಷರ ಇಲ್ಲ.ಆದರೆ ‘ಕನ್ನಡ’ದಲ್ಲಿ ನ ಗೆ ನ ಒತ್ತಕ್ಷರ ಇದೆ. ಕನ್ನಡ ಒಂದು ದೇಶ ಎಂದು ಹೇಗೆ ಹೇಳಬಹುದು ಎಂದರೆ ಕನ+ನಾಡು, ಕನ್ನಾಡು, ಕನ್ನಡ. ಹೀಗೆ ನಾಡು ಪದವನ್ನು ತನ್ನ ಹೆಸರಿನಲ್ಲಿ ಒಳಗೊಂಡಿದೆ ನಮ್ಮ ನೆಲದ ನುಡಿ ನಮ್ಮ ತಾಯಿ ನುಡಿ ಕನ್ನಡ.ನಾಡು ಎಂದರೆ ದೇಶ ಎಂದರ್ಥ ಎಂಬ ಕಾರಣಕ್ಕೆ ತಮಿಳುನಾಡು ಬದಲು ತಮಿಳಗಂ ಪದ ಬಳಸಿ ಅಲ್ಲಿನ ನಾರ್ತ್ ಹಿಂದಿಯಾ ಸಂಸ್ಕ್ರುತದ ರಾಜ್ಯಪಾಲ ಛೀಮಾರಿ ಹಾಕಿಸಿಕೊಂಡದ್ದು ಎರಡು ಮೂರು ವರ್ಷಗಳ ಹಿಂದೆ ನಡೆದಿದೆ. ಕನ್ನಡದ ಬಗ್ಗೆ ಹೇಳುತ್ತಾ ಹೋದರೆ ಪುಟಗಳು ಸಾಲದು.

‎ಆದರೆ ಕನ್ನಡದ ಬಗ್ಗೆ ಎಲ್ಲರಲ್ಲಿ ಇರಲೇಬೇಕಾದ ತಿಳುವಳಿಕೆ ಈ ಕೆಳಗಿನ ಸಾಲಿನಲ್ಲಿ ತಿಳಿಸಿ ಘೋಷ ವಾಕ್ಯದ ಕಡೆಗೆ ಸಾಗೋಣ.ಆ ಸಾಲು ಇಂತಿದೆ ‘ಕನ್ನಡ ದ್ರಾವಿಡ ನುಡಿ ಕುಟುಂಬಕ್ಕೆ ಸೇರಿದ ಒಂದು ಪ್ರಮುಖ ನುಡಿ ಇತರೆ ಪ್ರಮುಖ ದ್ರಾವಿಡ ನುಡಿಗಳು ತೆಲುಗು ತಮಿಳು ಮತ್ತು ಮಲಯಾಳಂ’.

‎ಗಾಂಧಿಯವರು ಬ್ರಿಟಿಷರನ್ನು ಓಡಿಸಿ ಪ್ರಜಾಪ್ರಭುತ್ವ ತರಲು ಹೋರಾಟಕ್ಕೆ ಇಳಿದ ಆರಂಭದಲ್ಲಿ ಇಂಗ್ಲಿಷ್ ವಿರುದ್ಧ ಒಂದು ಭಾಷೆ ಬೇಕು ಎಂದು ಅವರ ಮಾತೃಭಾಷೆ ಗುಜರಾತಿಯನ್ನು ಇತರರಿಗೆ ಕಲಿಸಲು ಮುಂದಾಗಲಿಲ್ಲ ಅವರು ಮುಂದಾಗಿದ್ದು ಹಿಂದಿ ಕಲಿಸಲು ಅದಕ್ಕಾಗಿ ಅವರು 1918ರಲ್ಲಿ ಇಂದಿನ ಚೆನ್ನೈ ಅಂದಿನ ಮದ್ರಾಸ್ನಲ್ಲಿ ‘ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ ತೆರೆದರು. ಗಾಂಧಿ ಸ್ವಾರ್ಥಿಯಾಗಿದ್ದರೆ ಗುಜರಾತಿ ಪ್ರಚಾರ ಸಭಾ ತೆರೆಯುತ್ತಿದ್ದರು ಆದರೆ ಅವರಿಗೆ ಬ್ರಿಟಿಷರ ಓಡಿಸಿ ಪ್ರಜಾಪ್ರಭುತ್ವ ತರುವುದು ಗುರಿಯಾಗಿತ್ತೆ ವಿನಹ ಇನ್ನು ಯಾವುದೇ ಸ್ವಾರ್ಥವಲ್ಲ. ಗಾಂಧಿ ಫೋಟೋ ಇಟ್ಟುಕೊಂಡು ಮತ್ತು ಅವರು ಕಟ್ಟಿದ ಸಂಸ್ಥೆಗಳ ಇಟ್ಟುಕೊಂಡು ಪರ ವಿರೋಧ ರಾಜಕೀಯ ಮಾಡುತ್ತಿರುವ ಕಿಡಿಗೇಡಿಗಳಿಗೆ ಸ್ವಾರ್ಥವೇ ಮುಖ್ಯವಾಗಿದೆ. 1964ರ ವರೆಗೂ ಖಾಸಗಿ ದೇಣಿಗೆಯಲ್ಲಿ ನಡೆಯುತ್ತಿದ್ದ ಈ ಸಂಸ್ಥೆಯನ್ನು ಇಂಡಿಯಾ ಸರ್ಕಾರ ಇಲ್ಲಿಯವರೆಗೂ ಸಾವಿರಾರು ಕೋಟಿ ನಮ್ಮ ತೆರಿಗೆ ಹಣ ನೀಡಿ ಇದನ್ನು ರಾಷ್ಟ್ರೀಯ ಮುಖ್ಯ ಸಂಸ್ಥೆಗಳಲ್ಲಿ ಒಂದು ಅಂತ ಮಾಡಿ ಇದರ ಕಚೇರಿಗಳನ್ನು ದಕ್ಷಿಣದ ಎಲ್ಲಾ ರಾಜ್ಯಗಳಲ್ಲೂ ತೆರೆದು ಹಿಂದಿ ಹೇರಿಕೆ ಕಾರಣವಾಗಿದೆ.

‎ಕರ್ನಾಟಕ ಏಕೀಕರಣದ ಗುರಿ ಇಟ್ಟುಕೊಂಡು 1890 ರಲ್ಲಿ ಶುರುವಾದ ‘ಕರ್ನಾಟಕ ವಿದ್ಯಾವರ್ಧಕ ಸಂಘ’ ಇರುವ ಧಾರವಾಡದಲ್ಲಿಯೇ ‘ಕರ್ನಾಟಕ ರಾಜ್ಯ ಮಟ್ಟದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ ಕಚೇರಿ ಕೂಡ ಸ್ಥಾಪಿತವಾಗಿದೆ ಇದು ಎಂತಹ ದುರಂತ ಅಲ್ಲವೇ? ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕರ್ನಾಟಕದ ಮುಖ್ಯ ಕಚೇರಿ ಶಾಶ್ವತವಾಗಿ ಬಂದ್ ಮಾಡಿ ಈ ಕಟ್ಟಡವನ್ನು ಕನ್ನಡ ಪದ ಕಟ್ಟುವ ಕಚೇರಿ ಯಾಗಿ ಬದಲಾಯಿಸಬೇಕೆಂದು ಈ ವರ್ಷದ ಘೋಷವಾಕ್ಯ ಇಟ್ಕೊಂಡು ನಾವುಗಳು ಸೆಪ್ಟೆಂಬರ್ 14ರ ಹಿಂದಿ ದಿವಸ್ ವಿರೋಧ ಮಾಡೋಣ ಎಂದು ಈ ಮೂಲಕ ನಿಮ್ಮೆಲ್ಲರಲ್ಲು ಮನವಿ ಮಾಡಿಕೊಳ್ಳುತ್ತಿದ್ದೇವೆ.

✍️ ಅಬಿ ಒಕ್ಕಲಿಗ
ಮುಂದಾಳು
ನಾವು Dravida ಕನ್ನಡಿಗರು ಚಳುವಳಿ

You cannot copy content of this page

Exit mobile version