Sunday, July 27, 2025

ಸತ್ಯ | ನ್ಯಾಯ |ಧರ್ಮ

ಹುಡಾ ಅಧ್ಯಕ್ಷ ಸ್ಥಾನ ಮುಸ್ಲಿಂ ಜನಾಂಗಕ್ಕೆ ನೀಡಲಿ – ಅಕ್ಮಲ್ ಜಾವೀದ್


ಹಾಸನ : ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಮುಸ್ಲಿಂ ಜನಾಂಗದ ಸೈಯದ್ ತಾಜಿಂ ಬಿನ್ ಸೈಯದ್ ಅಸ್ಲಂ ಇವರಿಗೆ ನೀಡುವಂತೆ ವೀರ ಕನ್ನಡಿಗ ಟಿಪ್ಪು ಸೇನೆ ಸಂಸ್ಥಾಪಕ ಅಧ್ಯಕ್ಷ ಅಕ್ಮಲ್ ಜಾವೀದ್ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ಧರಾಮಯ್ಯನವರೇ ಜಾತ್ಯತೀತ ಅಹಿಂದ ಸಮಾಜವಾದಿ ನಾಯಕರಿಗೆ ನಮ್ಮ ನಮಸ್ಕಾರಗಳು ಹಾಗೂ ನಮ್ಮ ಬೇಡಿಕೆ ಗೌರವಾನ್ವಿತ ಸಿದ್ದರಾಮಯ್ಯನವರೇ ತಾವು ನುಡಿಯುವಂತೆ ನಡೆಯುವ ನಾಯಕರು ಅನ್ನುವ ನಂಬಿಕೆಯಲ್ಲಿ ರಾಜ್ಯದ ಜನತೆ ಸುಮಾರು ಒಂದುವರೆ ಕೋಟಿ ಮುಸ್ಲಿಂ ಸಮುದಾಯ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಮುಸ್ಲಿಂ ಸಮುದಾಯ ಮತಗಳು ಪ್ರಮುಖವಾಗಿವೆ. ಮುಸ್ಲಿಂ ಸಮುದಾಯ ಸಂಪೂರ್ಣ ಮತ ನೀಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಾಗಿರುತ್ತಾರೆ. ಅದರಲ್ಲೂ ಹಾಸನದಲ್ಲಿ ಮುಸ್ಲಿಂ ಜನಾಂಗ 130000 ಮತಗಳಲ್ಲಿ ಶೇಕಡ 90 ಭಾಗ ಮತಗಳು ಶ್ರೇಯಸ್ ಪಟೇಲ್ ಅವರ ಗೆಲುವಿಗೆ ಪ್ರಮುಖ ಕಾರಣವಾಗಿವೆ ಎಂದರು. ಇದನ್ನೆಲ್ಲಾ ತಾವು ಅರಿತು ನಗರದ ಜನರು ತಮ್ಮಲ್ಲಿ ಒಂದು ಬೇಡಿಕೆ ಇಟ್ಟಿದ್ದಾರೆ.

ಬೇಡಿಕೆ ಏನೆಂದರೆ ಹಾಸನ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಮುಸ್ಲಿಂ ಜನಾಂಗದ ಸೈಯದ್ ತಾಜಿಂ ಬಿನ್ ಸಯ್ಯದ್ ಅಸ್ಲಾಂ ರವರಿಗೆ ನೀಡುವಂತೆ ಮನವಿ ಮಾಡಿರುತ್ತಾರೆ. ಇಡೀ ಸಮುದಾಯದ ಮತ್ತು ಸರ್ವ ಧರ್ಮಿಯರು ಕೇಳಿಕೊಂಡಿರುತ್ತಾರೆ, ಆದರೆ ತಾವು ಬಹಳ ತಡವಾಗಿ ನಮ್ಮ ಸಮಾಜಕ್ಕೆ ಯಾವುದೇ ಒಂದು ನಿಗಮ ಮಂಡಳಿಗಳಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಶ್ರಮಿಸಲು ಯಾವುದೇ ಒಂದು ಹುದ್ದೆಯನ್ನು ನೀಡುತ್ತಿಲ್ಲ ಎಂದು ದೂರಿದರು. ನಮ್ಮ ಹಾಸನದ ಮುಸ್ಲಿಂ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ ಎಂದರು ತಪ್ಪಾಗಲಾರದು, ತಾವು ದಯಮಾಡಿ ಈ ನಮ್ಮ ಬೇಡಿಕೆಯನ್ನು ತಿರಸ್ಕರಿಸದೆ ಇದನ್ನು ಸೂಕ್ಷ÷್ಮವಾಗಿ ಪರಿಗಣಿಸಿ ಸ್ಥಳೀಯರಾದ ಮಾನ್ಯ ಸೈಯದ್ ತಾಜಿಂ ಅವರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಇವರಲ್ಲಿ ಯಾವುದೇ ಲೋಪದೋಷವಿದ್ದು, ಭ್ರಷ್ಟಾಚಾರದ ಆರೋಪಗಳಿದ್ದರೆ ಈ ವ್ಯಕ್ತಿಗೆ ಪರಿಗಣಿಸದೆ ಮುಸ್ಲಿಂ ಸಮುದಾಯದ ಕಟ್ಟ ಕಡೆಯ ಸಾಮಾನ್ಯ ಕಾರ್ಯಕರ್ತನಾಗಲಿ ನಿಮ್ಮ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿರಲಿ ಅಂತಹ ಒಂದು ಮುಸ್ಲಿಂ ವ್ಯಕ್ತಿಗೆ ತಾವು ಅಧ್ಯಕ್ಷ ಸ್ಥಾನವನ್ನು ನೀಡಬೇಕಾಗಿ ತಮ್ಮಲ್ಲಿ ನಾವು ವಿನಂತಿಸಿಕೊಳ್ಳುತ್ತೇವೆ, ಮುಸ್ಲಿಂ ಸಮುದಾಯ ಸುಮಾರು 40 ವರ್ಷಗಳಿಂದ ಹಾಸನ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಿಂದ ಜೊತೆಗೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಮಯದಲ್ಲೂ ಕೂಡ ಮುಸ್ಲಿಂ ಸಮುದಾಯ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿರುತ್ತಾರೆ ಜನತಾದಳದಿಂದ 27 ವರ್ಷದ ಹಿಂದೆ ಸರ್ದಾರ್ ಪಾಷಾ ರವರಿಗೆ ಅವಕಾಶ ನೀಡಿದ್ದರು ಅಲ್ಲಿಂದ ಇಲ್ಲಿಯ ತನಕ ಕಾಂಗ್ರೆಸ್ ಹಾಸನ ಜಿಲ್ಲೆಯ ಮುಸ್ಲಿಮರಿಗೆ ಕೊಟ್ಟ ಅಧಿಕಾರ ಶೂನ್ಯ ಎಂದು ಆರೋಪಿಸಿದರು. ಜಿಲ್ಲೆ ಮತ್ತು ರಾಜ್ಯದ ಪ್ರಮುಖ ಧಾರ್ಮಿಕ ಸಂಸ್ಥೆಗಳು ಸೈಯದ್ ತಾಸಿಮ್ ರವರನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಲು ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ರವರಿಗೆ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ರವರಿಗೆ ಮನವಿ ಸಲ್ಲಿಸಿರುತ್ತಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಆದಿಲ್, ಅಮಿದ್, ಸಯ್ಯಾದ್ ಇಲ್ಯಾದ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page