Home ವಿದೇಶ ಅಮೆರಿಕದಲ್ಲಿ ಹೆಲೆನಾ ಚಂಡಮಾರುತದ ಅಬ್ಬರ: 44 ಸಾವು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ

ಅಮೆರಿಕದಲ್ಲಿ ಹೆಲೆನಾ ಚಂಡಮಾರುತದ ಅಬ್ಬರ: 44 ಸಾವು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ

0

ಹೆಲೆನಾ ಚಂಡಮಾರುತವು ಆಗ್ನೇಯ ಅಮೆರಿಕಾದಲ್ಲಿ ಹಾನಿಯನ್ನುಂಟುಮಾಡುತ್ತಿದೆ. ಚಂಡಮಾರುತದಿಂದಾಗಿ ಕನಿಷ್ಠ 44 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇ‌ದರಿಂದ ಆಗಿರುವಒಟ್ಟು ಆಸ್ತಿ ಹಾನಿ 15-26 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಫ್ಲೋರಿಡಾ, ಜಾರ್ಜಿಯಾ, ಉತ್ತರ ಕೆರೊಲಿನಾ, ದಕ್ಷಿಣ ಕೆರೊಲಿನಾ ಮತ್ತು ವರ್ಜೀನಿಯಾಗಳು ಕೆಟಗರಿ – 4 ಚಂಡಮಾರುತಗಳಿಂದ ಹೆಚ್ಚು ಪ್ರಭಾವಿತವಾಗಿವೆ.

ಹೆಲೆನಾ ಚಂಡಮಾರುತಕ್ಕೆ ಮೂವರು ಅಗ್ನಿಶಾಮಕ ಸಿಬ್ಬಂದಿ, ಮಹಿಳೆ ಮತ್ತು ಒಂದು ತಿಂಗಳ ಮಗು ಸೇರಿದಂತೆ ಸುಮಾರು 44 ಜನರು ಬಲಿಯಾಗಿದ್ದಾರೆ. ಜಾರ್ಜಿಯಾದ ಹಲವು ಆಸ್ಪತ್ರೆಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದರೆ, ಯುನಿಕೊಯ್ ಕೌಂಟಿ ಆಸ್ಪತ್ರೆ ಜಲಾವೃತಗೊಂಡ ನಂತರ ಹೆಲಿಕಾಪ್ಟರ್ ಸಹಾಯದಿಂದ 54 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಅದೇ ರೀತಿ, ಟೆನ್ನೆಸ್ಸಿಯ ನ್ಯೂಪೋರ್ಟ್ ಬಳಿ 7,000 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಚಂಡಮಾರುತವು ಫ್ಲೋರಿಡಾ ಕರಾವಳಿಯನ್ನು ದಾಟುತ್ತಿದ್ದಂತೆ ಗಂಟೆಗೆ 225 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ, ಅಟ್ಲಾಂಟಾದಲ್ಲಿ 48 ಗಂಟೆಗಳಲ್ಲಿ 28.24 ಸೆಂ.ಮೀ ಮಳೆ ದಾಖಲಾಗಿದೆ.. 1886 ರಲ್ಲಿ 24.36 ಸೆಂ.ಮೀ. ದಾಖಲೆ ಮುರಿದಿದೆ ಎಂದರು. ಚಂಡಮಾರುತದಿಂದಾಗಿ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ರಜೆ ಘೋಷಿಸಲಾಗಿದೆ, ಆದರೆ ವಿಮಾನ ಸೇವೆಗಳನ್ನು ಪುನಃಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರ ಹೊರತಾಗಿಯೂ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳು ತೀವ್ರವಾಗಿ ಮುಂದುವರೆದಿದೆ ಎಂದು ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಎಲ್ಲರೂ ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

You cannot copy content of this page

Exit mobile version