Thursday, January 23, 2025

ಸತ್ಯ | ನ್ಯಾಯ |ಧರ್ಮ

ಹೆಂಡತಿಯನ್ನು ಭೀಕರವಾಗಿ ಕೊಂದು, ದೇಹವನ್ನು ಕುಕ್ಕರ್‌ ಬಳಸಿ ಬೇಯಿಸಿದ ಮಾಜಿ ಸೈನಿಕ!

ನಿವೃತ್ತ ಸೈನಿಕನೊಬ್ಬ ತನ್ನ ಹೆಂಡತಿಯನ್ನೇ ಕ್ರೂರವಾಗಿ ಕೊಂಡು ದೇಹದ ಭಾಗಗಳನ್ನು ತುಂಡು ಮಾಡಿ ಕುಕ್ಕರಿನಲ್ಲಿ ಬೇಯಿಸಿ ನಂತರ ಅದನ್ನು ಒಣಗಿಸಿ ಕೆರೆಗೆ ಎಸೆದಿರುವ ಘಟನೆಯೊಂದು ಹೈದರಾಬಾದ್​ನ ಮೀರ್​ಪೇಟ್ ಎನ್ನುವಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ಮಹಿಳೆಯನ್ನು ವೆಂಕಟ ಮಾಧವಿ (35) ಎಂದು ಗುರುತಿಸಲಾಗಿದೆ.

ಗುರುಮೂರ್ತಿ ಹಾಗೂ ಮಾಧವಿ ಹದಿಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಕೆಲ ವರ್ಷಗಳಿಂದ ಕುಟುಂಬವು ಜಿಲ್ಲಾಲಗುಡ ನ್ಯೂ ವೆಂಕಟೇಶ್ವರ ಕಾಲನಿಯಲ್ಲಿ ಬಾಡಿಗೆ
ಮನೆ ಮಾಡಿಕೊಂಡು ವಾಸವಿದೆ. ಅಲ್ಲದೆ ಗುರುಮೂರ್ತಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದು ಮದುವೆಯಾದ ಆರಂಭದಲ್ಲಿ ದಂಪತಿ ಖುಷಿ ಖುಷಿಯಲ್ಲೇ ಇದ್ದರು.

ಇತ್ತೀಚಿನ ಕೆಲವು ವರ್ಷಗಳಿಂದ ಕೆಲ ವಿಚಾರಕ್ಕೆ ದಂಪತಿಗಳ ನಡುವೆ ವೈಮನಸ್ಸು ಮೂಡಿದೆ ಅಲ್ಲದೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳಗಳೂ ನಡೆಯುತ್ತಿತ್ತು ಎನ್ನಲಾಗಿದೆ. ಬಳಿಕ ಮಾಧವಿಯ ಪೋಷಕರು ಗುರುಮೂರ್ತಿಗೆ ಕರೆ ಮಾಡಿ ಮಾಧವಿ ಬಗ್ಗೆ ವಿಚಾರಿಸಿದ್ದಾರೆ ಅದಕ್ಕೆ ಪ್ರತಿಕ್ರಿಯಿಸಿದ ಗುರುಮೂರ್ತಿ ನನ್ನ ಬಳಿ ಹೇಳದೆ ಕೇಳದೆ ಮನೆ ಬಿಟ್ಟು ಹೋಗಿದ್ದಾಳೆ ಎಲ್ಲಿಗೆ ಹೋಗಿದ್ದಾಳೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ.

ಇದರಿಂದ ಗಾಬರಿಗೊಂಡ ಪೋಷಕರು ಮಾಧವಿಗೆ ಕರೆ ಮಾಡಿದ್ದಾರೆ ಆದರೆ ಆಕೆಯ ಫೋನ್ ಸ್ವಿಚ್ ಆಫ್ ಬರುತ್ತಿತ್ತು ಇದರಿಂದ ಹೆದರಿದ ಪೋಷಕರು ತನ್ನ ಸಂಬಂಧಿಕರು ಹಾಗೂ ಮಾಧವಿ ಪರಿಚಯಸ್ಥರ ಬಳಿ ವಿಚಾರಿಸಿದ್ದಾರೆ ಆದರೆ ಎಲ್ಲೂ ಮಾಧವಿ ಪತ್ತೆಯಾಗಿಲ್ಲ.

ಭಯಗೊಂಡ ಪೋಷಕರು ಮತ್ತೆ ಗುರುಮೂರ್ತಿಗೆ ಕರೆ ಮಾಡಿ ಮಾಧವಿ ಎಲ್ಲೂ ಕಾಣುತ್ತಿಲ್ಲ, ಎಂದು ಗಾಬರಿಯಿಂದ ಕರೆ ಮಾಡಿದ್ದಾರೆ ಬಳಿಕ ಠಾಣೆಯಲ್ಲಿ ನಾಪತ್ತೆ ಕುರಿತು ದೂರು ನೀಡುವ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದಾರೆ, ಅದರಂತೆ ಪತಿ ಗುರುಮೂರ್ತಿ ಕೂಡ ಪೋಷಕರ ಜೊತೆಗೆ ತೆರಳಿ ಜನವರಿ18 ರಂದು ತನ್ನ ಪತ್ನಿ ನಾಪತ್ತೆಯಾಗಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹತ್ತಿರದ ಪೊಲೀಸ್ ಠಾಣೆಗೆ ಮಾಧವಿ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ ಜೊತೆಗೆ ವೆಂಕಟೇಶ್ವರ ಕಾಲನಿಗೆ ಬಂದು ಮಾಧವಿ ವಾಸವಿದ್ದ ಮನೆಗೆ ಬಂದು ಪತಿ ಹಾಗೂ ಮಕ್ಕಳ ಬಳಿ ಮಾಹಿತಿ ಕಲೆ ಹಾಕಿದ್ದಾರೆ, ಎಲ್ಲ ಕಡೆ ಬಾವಿ, ನದಿ, ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಎಲ್ಲಾದರೂ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆಯೂ ತನಿಖೆ ನಡೆಸಿದ್ದಾರೆ ಆದರೆ ಎಲ್ಲೂ ಒಂದು ಸುಳಿವೂ ಸಿಕ್ಕಿರಲಿಲ್ಲ.

ಇದರ ನಡುವೆ ಪತಿ ಗುರುಮೂರ್ತಿ ಮೇಲೆ ಪೊಲೀಸರು ಒಂದು ಕಣ್ಣಿಟ್ಟಿದ್ದರು ಆತನ ನಡವಳಿಕೆ ಮೇಲೆ ಅನುಮಾನಗೊಂಡ ಪೊಲೀಸರು ಆತನನ್ನು ಮತ್ತೆ ವಿಚಾರಣೆ ನಡೆಸಲು ಠಾಣೆಗೆ ಕರೆಸಿದ್ದಾರೆ ಈ ವೇಳೆ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ ಗುರುಮೂರ್ತಿ ಗೆ ಪೊಲೀಸರ ದಾಟಿಯಲ್ಲೇ ವಿಚಾರಣೆ ನಡೆಸಿದ್ದಾರೆ, ಈ ವೇಳೆ ತನ್ನ ಕೃತ್ಯವನ್ನು ವಿವರಿಸಿದ್ದಾನೆ ಇದನ್ನು ಕೇಳಿದ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ.

ಪೊಲೀಸ್ ವಿಚಾರಣೆ ವೇಳೆ ಗುರುಮೂರ್ತಿ ತನ್ನ ಪತ್ನಿಯ ಮೇಲೆ ನನಗೆ ಅನುಮಾನವಿತ್ತು ಎಂದಿದ್ದಾನೆ. ಇದೇ ವಿಚಾರಕ್ಕೆ ನಮ್ಮಿಬ್ಬರ ನಡುವೆ ಜಗಳಗಳೂ ನಡೆಯುತ್ತಿತ್ತು. ಅದೇ ರೀತಿ ಜನವರಿ 16ರಂದು ಇಬ್ಬರ ನಡುವೆ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ಹೋದ ಬಳಿಕ ನಾನು ಪತ್ನಿಯನ್ನು ಕೊಲೆ ಮಾಡಿದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಇನ್ನು ಈ ಸಂಗತಿ ಹೊರಗಿನವರಿಗೆ ಗೊತ್ತಾಗುತ್ತದೆ ಎಂದು ಭಯಗೊಂಡು ಪತ್ನಿಯ ದೇಹದ ಭಾಗವನ್ನು ತುಂಡರಿಸಿ ಬಳಿಕ ಕುಕ್ಕರಿನಲ್ಲಿ ಬೇಯಿಸಿ ನಂತರ ಅದನ್ನು ಒಣಗಿಸಿ ಸುಟ್ಟು ಹಾಕಿ ಅದರ ಬೂದಿಯನ್ನು ಕೆರೆ ಹಾಗೂ ಚರಂಡಿಗೆ ಎಸೆದು ಯಾವುದೇ ಕುರುಹು ಸಿಗದಂತೆ ಮಾಡಿದೆ ಜೊತೆಗೆ ಯಾರಿಗೂ ಗೊತ್ತಾಗದಂತೆ ನಟಿಸಿದೆ ಎಂದು ಹೇಳಿಕೊಂಡಿದ್ದಾನೆ.

ಪತ್ನಿಯ ಹತ್ಯೆಗೂ ಮುನ್ನ ಇದೇ ಪ್ರಯೋಗವನ್ನು ನಾಯಿಯ ಮೇಲೂ ಪ್ರಯೋಗಿಸಿರುವುದಾಗಿ ಆರೋಪಿ ತಿಳಿಸಿದ್ದಾನೆ. ಅದು ಯಶಸ್ವಿಯಾದ ನಂತರ ಆರೋಪಿ ಈ ಪ್ರಯೋಗವನ್ನು ಹೆಂಡತಿಗೂ ಬಳಸಿದ್ದಾನೆ.

ಕೊಲೆಗೂ ಮೊದಲು ಯೂಟ್ಯೂಬ್‌ ಮೂಲಕ ಸಾಕ್ಷ್ಯ ನಾಶ ಮಾಡಲು ಏನೆಲ್ಲ ಮಾಡಬಹುದು ಎನ್ನುವುದನ್ನು ಆರೋಪಿ ಗುರುಮೂರ್ತಿ ನೋಡಿದ್ದ.

ಸದ್ಯ ಆರೋಪಿ ಗುರು ಮೂರ್ತಿಯನ್ನು ಪೊಲೀಸರು ಬಂಧಿಸಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page