Wednesday, August 20, 2025

ಸತ್ಯ | ನ್ಯಾಯ |ಧರ್ಮ

ಹೆಂಡತಿ ಕೊಲ್ಲಲು ಗಂಡನ ಸಂಚು:  ಹೆಂಡತಿಯೊಂದಿಗೆ ಅತ್ತೆ ಬಲಿ

ಬೆತುಲ್: ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲ್ಲಲು ಕಬ್ಬಿಣದ ಬಾಗಿಲಿಗೆ ವಿದ್ಯುತ್ ತಂತಿಯನ್ನು ಹಾಕಿದ್ದು, ಆತನ ಹೆಂಡತಿ ಮತ್ತು ಅತ್ತೆ ಬಾಗಿಲನ್ನು ಮುಟ್ಟಿದ ಕಾರಣ ವಿದ್ಯುತ್ ಆಘಾತದಿಂದ ಸಾವನ್ನಪ್ಪಿರುವ ಘಟನೆ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸೈಖೇಡಾ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಈ ಕುರಿತು ಕೊತ್ವಾಲಿ ಪೊಲೀಸ್‌ ಠಾಣೆಯ ಉಸ್ತುವಾರಿ ಅಪಲಾ ಸಿಂಗ್‌ ಅವರು ಮಾಹಿತಿ ನೀಡಿದ್ದು, ವ್ಯಕ್ತಿಯು ತೀರಾ ಮಧ್ಯಪಾನ ಮಾಡುತ್ತಿದ್ದ ಹಿನ್ನಲೆಯಲ್ಲಿ, ಆತನಿಗೂ ಮತ್ತು ಹೆಂಡತಿಗೂ ಜಗಳಕ್ಕೆ ಕಾರಣವಾಗುತ್ತಿತ್ತು. ಹೀಗಾಗಿ ಭಾನುವಾರ ರಾತ್ರಿ, ದಂಪತಿಗಳು ಮತ್ತೆ ಜಗಳವಾಡಿದ್ದು, ಹೆಂಡತಿ ತನ್ನ ತಾಯಿಯ ಮನೆಗೆ ಹೋಗಿದ್ದಳು ಎಂದು ತಿಳಿಸಿದರು.

ಈ ಕಾರಣ ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಕೋಪಗೊಂಡ ವ್ಯಕ್ತಿ, ತನ್ನ ಅತ್ತೆಯ ಮನೆಗೆ ಹೋಗಿ ಅಲ್ಲಿ ಕಬ್ಬಿಣದಿಂದ ಮಾಡಿದ್ದ ಮುಖ್ಯ ಪ್ರವೇಶ ದ್ವಾರವನ್ನು ವಿದ್ಯುತ್ ತಂತಿಯಿಂದ ಜೋಡಿಸಿ ಪತ್ನಿಯನ್ನು ಕೊಂದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ವೇಳೆ ಅವರ ಅತ್ತೆ ಬಾಗಿಲಿನ ಸಂಪರ್ಕಕ್ಕೆ ಬಂದಿದ್ದು, ಬಾಗಿಲನ್ನು ಮುಟ್ಟಿದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಯ ಬಳಿಕ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದು, ಆತನನ್ನು ಹಿಡಿಯುವ ಪ್ರಯತ್ನ ಮುಂದುವರೆದಿದೆ ಹಾಗೂ ಆತನ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page