Home ಲೋಕಸಭೆ ಚುನಾವಣೆ -2024 ಪ್ರಧಾನಿ ಜೈಲು ಸೇರಲಿದ್ದಾರೆ ಎಂದು ನಾನು ಹೇಳಿಲ್ಲ: ಲಾಲು ಪುತ್ರಿ ಮೀಸಾ

ಪ್ರಧಾನಿ ಜೈಲು ಸೇರಲಿದ್ದಾರೆ ಎಂದು ನಾನು ಹೇಳಿಲ್ಲ: ಲಾಲು ಪುತ್ರಿ ಮೀಸಾ

0

ಪಟ್ನಾ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜೈಲು ಸೇರಲಿದ್ದಾರೆ ಎಂದು ಅವರನ್ನು ಗುರಿಯಾಗಿಸಿ ನಾನು ಯಾವುದೇ ಹೇಳಿಕೆ ನೀಡಿಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ಹಿರಿಯ ಪುತ್ರಿ ಮೀಸಾ ಭಾರತಿ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪ್ರಧಾನಿ ಮೋದಿ ಅವರ ಜೈಲು ಸೇರಲಿದ್ದಾರೆ ಎಂದು ಮೀಸಾ ಅವರು ಹೇಳಿದ್ದಾಗಿ ವರದಿಯಾಗಿತ್ತು. ಪಾಟಲಿಪುತ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಅವರು ಈಚೆಗೆ ನಡೆದ ಸಾರ್ವಜನಿಕ ಸಭೆಯಲ್ಲಿ ಇಂಥ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರಧಾನಿ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಿಲ್ಲ. ಮಾಧ್ಯಮಗಳು ನನ್ನ ಪೂರ್ಣ ಹೇಳಿಕೆಯನ್ನು ಪ್ರಸಾರ ಮಾಡದೆ, ತಿರುಚಿದ ತುಣಕನ್ನು ಮಾತ್ರ ಬಿತ್ತರಿಸಿವೆ. ಅದು ಬಿಜೆಪಿಯ ಕಾರ್ಯಸೂಚಿ’ ಎಂದು ಮೀಸಾ ಆರೋಪಿಸಿದ್ದಾರೆ.

ಚುನಾವಣಾ ಬಾಂಡ್‌ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಮತ್ತು ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಈ ಬಗ್ಗೆ ಸಮಗ್ರ ತನಿಖೆ ನಡೆಸುವ ಬಗ್ಗೆ ಅಷ್ಟೇ ನಾನು ಮಾತನಾಡಿದ್ದೇನೆ. ಮೋದಿ ಬಗ್ಗೆ ಇಂಥ ಹೇಳಿಕೆ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.

You cannot copy content of this page

Exit mobile version