ಪುಣೆ, ಅಕ್ಟೋಬರ್ 20: ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದದ ಪರಿಹಾರಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದ್ದೇನೆ ಮತ್ತು ನಿಮಗೆ ನಂಬಿಕೆ ಇದ್ದರೆ ದೇವರು ಒಂದು ಮಾರ್ಗವನ್ನು ತೋರಿಸುತ್ತಾನೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ.
ಖೇಡ್ ತಾಲೂಕಿನ ಕನ್ಹರಸರ್ ಗ್ರಾಮದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇತ್ಯರ್ಥವಾಗದ ಪ್ರಕರಣಗಳು ನಮ್ಮಲ್ಲಿ ಬರುವುದು ಅಪರೂಪ. ಅಯೋಧ್ಯೆಯ ವಿಷಯವೂ ಹಾಗೆಯೇ.
ನಾನು ಮೂರು ತಿಂಗಳಿನಿಂದ ಈ ಪ್ರಕರಣ ನನ್ನ ಬಳಿಯಿತ್ತು . ನಾನು ದೇವರ ಮುಂದೆ ಕುಳಿತು ಪ್ರಕರಣಕ್ಕೆ ಪರಿಹಾರ ತೋರಿಸುವಂತೆ ಕೇಳಿಕೊಂಡೆ” ಎಂದು ಸಿಜೆಐ ಹೇಳಿದರು. ನಾನು ಪ್ರತಿನಿತ್ಯ ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದರು.
‘ನಂಬಿಕೆ, ವಿಶ್ವಾಸ ಇದ್ದರೆ ದೇವರು ಯಾವಾಗಲೂ ದಾರಿ ತೋರಿಸುತ್ತಾನೆ’ ಎಂದರು.
ಆಗಿನ ಸಿಜೆಐ ರಂಜನ್ ಗೊಗೊಯ್ ನೇತೃತ್ವದ ಐವರು ಸದಸ್ಯರ ಪೀಠವು 2019ರ ನವೆಂಬರ್ 9ರಂದು ಶತಮಾನದಿಂದ ವಿವಾದದಲ್ಲಿದ್ದ ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿತು. ಈ ವೇಳೆ ಡಿವೈ ಚಂದ್ರಚೂಡ್ ಕೂಡ ಆ ಪೀಠದ ಸದಸ್ಯರಾಗಿದ್ದರು.